Kiccha Sudeep burst into fits of laughter watching the way Kiran did push-ups:ವಾರದ ಕತೆ ಕಿಚ್ಚನ ಜೊತೆ ನಿನ್ನೆ ನಡೆದ ಎಪಿಸೋಡ್ನಲ್ಲಿ ಸುದೀಪ್ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡರು. ಜಗದೀಶ್ಗೆ ಹೋಗೆ, ಬಾರೆ, ಬಂದ್ಲು ನೋಡು ಎಂದು ಕರೆದದ್ದಕ್ಕೆ ಹಾಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಐಪಿ ನಿಯಮ ಬದಲಾಯಿಸಿಕೊಂಡಿದ್ದಕ್ಕೆ ಗಗನ್ ಚಿನ್ನಪ್ಪ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮಧ್ಯೆ ಇಂದು ಪ್ರೊಮೊ ಬಿಡುಗಡೆಯಾಗಿದ್ದು, ಕಿರಣ್ ಶಾಸ್ತ್ರಿಯವರ ಪುಷಪ್ಸ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿರುವುದು ಮನೆ ಮಂದಿಗೆಲ್ಲ ನಗು ತರಿಸುವಂತೆ ಮಾಡಿದೆ.