ಅಬ್ಬಬ್ಬಾ, ಎಂಥಾ ಶ್ರದ್ಧೆ! : ಎಂಟು ಕೆಜಿ ತೂಕದ ಗೆಜ್ಜೆ ಕಟ್ಟಿಕೊಂಡು ಡಾನ್ಸ್ ತಯಾರಿ ನಡೆಸುತ್ತಿದ್ದ ಶ್ರದ್ಧಾ ಕಪೂರ್ SHRADDHA KAPOOR

ಪಾತ್ರದ ಸಿದ್ಧತೆಗಾಗಿ ಕಲಾವಿದರು ಪಡುವ ಪಾಡು ಅಷ್ಟಿಷ್ಟಲ್ಲ. ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವುದು, ಇಳಿಸಿಕೊಳ್ಳುವುದರ ಜತೆಗೆ ಬೇರೆ ಬೇರೆ ಸಿದ್ಧತೆಗಳಿಗೆ ತಮ್ಮನ್ನು ತಾವೇ ಅರ್ಪಿಸಿಕೊಳ್ಳುತ್ತಾರೆ. ಎಷ್ಟೇ ಕಷ್ಟ, ಸವಾಲುಗಳಿದ್ದರೂ ಯಾವುದನ್ನೂ ಪರಿಗಣಿಸದೆ ಹರಸಾಹಸಕ್ಕಿಳಿಯುತ್ತಾರೆ. ಅಂತಹ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ, ಕೇಳಿದ್ದೇವೆ. ಇದೀಗ ಪಾತ್ರಕ್ಕಾಗಿ ಅಂತಹದ್ದೇ ಸಿದ್ಧತೆ ನಡೆಸಿ, ಶ್ರದ್ಧಾ ಕಪೂರ್ ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದಾರೆ.
ಅಬ್ಬಬ್ಬಾ, ಎಂಥಾ ಶ್ರದ್ಧೆ! : ಎಂಟು ಕೆಜಿ ತೂಕದ ಗೆಜ್ಜೆ ಕಟ್ಟಿಕೊಂಡು ಡಾನ್ಸ್ ತಯಾರಿ ನಡೆಸುತ್ತಿದ್ದ ಶ್ರದ್ಧಾ ಕಪೂರ್ SHRADDHA KAPOOR
Published on: 

ಪಾತ್ರದ ಸಿದ್ಧತೆಗಾಗಿ ಕಲಾವಿದರು ಪಡುವ ಪಾಡು ಅಷ್ಟಿಷ್ಟಲ್ಲ. ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವುದು, ಇಳಿಸಿಕೊಳ್ಳುವುದರ ಜತೆಗೆ ಬೇರೆ ಬೇರೆ ಸಿದ್ಧತೆಗಳಿಗೆ ತಮ್ಮನ್ನು ತಾವೇ ಅರ್ಪಿಸಿಕೊಳ್ಳುತ್ತಾರೆ. ಎಷ್ಟೇ ಕಷ್ಟ, ಸವಾಲುಗಳಿದ್ದರೂ ಯಾವುದನ್ನೂ ಪರಿಗಣಿಸದೆ ಹರಸಾಹಸಕ್ಕಿಳಿಯುತ್ತಾರೆ. ಅಂತಹ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ, ಕೇಳಿದ್ದೇವೆ. ಇದೀಗ ಪಾತ್ರಕ್ಕಾಗಿ ಅಂತಹದ್ದೇ ಸಿದ್ಧತೆ ನಡೆಸಿ, ಶ್ರದ್ಧಾ ಕಪೂರ್ ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದಾರೆ. ಹೌದು, ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ ‘ಈಠಾ’ ಇದೇ ಡಿ. 4ಕ್ಕೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಮರಾಠಿ ಲಾವಣಿ ಡಾನ್ಸರ್ ವಿಠಾಬಾಯಿ ನಾರಾಯಣ್‌ಗಾವ್ಕಂರ್ ಬಯೋಪಿಕ್ ಇದಾಗಿದ್ದು, ಇಲ್ಲಿ ಅವರು ಲಾವಣಿ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಸಿದ್ಧತೆಗಾಗಿ ಶ್ರದ್ಧಾ ವಹಿಸಿದ ಶ್ರದ್ಧೆ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ಲಕ್ಷ್ಮಣ ಉಟೇಕಾರ್ ಬಹಿರಂಗಪಡಿಸಿದ್ದು, ‘ಶ್ರದ್ಧಾ ಎರಡೂ ಕಾಲುಗಳಿಗೆ ತಲಾ 4 ಕೆಜಿ ಭಾರದ ಗೆಜ್ಜೆಗಳನ್ನು ಹಾಕಿಕೊಂಡು ಡಾನ್ಸ್ ತಯಾರಿ ನಡೆಸುತ್ತಿದ್ದರು’ ಎಂದು ಹೇಳಿಕೊಂಡಿದ್ದಾರೆ. ‘ಹಾಡಿನ ದೃಶ್ಯಗಳಿಗಾಗಿ ಶ್ರದ್ಧಾ, ಶ್ರದ್ಧೆಯಿಂದ ತಯಾರಿ ನಡೆಸುತ್ತಿದ್ದರು. ತೂಕದ ಗೆಜ್ಜೆಗಳನ್ನು ಧರಿಸಿ, ನೃತ್ಯಕ್ಕೆ ತಯಾರಿ ನಡೆಸುತ್ತಿದ್ದರು. ಸುಮಾರು 25 ದಿನಗಳ ಕಾಲ, ದಿನಕ್ಕೆ ಎಂಟು ತಾಸುಗಳ ಕಾಲ ಅವರು ಪ್ರಾಕ್ಟೀಸ್ ಮಾಡುತ್ತಿದ್ದರು. ಅದರಿಂದಾಗಿ ಅವರ ಪಾದಗಳಲ್ಲಿ ಊತ ಕಂಡುಬರುತ್ತಿತ್ತು. ಆದರೂ, ಅವರು ನೃತ್ಯದಲ್ಲಿ ತಲ್ಲೀನರಾಗಿರುತ್ತಿದ್ದರು. ಇನ್ನು ಮೊದಲ ದಿನದ ಹಾಡಿನ ಚಿತ್ರೀಕರಣ ಅಂದುಕೊಂಡಂತೆ ನಡೆಯಿತು. ಆದರೆ, ಎರಡನೇ ದಿನವೇ ಶ್ರದ್ಧಾ ಕಾಲಿಗೆ ಗಾಯವಾದ್ದರಿಂದ ಅವರು ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಾಯಿತು. ಅದರಿಂದಾಗಿ ಶೂಟಿಂಗ್ ನಿಲ್ಲಿಸಬೇಕಾಗಿತ್ತು’ ಎಂದು ಲಕ್ಷ್ಮಣ್ ಬಹಿರಂಗಪಡಿಸಿದ್ದಾರೆ. -ಏಜೆನ್ಸೀಸ್