Deepika Das: ನಾಗಿಣಿ ಧಾರಾವಾಹಿ ಮೂಲಕ ಕನ್ನಡ ಜನತೆಯ ಮನಗೆದ್ದು, ನಂತರ ಕನ್ನಡ ಬಿಗ್ಬಾಸ್ ಸೀಸನ್ 9 ರ ಎರಡನೇ ರನ್ನರ್ ಅಫ್ ಆಗಿ ಹೊರಹೊಮ್ಮಿದ ದೀಪಕಾ ದಾಸ್, ಇತ್ತೀಚೆಗೆ ನವರಾತ್ರಿ ಪ್ರಯುಕ್ತ ಮೈಸೂರಿನಲ್ಲಿ ನಡೆಯುತ್ತಿರು ದಸರಾ ಉತ್ಸವವನ್ನು ನೋಡಲು ಹೋಗಿದ್ದಾರೆ. ಈ ವೇಳೆ, ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ನಟಿ ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಅಂತಯೇ ಅಲ್ಲಿ, ಕ್ಲಿಕ್ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.