Komal Kumar - ರಿಲ್ಯಾಕ್ಸ್​ ಕೋಮಲ್​, ಕಾಮಿಡಿ ಕಮಾಲ್​

ಕಳೆದ ವರ್ಷ ತಮಿಳಿನ "ರಾಜಪುತ್ರನ್​' ಮತ್ತು ಕನ್ನಡದ "ಕೋಣ' ಚಿತ್ರಗಳಲ್ಲಿ ನಟಿಸಿದ್ದ ಕೋಮಲ್​ ಕುಮಾರ್​ ಈ ವರ್ಷ "ರಿಲ್ಯಾಕ್ಸ್​ ಆಗಿ' ಥಿಯೇಟರ್​ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಶ್ರೀನಿವಾಸ್​ ಮಂಡ್ಯ ನಿರ್ದೇಶನದ ಕಾಮಿಡಿ ಫ್ಯಾಮಿಲಿ ಎಂಟರ್​ಟೇನರ್​ ನಾಳೆ ತೆರೆಗೆ ಬರಲಿದ್ದು ಕೋಮಲ್​, ಸಿನಿಮಾ, ಪಾತ್ರ ಹಾಗೂ ಮುಂದಿನ ಚಿತ್ರಗಳ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ.
ನಟ ಕೋಮಲ್ ಕುಮಾರ್
ನಟ ಕೋಮಲ್ ಕುಮಾರ್
Published on: 

ಬೆಂಗಳೂರು: ಕಳೆದ ವರ್ಷ ತಮಿಳಿನ "ರಾಜಪುತ್ರನ್​' ಮತ್ತು ಕನ್ನಡದ "ಕೋಣ' ಚಿತ್ರಗಳಲ್ಲಿ ನಟಿಸಿದ್ದ ಕೋಮಲ್​ ಕುಮಾರ್​ ಈ ವರ್ಷ "ರಿಲ್ಯಾಕ್ಸ್​ ಆಗಿ' ಥಿಯೇಟರ್​ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಶ್ರೀನಿವಾಸ್​ ಮಂಡ್ಯ ನಿರ್ದೇಶನದ ಕಾಮಿಡಿ ಫ್ಯಾಮಿಲಿ ಎಂಟರ್​ಟೇನರ್​ ನಾಳೆ ತೆರೆಗೆ ಬರಲಿದ್ದು ಕೋಮಲ್​, "ಇಂಟರೆಸ್ಟಿಂಗ್​ ಸಿನಿಮಾ. ಕಡಿಮೆ ಬಜೆಟ್​ ಚಿತ್ರವಾದರೂ ರಿಲೀಸ್​ ಬಳಿಕ ಜನರಿಗೆ ರೀಚಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ನಿರೀೆಯಿದೆ. ಇಲ್ಲಿ ನಾನೇನು ಮಾಡಿದರೂ ಜನ ನಗುತ್ತಾರೆ. ಪಾತ್ರ ಮತ್ತು ಸಂಭಾಷಣೆ ಅಷ್ಟು ಚೆನ್ನಾಗಿ ಮೂಡಿಬಂದಿದೆ. ಪರೋಕ್ಷವಾಗಿ ಹೇಳುವುದಾದರೆ ಇದು "ಪುಷ್ಪಕ ವಿಮಾನ' ಚಿತ್ರದಂತೆ. ಏನೂ ಇಲ್ಲದವನಿಗೆ ಫೈವ್​ ಸ್ಟಾರ್​ ಹೋಟೆಲ್​ನಲ್ಲಿರಲು ಜಾಗ ಸಿಕ್ಕರೆ, ಎಷ್ಟು ಸಂತೋಷವಾಗಿರುತ್ತಾನೆ ಅಲ್ಲವೇ? ನಂತರ ಆತನಿಗೆ ತನ್ನ ಸತ್ಯದ ಅರಿವಾಗುತ್ತದೆ. ಅಳತೆ ಮೀರಿದ ಅವಕಾಶ ಸಿಗುವ ಖುಷಿಯ ಬೆನ್ನಲ್ಲೇ ಅವನಿಗೆ ಗೊತ್ತಿಲ್ಲದೆಯೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಕಾಮಿಡಿ ಡೈಲಾಗ್ಸ್​ ತುಂಬ ಚೆನ್ನಾಗಿದೆ. "ಗರಗಸ' ಬಳಿಕ ಇಂತಹ ಕಥೆ ಸಿಕ್ಕಿರಲಿಲ್ಲ. ಈಗ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದೇನೆ. ಸಿಚುಯೇಷನಲ್​ ಕಾಮಿಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ರಿಲ್ಯಾಕ್ಸ್ ಆಗಿ ಚಿತ್ರದ ಪೋಸ್ಟರ್
ರಿಲ್ಯಾಕ್ಸ್ ಆಗಿ ಚಿತ್ರದ ಪೋಸ್ಟರ್

