

ಶ್ರೀ ಸತ್ಯಸಾಯಿ ಬಾಬಾ ಶತಮಾನೋತ್ಸವ ಸಮಾರಂಭದಲ್ಲಿ ಸಾಯಿ ಪಲ್ಲವಿ ಭಾಗಿ.
ಸಾಯಿ ಪಲ್ಲವಿ ಸರಳತೆ ಫಿದಾ, ಸೋಶಿಯಲ್ ಮೀಡಿಯಾದಲ್ಲಿ ಕ್ವೀನ್ ಎಂದು ಕರೆದ ನೆಟ್ಟಿಗರು.
ಸಾಮಾನ್ಯ ಭಕ್ತರಂತೆ ನೆಲದ ಮೇಲೆ ಕುಳಿತು ಧ್ಯಾನಿಸಿದ ಸಾಯಿ ಪಲ್ಲವಿ.
ನಟಿ ಸಾಯಿ ಪಲ್ಲವಿ ಅವರು ರಾಮಾಯಣ: ರೈಸ್ ಆಫ್ ಎ ಲೆಜೆಂಡ್ ಸಕ್ಸಸ್ ನಂತರ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನ.23ರಂದು ಸಾಮಾನ್ಯ ಭಕ್ತರಂತೆ..ಸರತಿ ಸಾಲಿನಲ್ಲಿ ನೆಲದ ಮೇಲೆ ಕುಳಿತು ಧ್ಯಾನಿಸುತ್ತಾ. ಮಂತ್ರ ಪಠಿಸುತ್ತಿರುವುದು ವಿಡಿಯೋದಲ್ಲಿದೆ. ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಕ್ತಾದಿಯೊಬ್ಬರು ಅವರು ಕಣ್ಮುಚ್ಚಿ, ಕೈ ಮುಗಿದು ಧ್ಯಾನಿಸುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.
ಪುಟ್ಟಪರ್ತಿಯ ಪ್ರಶಾಂತಿ ನಿಲಯಂನಲ್ಲಿರುವ ಸಾಯಿ ಕುಲ್ವಂತ್ ಸಭಾಂಗಣದಲ್ಲಿ, ಬೂದು ಬಣ್ಣದ, ಹಸಿರು ಅಂಚಿನ, ರೇಷ್ಮೇ ಜರಿಯ ಸೀರೆ ಧರಿಸಿದ್ದ ಸಾಯಿಪಲ್ಲವಿ ಕುಳಿತಿದ್ದಾರೆ. ಪ್ರತಿ ಬಾರಿಯಂತೆ..ಈ ಬಾರಿಯು ಸಿಂಪಲ್ ಮೇಕಪ್, ಜುಮುಕಿ ಧರಿಸಿ ಹರಿಬಿಟ್ಟ ಕೂದಲಿಗೆ ಸಣ್ಣ ಕ್ಲಿಬ್ ಧರಿಸಿದ್ದಾರೆ. ಕಣ್ಣುಮುಚ್ಚಿ ಧ್ಯಾನಸಕ್ತರಾಗಿ ಸಾಯಿಪಲ್ಲವಿ ಕುಳಿತು ಇತರರೊಂದಿಗೆ ಮಂತ್ರ ಪಠಿಸಿರುವುದುವಿಡಿಯೋದಲ್ಲಿ ಇದೆ. ಈ ಶತಮಾನೋತ್ಸವ ಸಮಾರಂಭಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.
ಇಷ್ಟೇ ಅಲ್ಲದೆ ಮೆರವಣಿಗೆ ವೇಳೆಯೂ ಅವರು ಸಾಮಾನ್ಯರಂತೆ ಹಾಡು ಹೇಳುತ್ತಾ ಭಕ್ತರೊಂದಿಗೆ ತೆರಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಇದೆ. ಈ ಪೋಸ್ಟ್ ಹಂಚಿಕೊಳ್ಳುತ್ತಿರುವ ನಟಿಯ ಅಭಿಮಾನಿಗಳು ಕ್ವೀನ್ ಸಾಯಿಪಲ್ಲವಿ ಶ್ರೀ ಸತ್ಯಸಾಯಿ ಬಾಬಾ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಭಾನುವಾರ ಸಂಜೆ ಅವರು ಪುಟ್ಟಪರ್ತಿಗೆ ಭೇಟಿ ನೀಡುವ ಮಾಹಿತಿ ತಿಳಿಯುತ್ತಲೇ ಅಭಿಮಾನಿಗಳು ಪ್ರಾರ್ಥನಾ ಮಂದಿರದ ಬಳಿ ಜಮಾಯಿಸಿದರು. ಸಾಂಪ್ರದಾಯಿಕ ರೇಷ್ಮೆ ಸೀರೆಯಲ್ಲಿ ಧರಿಸಿದ್ದ ಅವರು, ಪ್ರಾರ್ಥನೆಗೆ ಮರಳುವ ಮೊದಲು ಜನಸಮೂಹದತ್ತ ಕೈ ಬೀಸಿ ಧನ್ಯವಾದ ಹೇಳಲು ಸ್ವಲ್ಪ ಹೊತ್ತು ಹೊರಗೆ ಬಂದರು.
ಸಾಯಿ ಪಲ್ಲವಿ ಅವರು ಪುಟ್ಟಪರ್ತಿಗೆ ಭೇಟಿ ನೀಡುವುದು ಮೊದಲೇನಲ್ಲ. ಜೊತೆಗೆ, ಸತ್ಯ ಸಾಯಿ ಬಾಬಾರನ್ನು ಸಾಯಿ ಪಲ್ಲವಿ ಹಾಗೂ ಅವರ ಕುಟುಂಬಸ್ಥರು ಆರಾಧಿಸುತ್ತಾರೆ. ಜಾರ್ಜಿಯಾದಲ್ಲಿ ವೈದ್ಯಕೀಯ ಅಧ್ಯಯನ ಮಾಡುವಾಗ ಸತ್ಯ ಸಾಯಿ ಬಾಬಾರನ್ನು ಧ್ಯಾನಿಸುವುದು ಕೆಲಸ ನಿಭಾಯಿಸಲು ಹೇಗೆ ಸಹಾಯ ಮಾಡಿತು ಎಂಬುದನ್ನು ಅವರು ಹಿಂದೊಮ್ಮೆ ನೆನಪಿಸಿಕೊಂಡಿದ್ದರು.
ಸಾಯಿ ಪಲ್ಲವಿ ಅವರು ನಟಿಸಿರುವ ' ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಹಾಗೂ ಓಂ ಸಿನಿಮಾ ಸದ್ಯ ಥಿಯೇಟರ್ಗಳಲ್ಲಿ ಅಬ್ಬರಿಸುತ್ತಿದೆ. ಇಲ್ಲಿಯವರೆಗೂ ಸಿನಿಮಾ 35.60 ಕೋಟಿ ರೂ. ನಿವ್ವಳ ಗಳಿಸಿ, ಭಾರತದಲ್ಲಿ 942.75 ಕೋಟಿ ರೂ. ಮತ್ತು ಜಾಗತಿಕವಾಗಿ 1,693 ಕೋಟಿ ರೂ. ಗಳಿಸಿದೆ. ಓಂ ಸಿನಿಮಾವು ವಿಶ್ವದಾದ್ಯಂತ 101.7 ಕೋಟಿ ರೂ.ಗಳಿಸಿದೆ, (ಏಜೆನ್ಸೀಸ್).