Kadri - ಕದ್ರಿಯಲ್ಲಿ ಆನಂದ್​, ಬ್ರೋ ಗೌಡ ಶಮಂತ್

"ರಾಘು', "ಶೆಫ್ ಚಿದಂಬರ'ದಂತಹ ವಿಭಿನ್ನ ಕಥೆಗಳಿಗೆ ಆ್ಯಕ್ಷನ್​-ಕಟ್​ ಹೇಳಿದ್ದ ಆನಂದ್​ ರಾಜ್​ ಇದೀಗ ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ಹೆಸರು "ಕದ್ರಿ'. ಬಿಗ್​ಬಾಸ್​ ಕನ್ನಡ ಸೀಸನ್​ 8, ಲಕ್ಷ್ಮೀ ಬಾರಮ್ಮ, ಅಗ್ನಿಸಾಕ್ಷಿ ಧಾರಾವಾಹಿಗಳ ಖ್ಯಾತಿಯ ಶಮಂತ್​ (ಬ್ರೋ ಗೌಡ) ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದು, ಅವರಿಗೆ "ಕಂಗ್ರಾಜುಲೇಷನ್ಸ್​ ಬ್ರದರ್​' ನಟಿ ಅನುಷಾ ಆಂಜನಪ್ಪ ನಾಯಕಿಯಾಗಿದ್ದಾರೆ.
ಕದ್ರಿ ಚಿತ್ರದ ಪೋಸ್ಟರ್
ಕದ್ರಿ ಚಿತ್ರದ ಪೋಸ್ಟರ್
Published on: 

ಬೆಂಗಳೂರು :

