ದೇವರ ಮುಂದೆ ನಿಂತು ಕಣ್ಣೀರಿಟ್ಟ ನಟಿ ಸಾರಾ ಅಲಿ ಖಾನ್! ವೈರಲ್ ವಿಡಿಯೋ ಕಂಡ ನೆಟ್ಟಿಗರು​ ಹೇಳಿದ್ದು ಮಾತ್ರ... Sara Ali Khan

ಸಾರಾ ಅಲಿ ಖಾನ್ ಮತ್ತು ನಟ ಆಯುಷ್ಮಾನ್ ಖುರಾನಾ ಅವರು ತಮ್ಮ ಮುಂಬರುವ ‘ಉಡ್ತಾ ತೀರ್’ ಚಿತ್ರದ ಪ್ರಚಾರದ ಸಲುವಾಗಿ ಪಂಜಾಬ್‌ನ ವಿವಿಧೆಡೆ ಪ್ರವಾಸ ಕೈಗೊಂಡಿದ್ದಾರೆ.
Sara Ali Khan
ದೇವರ ಮುಂದೆ ನಿಂತು ಕಣ್ಣೀರಿಟ್ಟ ನಟಿ ಸಾರಾ ಅಲಿ ಖಾನ್! ವೈರಲ್ ವಿಡಿಯೋ ಕಂಡ ನೆಟ್ಟಿಗರು​ ಹೇಳಿದ್ದು ಮಾತ್ರ... Sara Ali Khan
Published on: 

ಅಮೃತಸರ: ಪ್ರಸಿದ್ಧ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ಬಾಲಿವುಡ್ ನಟಿ ಸಾರಾ ಅಲಿ ಖಾನ್, ಪ್ರಾರ್ಥನೆ ಸಲ್ಲಿಸುವ ವೇಳೆ ಭಾವುಕರಾಗಿ ಕಣ್ಣೀರಿಟ್ಟ ದೃಶ್ಯ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಟಿ ಆಯುಷ್ಮಾನ್ ಖುರಾನಾ ಅವರೊಂದಿಗೆ ಗುರುದ್ವಾರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸಾರಾ ಅಲಿ ಖಾನ್ ಮತ್ತು ನಟ ಆಯುಷ್ಮಾನ್ ಖುರಾನಾ ಅವರು ತಮ್ಮ ಮುಂಬರುವ ‘ಉಡ್ತಾ ತೀರ್’ ಚಿತ್ರದ ಪ್ರಚಾರದ ಸಲುವಾಗಿ ಪಂಜಾಬ್‌ನ ವಿವಿಧೆಡೆ ಪ್ರವಾಸ ಕೈಗೊಂಡಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ಗೋಲ್ಡನ್ ಟೆಂಪಲ್‌ಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಆದರೆ, ಈ ಸಂದರ್ಭದಲ್ಲಿ ಸಾರಾ ಕಣ್ಣೀರಾಕುತ್ತಿರುವ ದೃಶ್ಯಗಳು ನಟಿಯ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತು. ಕಾರಣ, ಅದ್ಯಾವ ಕಾರಣಕ್ಕೆ ಅವರು ಆ ರೀತಿ ಅಳುತ್ತಿದ್ದಾರೆ ಎಂದು ಕಮೆಂಟ್​ಗಳಲ್ಲಿ ಪ್ರಶ್ನಿಸಿದ್ದಾರೆ.

ಯಾರಾದರೂ ಹೋಗಿ ಸಾರಾರನ್ನು ತಬ್ಬಿಕೊಳ್ಳಿ, ಅವರ ಕಣ್ಣೀರನ್ನು ಒರೆಸಿ. ಅವರು ಈ ರೀತಿ ಅತ್ತರೆ ನಿಜಕ್ಕೂ ನೋಡಲು ಆಗೋದಿಲ್ಲ. ಯಾರು ಇಷ್ಟು ಕಣ್ಣೀರಾಕುತ್ತಾರೋ, ಅಂತವರಲ್ಲಿ ಅತೀವ ದುಃಖ ಅಡಗಿದೆ ಎಂದೇ ಅರ್ಥ ಎಂದು ಒಬ್ಬರು ಕಮೆಂಟ್​ ಮಾಡಿದರೆ, ಕೇದರನಾಥದಿಂದ ಗುರುದ್ವಾರದವರೆಗೆ ತಮ್ಮ ತಾಯಿ ಅವರಿಂದ ಸಾರಾ ಅಲಿ ಖಾನ್​ ಹಲವು ವಿಷಯಗಳನ್ನು ರೂಢಿಸಿಕೊಂಡಿರುವುದನ್ನು ಇಲ್ಲಿ ಮೆಚ್ಚಲೇಬೇಕು ಎಂದು ಮತ್ತೊಬ್ಬರು ಕಮೆಂಟ್​ ಹಾಕಿದ್ದಾರೆ.

Also Read
ಅನ್ಯ ರಾಜ್ಯಗಳ ಸಿಎಂ, 45 ಸಿನಿ ತಾರೆಯರು: ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯ ಮೊದಲುಗಳಿವು | Mysuru Dasara
Sara Ali Khan

ನಟನೊಂದಿಗೆ ಫೋಟೋ ಹಂಚಿಕೊಂಡಿರುವ ಸಾರಾ, ತಮ್ಮ ಅಭಿಮಾನಿಗಳು ಮತ್ತು ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಆಯುಷ್ಮಾನ್ ಖುರಾನಾ ಮತ್ತು ಸಾರಾ ಅಲಿ ಖಾನ್ ನಟಿಸಿರುವ ‘ಉಡ್ತಾ ತೀರ್’ ಚಿತ್ರವು ಇದೇ ಅಕ್ಟೋಬರ್ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದ ಪ್ರಚಾರದ ನಡುವೆಯೇ ಗೋಲ್ಡನ್ ಟೆಂಪಲ್‌ಗೆ ಅವರು ನೀಡಿದ ಭೇಟಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net