

Toxic first day first impression in x:
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬೆಂಗಳೂರು ಸೇರಿದಂತೆ ಪಂಚದಾದ್ಯಂತ ಹವಾ ಕ್ರಿಯೇಟ್ ಮಾಡಿದೆ.ಬೆಳಿಗ್ಗೆ 6 ಗಂಟೆಯಿಂದಲೇ ಪ್ರದರ್ಶನಗಳು ಆರಂಭವಾಗಿವೆ. ನಾಲ್ಕು ವರ್ಷಗಳ ನಿರಂತರ ಶೂಟಿಂಗ್ ನಂತರ ಯಶ್ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಸದ್ಯ ಟಾಕ್ಸಿಕ್ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಸಿನಿಮಾದ ಮೇಕಿಂಗ್ ಚೆನ್ನಾಗಿದೆ ಎನ್ನುತ್ತಿದ್ದರೆ, ಇನ್ನೂ ಕೆಲವರು ಕತೆ ಡಬ್ಬ ತರ ಇದೆ ಎಂದು ಹೀಗೆಳೆಯುತ್ತಿದ್ದಾರೆ.
ನೆಟ್ಟಿಗರು ಏನಂತಿದ್ದಾರೆ?
ಹಬ್ಬದೂಟ ಸಿಕ್ಕಂತಾಗಿದೆ. ಆದರೆ, ಸಿನಿಮಾ ಪ್ರಿಯರು ಮಾತ್ರ ಚಿತ್ರದ ಕತೆಯುನ್ನು ಒಪ್ಪಿಕೊಂಡಿಲ್ಲ. ಸಿನಿಮಾ ನೋಡಿದ ಪ್ರೇಕ್ಷಕರು ಈ ಬಗ್ಗೆ ಎಕ್ಸ್ನಲ್ಲಿ ಏನೆಲ್ಲ ಪ್ರತಿಕ್ರಿಯೆ ಸಿಕ್ಕಿದೆ ಎನ್ನೋದನ್ನು ನೋಡೋಣ ಬನ್ನಿ.
ಕಳಪೆ, ದೊಡ್ಡ ಡಿಸಾಸ್ಟರ್ ಸಿನಿಮಾ
ಹಿಂಸಾತ್ಮಕ ಸಿನಿಮಾ
ಒಬ್ಬ ಎಕ್ಸ್ ಬಳಕೆದಾರರು ಚಿತ್ರವನ್ನು ಒಂದು ದೊಡ್ಡ ಅವ್ಯವಸ್ಥೆ ಎಂದರೆ, ಇನ್ನೊಬ್ಬರು ಕಥೆ ಏನೂ ಇಲ್ಲ. ಗನ್‌ಗಳು, ಹಿಂಸೆ, ಸೆಕ್ಸ್, ಜಗಳಗಳು ಮತ್ತು ಸ್ಲೋ ಮೋಷನ್ ದೃಶ್ಯಗಳು ಬೋರಿಂಗ್ ಆಗಿವೆ ಎಂದುಕಾಮೆಂಟ್ ಮಾಡಿದ್ದಾರೆ
ಮತ್ತೊಬ್ಬರು ತಾಂತ್ರಿಕವಾಗಿ ಉತ್ತಮವಾದ ಚಿತ್ರವನ್ನು, ಕೆಟ್ಟ ಬರವಣಿಗೆ ದೃಶ್ಯಗಳಿಂದ ದಣಿವಾಗುವಂತೆ ಮಾಡಿಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕತೆಗೆ ಪ್ರಾಮುಖ್ಯತೆ ಇಲ್ಲ
ಸಾಹಸ ದೃಶ್ಯ, ಅದ್ದೂರಿ ಚಿತ್ರ, ಹಿಂಸಾತ್ಮಕ
ಆಕ್ಷನ್ ಡ್ರಾಮಾದಿಂದ ಕೂಡಿದೆ.
ಅವಶ್ಯಕತೆ ಇರದ ಪಾತ್ರಗಳ ಚಿತ್ರಣ, ವಯಸ್ಕರ ದೃಶ್ಯಗಳು
ಬಲವಂತವಾಗಿ ಎಳೆದು ತರಲಾಗಿದೆ
, ಎಲ್ಲೋ ಸಾಗುವ ಸನ್ನಿವೇಶಗಳು, ಕಳಪೆ ಸಂಭಾಷಣೆ ಮತ್ತು ಯಾವುದೇ ಭಾವನಾತ್ಮಕ ನಂಟಿಲ್ಲ. ಯಾವುದೂ ವರ್ಕೌಟ್ ಆಗಿಲ್ಲ. ನಿರ್ದೇಶಕಿ ಗೀತು ಒಂದು ಅತಿ ನೀರಸವಾದ ಸಿನಿಮಾವನ್ನು ನೀಡಿದ್ದಾರೆ. ಅತ್ಯಂತ ಕಳಪೆಯಾಗಿದೆ ಎಂದು ಬರೆದುಕೊಂಡಿದ್ದಾರೆ.