ನವರಾತ್ರಿ ವೈಭವಕ್ಕೆ ಸಾಕ್ಷಿಯಾದ ಮೇಘನಾ : ಒಂಬತ್ತು ದಿನಗಳ ಕಾಲ ವ್ರತ ಆಚರಿಸುತ್ತಿರುವ ನಟಿ SAKSHI MEGHANA

ಕನ್ನಡದ ‘ಪದ್ಮಾವತಿ’, ‘ಬೆಸ್ಟ್​ಫ್ರೆಂಡ್ಸ್’, ‘ಲೀಸಾ’ ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸಾಕ್ಷಿ ಮೇಘನಾ ಇದೀಗ ಸ್ಯಾಂಡಲ್‌ವುಡ್ ಜತೆಗೆ ಪರಭಾಷೆಗಳಲ್ಲೂ ಬಿಜಿಯಾಗಿದ್ದಾರೆ. ತಮಿಳು ಹಾಗೂ ‘ಶ್ಯಾಡೋ’ ಎಂಬ ಇಂಗ್ಲಿಷ್ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಶೂಟಿಂಗ್ ಬಿಜಿ ನಡುವೆ ಸಾಕ್ಷಿ ದಸರಾ ಹಬ್ಬದ ಸಂಭ್ರಮದಲ್ಲಿದ್ದು, ಒಂಬತ್ತು ದಿನಗಳ ಕಾಲ ಹಬ್ಬದ ವ್ರತ ಮಾಡುತ್ತಿದ್ದಾರೆ.
sakshi meghana
ಸಾಕ್ಷಿ ಮೇಘನಾ
Published on: 

ಬೆಂಗಳೂರು: ಕನ್ನಡದ ‘ಪದ್ಮಾವತಿ’, ‘ಬೆಸ್ಟ್​ಫ್ರೆಂಡ್ಸ್’, ‘ಲೀಸಾ’ ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸಾಕ್ಷಿ ಮೇಘನಾ ಇದೀಗ ಸ್ಯಾಂಡಲ್‌ವುಡ್ ಜತೆಗೆ ಪರಭಾಷೆಗಳಲ್ಲೂ ಬಿಜಿಯಾಗಿದ್ದಾರೆ. ತಮಿಳು ಹಾಗೂ ‘ಶ್ಯಾಡೋ’ ಎಂಬ ಇಂಗ್ಲಿಷ್ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಶೂಟಿಂಗ್ ಬಿಜಿ ನಡುವೆ ಸಾಕ್ಷಿ ದಸರಾ ಹಬ್ಬದ ಸಂಭ್ರಮದಲ್ಲಿದ್ದು, ಒಂಬತ್ತು ದಿನಗಳ ಕಾಲ ಹಬ್ಬದ ವ್ರತ ಮಾಡುತ್ತಿದ್ದಾರೆ.

‘ಈ ಬಾರಿ ಬೆಂಗಳೂರಿನಲ್ಲಿಯೇ ಹಬ್ಬ ಆಚರಿಸುತ್ತಿದ್ದೇನೆ. ಕೆಲ ದಿನಗಳ ಕಾಲ ಸಿನಿಮಾ ಶೂಟಿಂಗ್ ಬಿಡುವು ಪಡೆದು ಹಬ್ಬಕ್ಕಾಗಿ ವ್ರತ ಮಾಡುತ್ತಿದ್ದೇನೆ. ಬೆಳಗ್ಗೆ ಬೇಗ ಎದ್ದು, ಮಡಿಯಲ್ಲಿ ದೇವರಿಗೆ ಪೂಜೆ ಮಾಡಿ, ನೈವೇದ್ಯ ಅರ್ಪಿಸಿ, ಹೊಸ್ತಿಲು ಮುಂದೆ ದೀಪ ಹಚ್ಚುತ್ತೇನೆ. ಬಳಿಕ ಅಂದಿನ ಬಣ್ಣದ ಸೀರೆ ಧರಿಸಿ, ದೇವಿ ದೇವಸ್ಥಾನಕ್ಕೆ ತೆರಳಿ ಅಮ್ಮನ ದರ್ಶನ ಪಡೆಯುತ್ತೇನೆ. ಈ ಒಂಬತ್ತು ದಿನಗಳ ಕಾಲವೂ ನಾನು ಒಂದೇ ಹೊತ್ತು ಊಟ ಮಾಡುವುದು. ಒಳ್ಳೆಯ ಆರೋಗ್ಯ ಜತೆಗೆ ವೃತ್ತಿಯಲ್ಲಿ ಯಶಸ್ಸು ಸಿಗಲಿ ಎಂಬುದಷ್ಟೇ ದೇವಿಯಲ್ಲಿ ಪ್ರಾರ್ಥನೆ. ಇನ್ನು ನಾನು ಹುಟ್ಟಿದ್ದು ಮೈಸೂರಿನಲ್ಲಿ. ಹಾಗಾಗಿ, ಮೈಸೂರು ದಸರಾ ಎಂದರೆ ನಮಗೆ ಮನೆಯ ಹಬ್ಬವಿದ್ದಂತೆ. ಗೊಂಬೆಗಳನ್ನು ಕೂರಿಸುವುದು, ದೇವಿಯ ಅಲಂಕಾರವನ್ನು ನೋಡುವುದೇ ಒಂದು ವೈಭೋಗ. ಚಿಕ್ಕವರಿರುವಾಗ ಮಾವನ ಹೆಗಲ ಮೇಲೆ ಕುಳಿತು ಮೈಸೂರು ಅರಮನೆ ನೋಡಿದ್ದು, ಇಂದಿಗೂ ಸ್ಮರಣೀಯ. ಮನೆಯಲ್ಲಿ ಸಾಮಾನ್ಯವಾಗಿ ಒಂಬತ್ತು ದಿನಗಳ ಕಾಲ ವ್ರತ, ಪೂಜೆ ಮಾಡಿದರೂ, ಆಯುಧ ಪೂಜೆಯನ್ನು ಇನ್ನೂ ಗ್ರ್ಯಾಂಡ್ ಆಗಿ ಆಚರಿಸುತ್ತೇವೆ. ನಾನು ನಟಿಸಿರುವ ‘ಕುರುಡು ಕಾಂಚಾಣ’, ‘ವರ್ಣತರಂಗ’, ‘ಶಿವನಪಾದ’ ರಿಲೀಸ್‌ಗೆ ರೆಡಿ ಇರುವ ಕಾರಣ ಈ ಬಾರಿಯ ದಸರಾ ನನಗೆ ಸ್ವಲ್ಪ ಸ್ಪೆಷಲ್. ಇನ್ನು ಇಂಗ್ಲಿಷ್‌ನ ‘ಶ್ಯಾಡೋ’ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬಾಕಿಯಿದೆ. ಒಳ್ಳೆಯ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿರುವುದು ಹಬ್ಬದ ಸಂಭ್ರಮ ಹೆಚ್ಚಿಸಿದೆ’ ಎಂದು ನಟಿ ಖುಷಿ ಹಂಚಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net