‘ಮೋಟಿ’ ಎಂದವರಿಗೆ ಸ್ವರಾ ಚಾಟಿ: ದಪ್ಪವಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ ಎಂದ ಟ್ರೋಲರ್‌ಗಳಿಗೆ ತಿರುಗೇಟು ನೀಡಿದ ನಟಿ swara bhaskar

ಕೆಲವರು ಸ್ವರಾಗೆ ‘ಮೋಟಿ, ಮೋಟಿ’ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ನಟಿ ವಿರೋಧಿಸಿದ್ದರು, ಅದು ಹಾಗೆಯೇ ಮುಂದುವರಿದಿತ್ತು. ಈ ಬಾರಿ ನಟಿ ಸ್ವರಾ ಭಾಸ್ಕರ್ ಟ್ರೋಲರ್‌ಗಳಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.
swara bhaskar
ಸ್ವರಾ ಭಾಸ್ಕರ್​
Published on: 

ಹಿಂದಿಯ ‘ತನು ವೆಡ್ಸ್ ಮನು ರಿರ್ಟನ್ಸ್’, ‘ಪ್ರೇಮ್ ರತನ್ ಧನ್ ಪಾಯೋ’ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಸ್ವರಾ ಭಾಸ್ಕರ್ ಕೆಲ ವರ್ಷಗಳಿಂದ ದೈಹಿಕ ನಿಂದನೆಗೊಳಗಾಗುತ್ತಿದ್ದಾರೆ. 2023ರಲ್ಲಿ ಫಾಹದ್ ಜತೆ ಮದುವೆಯಾಗಿದ್ದ ಅವರು ಅದೇ ವರ್ಷ ರಬಿಯಾ ಎಂಬ ಹೆಸರಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮೊದಲಿಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅವರು ತಾಯಿಯಾದ ಬಳಿಕ ದೇಹದ ತೂಕ ಹೆಚ್ಚಳವಾಗಿದೆ. ಅದನ್ನೇ ಗುರಿಯಾಗಿಸಿಕೊಂಡ ಕೆಲವರು ಸ್ವರಾಗೆ ‘ಮೋಟಿ, ಮೋಟಿ’ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ನಟಿ ವಿರೋಧಿಸಿದ್ದರು, ಅದು ಹಾಗೆಯೇ ಮುಂದುವರಿದಿತ್ತು. ಈ ಬಾರಿ ನಟಿ ಸ್ವರಾ ಭಾಸ್ಕರ್ ಟ್ರೋಲರ್‌ಗಳಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಡೆಸಿಕೊಡುವ ಹಿಂದಿಯ ‘ರೈಸ್ ಆ್ಯಂಡ್ ಫಾಲ್’ ಸೀಸನ್ 2’ರಲ್ಲಿ ಸ್ವರಾ ಭಾಗವಹಿಸಿದ್ದಾರೆ. ಟೀಕಕಾರರಿಗೆ ಎದುರು ಉತ್ತರ ನೀಡಲು ಅವರು ‘ಮೋಟಿ’ ಎಂದು ಬರೆದಿರುವ ಬ್ಲೌಸ್ ಧರಿಸಿ ಶೋನಲ್ಲಿ ಭಾಗವಹಿಸಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಿದ ಸ್ವರಾ ‘ನನ್ನ ಮಗಳು ಜನಿಸಿ ಮೂರು ವರ್ಷಗಳಾಯಿತು. ಅಂದಿನಿಂದ ನನ್ನ ವಿರುದ್ಧ ಜಾಲತಾಣ ಸೇರಿ ಇತರ ಕಡೆ ನಿರಂತರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅವಳು ದಪ್ಪವಾಗಿದ್ದಾಳೆ. ಎಮ್ಮೆ, ಹಸು, ಆನೆ.. ಹೀಗೆ ಹಲವು ಪ್ರಾಣಿಗಳಿಗೆ ಹೋಲಿಕೆ ಮಾಡಿ, ಮಾತನಾಡುತ್ತಾರೆ. ದಪ್ಪವಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದಕ್ಕಾಗಿಯೇ ಇಂದು ‘ಮೋಟಿ’ ಹೆಸರಿನಲ್ಲಿ ಬ್ಲೌಸ್ ಧರಿಸಿ, ಬಂದಿದ್ದೇನೆ’ ಎಂದು ಟೀಕಕಾರರಿಗೆ ಚಾಟಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ನಿರೂಪಕ, ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಸ್ವರಾ ಭಾಸ್ಕರ್ ಬೆಂಬಲಕ್ಕೆ ನಿಂತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net