"ರಾಘು', "ಶೆಫ್ ಚಿದಂಬರ'ದಂತಹ ವಿಭಿನ್ನ ಕಥೆಗಳಿಗೆ ಆ್ಯಕ್ಷನ್​-ಕಟ್​ ಹೇಳಿದ್ದ ಆನಂದ್​ ರಾಜ್​ ಇದೀಗ ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ಹೆಸರು "ಕದ್ರಿ'. ಬಿಗ್​ಬಾಸ್​ ಕನ್ನಡ ಸೀಸನ್​ 8, ಲಕ್ಷ್ಮೀ ಬಾರಮ್ಮ, ಅಗ್ನಿಸಾಕ್ಷಿ ಧಾರಾವಾಹಿಗಳ ಖ್ಯಾತಿಯ ಶಮಂತ್​ (ಬ್ರೋ ಗೌಡ) ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದು, ಅವರಿಗೆ "ಕಂಗ್ರಾಜುಲೇಷನ್ಸ್​ ಬ್ರದರ್​' ನಟಿ ಅನುಷಾ ಆಂಜನಪ್ಪ ನಾಯಕಿಯಾಗಿದ್ದಾರೆ. ಇದು ಸ್ವಾತಂತ್ರ್ಯಪೂರ್ವ ನಡೆಯುವ ಜಾನಪದ ಹಿನ್ನೆಲೆಯ ಹಾರರ್​ ಚಿತ್ರವಾಗಿದ್ದು, "ಕದ್ರಿ' ಶೀರ್ಷಿಕೆಗೆ "ಕಲ್ಪನೆಗೂ ಮೀರಿದ ಕತ್ತಲೆ, ಕಾಲದಿಂದ ಅಚ್ಚಳಿಯದೆ ಉಳಿದಿರುವ ಭಯ' ಎಂಬ ಕುತೂಹಲಕಾರಿ ಅಡಿಬರಹ ನೀಡಲಾಗಿದೆ. ಕಥೆ, ಚಿತ್ರಕಥೆ ಬರೆದು, ನಿರ್ದೇಶನದ ಜತೆಗೆ ಮೊದಲ ಬಾರಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವ ಆನಂದ್​ ರಾಜ್​, "ಕದ್ರಿ ಪ್ರಾಂತ್ಯಕ್ಕೂ ಸಿನಿಮಾಗೂ ಸಂಬಂಧವಿಲ್ಲ. ಇಲ್ಲಿ ಕದ್ರಿ ನಾಯಕನ ಹೆಸರು. ಚಿತ್ರದಲ್ಲಿ ಶಿವನ ಅಂಶಗಳಿರುವ ಕಾರಣ ಆ ಹೆಸರಿಟ್ಟಿದ್ದೇವೆ. ಈಗಾಗಲೇ ಶೂಟಿಂಗ್​, ಪೋಸ್ಟ್​ ಪ್ರೊಡಕ್ಷನ್​ ಮುಗಿದಿದ್ದು, ಫಸ್ಟ್​ ಪ್ರಿಂಟ್​ ಕೂಡ ರೆಡಿಯಿದೆ. ಒಂದು ಪ್ರಾಂತ್ಯದಲ್ಲಿ ನಡೆಯುವ ಕಾಲ್ಪನಿಕ ಕಥೆಯಾದರೂ, ಎಲ್ಲ ಪ್ರಾಂತ್ಯಗಳಿಗೂ ಸಲ್ಲುವ ವಿಷಯಗಳಿವೆ. ಸ್ವಾತಂತ್ರ$್ಯಪೂರ್ವ ಕಥೆಯಾದ ಕಾರಣ ಬೆಂಗಳೂರು, ಮಂಡ್ಯದಲ್ಲಿ ಸೆಟ್​ಗಳನ್ನು ನಿರ್ಮಿಸಿ ಚಿತ್ರೀಕರಿಸಿದ್ದೇವೆ. ಚಿತ್ರದಲ್ಲಿ ಫ್ಯಾಂಟಸಿ ಅಂಶಗಳಿವೆ, ಫ್ಲ್ಯಾಶ್​ಬ್ಯಾಕ್​ಗಳಿವೆ, ತಾಂತ್ರಿಕವಾಗಿ ಸಶಕ್ತವಾಗಿ ಮೂಡಿಬಂದಿದ್ದು, ಉತ್ತಮ ಥಿಯೇಟ್ರಿಕಲ್​ ಅನುಭವ ನೀಡುವ ಸಿನಿಮಾ' ಎಂದು ಮಾಹಿತಿ ನೀಡುತ್ತಾರೆ. 2027ರ ಮಾರ್ಚ್​ನಲ್ಲಿ ಮೊದಲು ಕನ್ನಡದಲ್ಲಿ ಸಿನಿಮಾ ತೆರೆಗೆ ಬರಲಿದ್ದು, ನಂತರ ಬೇರೆ ಭಾಷೆಗಳಲ್ಲಿ ಡಬ್​ ಮಾಡುವ ಆಲೋಚನೆ ಚಿತ್ರತಂಡದ್ದು.

ಕದ್ರಿ ಚಿತ್ರದಲ್ಲಿ ಶಮಂತ್
ಕದ್ರಿ ಚಿತ್ರದಲ್ಲಿ ಶಮಂತ್

ಕನ್ನಡದಲ್ಲಿ ಹಾರರ್​ ಕಾಮಿಡಿಗಳು ತುಂಬ ಬಂದಿವೆ. ಆದರೆ, ಔಟ್​ ಆ್ಯಂಡ್​ ಔಟ್​ ಹಾರರ್​ ಚಿತ್ರಗಳು ಕಡಿಮೆ. ಹೀಗಾಗಿ "ದುರ್ಗಾಶಕ್ತಿ', "ಶ್​!' ಸಿನಿಮಾಗಳಂತೆ ಕಂಟೆಂಟ್​ ಪ್ರಧಾನ ಕಂಪ್ಲೀಟ್​ ಹಾರರ್​ ಸಿನಿಮಾ ಮಾಡಬೇಕು ಅಂತ ಯೋಚಿಸುತ್ತಿರುವಾಗ ಹೊಳೆದ ಕಥೆಯಿದು.

ಆನಂದ್​ ರಾಜ್​, ನಿರ್ದೇಶಕ

ನಿರ್ದೇಶಕ ಆನಂದ್ ರಾಜ್
ನಿರ್ದೇಶಕ ಆನಂದ್ ರಾಜ್