ಒಗ್ಗಟ್ಟಿನಲ್ಲಿ ಬಲವಿದೆ

ಇನ್ನು ಇದೇ ಮೊದಲ ಬಾರಿಗೆ ಕೋಮಲ್​ಗೆ ಸೋನಲ್​ ಮೊಂಟೇರೊ ನಾಯಕಿಯಾಗಿದ್ದಾರೆ. ಜತೆಗೆ ವಿನೋದ್​ ಪ್ರಭಾಕರ್​ ಜತೆಗೂ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಆ ಬಗ್ಗೆ, "ಬಾವಿಯಿಂದ ಒಬ್ಬರೇ ನೀರು ಎತ್ತುವುದಕ್ಕೂ, ಹತ್ತು ಜನ ನೀರು ಎತ್ತುವುದಕ್ಕೂ ತುಂಬ ವ್ಯತ್ಯಾಸವಿದೆ. ಮೊದಲ ಬಾರಿ ವಿನೋದ್​, ನಾನು ಒಟ್ಟಿಗೆ ನಟಿಸಿದ್ದೇವೆ. ನಾನೊಬ್ಬನೇ ಭಾರ ಹೊರುವ ಬದಲು, ಇನ್ನೊಬ್ಬರು ಭಾರ ಹೊರಲು ಸೇರಿದ್ದಾರೆ ಅಂದಾಗ ಖುಷಿಯಲ್ಲವೇ. ಮಲ್ಟಿಸ್ಟಾರ್​ ಚಿತ್ರಗಳು ಹೆಚ್ಚು ಬರಬೇಕು' ಎನ್ನುತ್ತಾರೆ ಕೋಮಲ್​.

ಯಶಸ್ಸಿನ ಸೂತ್ರ ಯಾರಿಗೂ ಗೊತ್ತಿಲ್ಲ

"ಜನ ಯಾವ ಚಿತ್ರವನ್ನು ಹೇಗೆ ರಿಸೀವ್​ ಮಾಡುತ್ತಾರೆ ಅಂತ ಗೊತ್ತಿಲ್ಲ' ಎನ್ನುವ ಕೋಮಲ್​, "33 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಒಂದು ಸಿನಿಮಾನ ಎಷ್ಟು ಪ್ರೀತಿಸುತ್ತೇವೆ, ದ್ವೇಷಿಸುತ್ತೇವೆ ಅನ್ನೋದು ಗುರುವಾರದವರೆಗೆ ಮಾತ್ರ. ಶುಕ್ರವಾರ ಬೆಳಗಿನ ಶೋಗೆ ನಮಗೆ ಸಿನಿಮಾ ಚೆನ್ನಾಗಿರಲಿ, ಚೆನ್ನಾಗಿಲ್ಲದಿರಲಿ ಅದನ್ನು ಜನ ಹೇಗೆ ರಿಸೀವ್​ ಮಾಡುತ್ತಾರೆ ಅನ್ನೋದು ಗೊತ್ತಾಗಲ್ಲ. ಆ ಗುಟ್ಟು ಪ್ರಪಂಚದಲ್ಲೇ ಯಾರಿಗೂ ಗೊತ್ತಿಲ್ಲ' ಎನ್ನುತ್ತಾರೆ. ಅಂದಹಾಗೆ "ರಿಲ್ಯಾಕ್ಸ್​ ಆಗಿ' ಜತೆಗೆ ಕೋಮಲ್​ "ತೆನಾಲಿ ಡಿಎಎಲ್​ಎಲ್​ಬಿ', "ಸಂಗೀತ ಬಾರ್​ ಆ್ಯಂಡ್​ ರೆಸ್ಟೋರೆಂಟ್​', "ಕಾಲಾಯ ತಸ್ಮೈನಮಃ', "ಕುಟೀರ' ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.