‘ಅದೃಷ್ಟವಂತ’ ನಿಖಿಲ್‌ಗೆ ಜಗ್ಗೇಶ್ ಶುಭ ಹಾರೈಕೆ ... ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ

Nikhil Final New
Published on

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಮತ್ತು ರೇವತಿ ಅವರ ವಿವಾಹ ಶುಕ್ರವಾರ ಬೆಳಿಗ್ಗೆ 9.15ರಿಂದ 9.45ರವರೆಗಿನ ಶುಭ ಲಘ್ನದಲ್ಲಿ ನಡೆದಿದೆ. ಇಡೀ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಹೆಚ್ಚು ಜನ ಎಲ್ಲೂ ಸೇರುವಂತಿಲ್ಲ. ಅದೇ ಕಾರಣಕ್ಕೆ ನಿಖಿಲ್ ಮದುವೆಗೂ ಹೆಚ್ಚು ಜನರ ಆಹ್ವಾನವಿರಲಿಲ್ಲ. ಆಯ್ದ ಬಂಧು-ಮಿತ್ರ ಸಮ್ಮುಖದಲ್ಲಿ ಈ ಮದುವೆ ನೆರವೇರಿತು.

ಸಾಮಾನ್ಯವಾಗಿ ಹೀರೋಗಳ ಮದುವೆ ಎಂದರೆ, ಇತರೆ ಸ್ಟಾರ್‌ಗಳು ಭಾಗವಹಿಸಿ, ಶುಭ ಹಾರೈಸುವುದು ಸಹಜ. ಆದರೆ, ಮದುವೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿದ್ದರಿಂದ, ಚಿತ್ರರಂಗದ ಗಣ್ಯರೆಲ್ಲಾ ಸೋಷಿಯಲ್​ ಮೀಡಿಯಾ ಮೂಲಕವೇ, ನಿಖಿಲ್ ಮತ್ತು ರೇವತಿ ಅವರಿಗೆ ತಮ್ಮದೇ ರೀತಿಯಲ್ಲಿ ಶುಭ ಕೋರಿದ್ದಾರೆ.

‘ನವರಸ ನಾಯಕ’ ಜಗ್ಗೇಶ್, ಯೋಗರಾಜ್ ಭಟ್, ‘ಬಹದ್ದೂರ್’ ಚೇತನ್’, ‘ಸಿಂಪಲ್’ ಸುನಿ, ಸಂತೋಷ್ ಆನಂದರಾಮ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ. ಇನ್ನು ನಿಖಿಲ್ ಅವರನ್ನು ಅದೃಷ್ಟವಂತ ಎಂದು ಕರೆದಿರುವ ಜಗ್ಗೇಶ್, ‘ಮದುವೆ ಸ್ವರ್ಗದಲ್ಲಿ ನಿಶ್ವಯಿಸಿದ ದೇವರ ನಿಯಮ. ತಂದೆ-ತಾಯಿ, ತಾತ-ಅಜ್ಜಿ ಆಶೀರ್ವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು. ಅದು ಪಡೆದ ಅದೃಷ್ಟವಂತ ನಿಖಿಲ್. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವ ಜೋಡಿಗೆ ಶುಭ ಹಾರೈಕೆ. ನೂರು ಕಾಲ ಸುಖವಾಗಿ ಬಾಳಿ’ ಎಂದು ಹಾರೈಸುತ್ತಾ ಟ್ವೀಟ್ ಮಾಡಿದ್ದಾರೆ ಜಗ್ಗೇಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net