Sumukha - ಮನದ ಕಡಲು ಸುಮುಖ ಹೊಸ ಮುಖ

Actor Sumukha
Actor Sumukha
Published on
Sumukha -
ರಂಗಭೂಮಿ ಹಿನ್ನೆಲೆಯ ಸುಮುಖ "ಫಿಸಿಕ್ಸ್​ ಟೀಚರ್​' (2022) ಮೂಲಕ ನಾಯಕ, ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಕಳೆದ ವರ್ಷ ಯೋಗರಾಜ್​ ಭಟ್​ ನಿರ್ದೇಶನದ "ಮನದ ಕಡಲು' ಚಿತ್ರದಲ್ಲಿ ಮಿಂಚಿದ್ದ ಅವರು ಸದ್ಯ ಮಲಯಾಳಂ ಮತ್ತು ಕನ್ನಡ ದ್ವಿಭಾಷೆಯಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದರ ನಡುವೆಯೇ ಪ್ರೀತಂ ಗುಬ್ಬಿ ಆ್ಯಕ್ಷನ್​-ಕಟ್​ ಹೇಳಲಿರುವ ಹೊಸ ಸಿನಿಮಾ ಟೀಮ್​ ಸೇರಿಕೊಂಡಿದ್ದಾರೆ. "ಕೆಲ ದಿನಗಳ ಹಿಂದಷ್ಟೇ ಪ್ರೀತಂ ಸರ್​ ಕರೆ ಮಾಡಿ, ಕಥೆ ಹೇಳಿದರು. ತುಂಬ ಇಷ್ಟವಾಯಿತು. ಈಗಿನ ಜನರೇಷನ್​ಗೆ ಕನೆಕ್ಟ್​ ಆಗುವ ಕಥೆ. ಇದು ಎಲ್ಲ ಲವ್​ಸ್ಟೋರಿಗಳಂತಲ್ಲ. ಟ್ವಿಸ್ಟ್​ ಮತ್ತು ರ್ಟನ್​ಗಳಿವೆ' ಎನ್ನುತ್ತಾರೆ. ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ಈ ಚಿತ್ರದ ಮೂಲಕ ಪತ್ರಕರ್ತ ಪಿ. ಲಂಕೇಶ್​ ಮೊಮ್ಮಗಳು, ನಿರ್ದೇಶಕಿ ಕವಿತಾ ಲಂಕೇಶ್​ ಪುತ್ರಿ ಇಶಾ ಲಂಕೇಶ್​ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ನಾಯಕ ಮತ್ತು ನಾಯಕಿಗೆ ವರ್ಕ್​ಶಾಪ್​ ನಡೆಯುತ್ತಿದ್ದು, ಸುಮುಖ ಕೂಡ ಪಾತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಸುಮುಖ, ಇಶಾ ಹೊರತುಪಡಿಸಿ ಉಳಿದ ತಾರಾಗಣ, ಶೀರ್ಷಿಕೆ, ತಂತ್ರಜ್ಞರ ಕುರಿತು ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ. "ಬಾನದಾರಿಯಲ್ಲಿ' (2023) ಬಳಿಕ ಪ್ರೀತಂ ಗುಬ್ಬಿ ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದು, ಇದೇ ವರ್ಷ ಈ ಸಿನಿಮಾ ರಿಲೀಸ್​ ಆಗುವ ನಿರೀೆ ಇದೆ.
ಪೊಲಿಟಿಕಲ್​ ಥ್ರಿಲ್ಲರ್​ನಲ್ಲಿ ಫಿಸಿಕ್ಸ್​ ಟೀಚರ್​
ಚಿತ್ರದಿಂದ ಚಿತ್ರಕ್ಕೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಸುಮುಖ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬರುತ್ತಿರುವ ಕಥೆಯಲ್ಲೂ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ನಿರ್ದೇಶಕ ಕೆಕೆ ಸಂಜಯ್​ ಮತ್ತು ರಾಯಲ್​ ಫ್ಲೈ ಬ್ಯಾನರ್​ ಇಬ್ಬರೂ ಮಲಯಾಳಂನವರು. ಬೆಂಗಳೂರಿನಲ್ಲಿ ನಡೆಯುವ ಪೊಲಿಟಿಕಲ್​ ಥ್ರಿಲ್ಲರ್​ ಕಥೆಯಿದು. "ಮನದ ಕಡಲು' ಸಿನಿಮಾ ನೋಡಿ ನನ್ನನ್ನು ಸಂಪರ್ಕಿಸಿದರು. ದೇಹ ಹುರಿಗೊಳಿಸಿಕೊಳ್ಳಲು ತಿಳಿಸಿದರು. ಪ್ರತಿದಿನ 45 ನಿಮಿಷ ವರ್ಕೌಟ್​ ಮಾಡುತ್ತಿದ್ದವನು ಒಂದೂವರೆ ತಾಸು ಜಿಮ್​ನಲ್ಲಿ ಬೆವರಿಳಿಸತೊಡಗಿದೆ. ಎರಡು ಪಟ್ಟು ವರ್ಕೌಟ್​ ಮಾತ್ರವಲ್ಲ, ಎರಡು ಪಟ್ಟು ಊಟವೂ ಹೆಚ್ಚು ಸೇವಿಸಿ, ತೂಕ ಹೆಚ್ಚಿಸಿಕೊಂಡೆ. ಇನ್ನು ಕೆಲವೇ ದಿನಗಳಲ್ಲಿ ಪ್ರೀತಂ ಸರ್​ ಸಿನಿಮಾ ಶೂಟಿಂಗ್​ ಪ್ರಾರಂಭವಾಗಲಿದೆ. ಅದಕ್ಕೆ ತೂಕ ಇಳಿಸಿಕೊಳ್ಳುತ್ತಿದ್ದೇನೆ. ಇದರ ಚಿತ್ರೀಕರಣದ ಬಳಿಕ ಮಲಯಾಳಂ ಸಿನಿಮಾಗಾಗಿ ಮತ್ತೆ ತೂಕ ಹೆಚ್ಚಿಸಿಕೊಳ್ಳಬೇಕಿದೆ. ಹೀಗೆ ಎರಡೇ ತಿಂಗಳಲ್ಲಿ ತೂಕ ಇಳಿಸಿಕೊಳ್ಳುವ, ಹೆಚ್ಚಿಸಿಕೊಳ್ಳುವ ಸವಾಲಿದೆ. ಆದರೆ, ಅವಕಾಶ ಮಿಸ್​ ಮಾಡಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಎರ್ಟ್​ ಹಾಕುತ್ತಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net