

ನವೆಂಬರ್6ಕ್ಕಲ್ಲ ಇದಕ್ಕೂ ಮುನ್ನವೇ 'ರಾಮಾಯಣ' ರಿಲೀಸ್ಗೆ ಮುಂದಾದ ಸಿನಿಮಾ ತಂಡ
ನವೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್
ನವೆಂಬರ್ 4 ರಂದು ಭಾರತದಲ್ಲಿ ಪೇಯ್ಡ್ ಪ್ರಿವ್ಯೂ ಪ್ರದರ್ಶನ
Ramayana Part One' locks its release plan: ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ, ದೊಡ್ಡ ಬಜೆಟ್ ಸಿನಿಮಾ ರಾಮಾಯಣ ರಿಲೀಸ್ ಬಗ್ಗೆ ಸಿನಿಮಾ ತಂಡ ಬಿಗ್ ಅಪಡೇಟ್ವೊಂದನ್ನು ಕೊಟ್ಟಿದೆ. ಪೌರಾಣಿಕ ಕತೆ ಹೇಳುವ ರಾಮಾಯಣ ಪಾರ್ಟ್ ಒನ್ ನವೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ.
ಹೌದು, ರಣಬೀರ್ ಕಪೂರ್ ರಾಮನಾಗಿ ನಟಿಸಿರುವ ರಾಮಾಯಣ ಸಿನಿಮಾವು ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ನಟಿ ಸಾಯಿಪಲ್ಲವಿ ಸೀತಾ ಮಾತೆಯಾಗಿ, ಯಶ್ ರಾವಣನಾಗಿ ಅಬ್ಬರಿಸಿದ್ದಾರೆ. ಈ ಸಿನಿಮಾವು ದೀಪಾವಳಿಯಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಸಿನಿಮಾ ರಿಲೀಸ್ ಆಗಲಿದೆ.
'ರಾಮಾಯಣ: ಪಾರ್ಟ್ ಒನ್' ಸಿನಿಮಾವು ಭಾರತದಲ್ಲಿ ನವೆಂಬರ್ 6ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಪಿಂಕ್ ವಿಲ್ಲಾ ವರದಿ ಪ್ರಕಾರ ನವೆಂಬರ್ 5 ಕ್ಕೆ ಮುಂಚಿತವಾಗಿ ಸಿನಿಮಾ ರಿಲೀಸ್ ಆಗಲಿದೆ. ನಿಗದಿಪಡಿಸಲಾಗಿದೆ ನವೆಂಬರ್ 4 ರಂದು ಪೇಯ್ಡ್ ಪ್ರಿವ್ಯೂ ಪ್ರದರ್ಶನವಿರಲಿದೆ ಎಂದು ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಜರ್ಮನಿ, ಯುರೋಪ್ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ರಾಮಾಯಣ ಸಿನಿಮಾವು ನವೆಂಬರ್ 5ರಂದು ರಿಲೀಸ್ ಆಗಲಿದೆ. ಇನ್ನೂ ಬಿಟ್ರನ್, ದಕ್ಷಿಣ ಆಫ್ರೀಕಾ, ಮಾರಿಷಸ್ನಲ್ಲಿ ನವೆಂಬರ್ 6ರಂದು ರಿಲೀಸ್. ಚೀನಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಹಾಂಗ್ ಕಾಂಗ್ ದೇಶಗಳಲ್ಲಿ ರಾಮಾಯಣ ದರ್ಶನವಾಗೋದು ಯಾವಾಗ ಎನ್ನುವ ಫೈನಲ್ ಡೇಟ್ ಅನೌನ್ಸ್ ಆಗಿಲ್ಲ
ರಾಮಾಯಣ ಸಿನಿಮಾವನ್ನು ಎರಡು ಭಾಗಗಳಾಗಿ ವಿಂಗಡನೆ ಮಾಡಲಾಗುತ್ತಿದೆ. ಮೊದಲಾರ್ಧ 'ರಾಮಾಯಣ: ಪಾರ್ಟ್ 1' ನವೆಂಬರ್5ರಂದು ರಿಲೀಸ್ ಆಗಲಿದೆ. ಎರಡನೇ ಭಾಗ 'ರಾಮಾಯಣ: ಪಾರ್ಟ್ 2' ಅನ್ನು 2027 ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಿನಿಮಾ ತಂಡ ಯೋಜನೆ ಹಾಕಿಕೊಂಡಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ , ಸಾಯಿ ಪಲ್ಲವಿ ಹಾಗೂ ಯಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರೊಂದಿಗೆ ಸನ್ನಿ ಡಿಯೋಲ್, ರವಿ ದುಬೆ, ಇಂದಿರಾ ಕೃಷ್ಣನ್, ಶೀಬಾ ಚಡ್ಡಾ, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ಅರುಣ್ ಗೋವಿಲ್, ವಿವೇಕ್ ಒಬೆರಾಯ್ ಮತ್ತು ಕಾಜಲ್ ಅಗರ್ವಾಲ್ರಂತಹ ಘಟಾನುಘಟಿ ನಟ-ನಟಿಯರು ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಶ್ರೀರಾಮನ ಅತಿ ದೊಡ್ಡ ಶಕ್ತಿ ಅವನ ಧನಸ್ಸು ಅಲ್ಲ. ಅವನ ಕ್ಷಮೆ ಅಂದರೆ ಅವರಲ್ಲಿದ್ದ ಕ್ಷಮಿಸುವ ಗುಣ. ಈ ಪಾತ್ರದಲ್ಲಿ ನಟಿಸಲು ನನಗೆ ಎಕ್ಸೈಟ್ಮೆಂಟ್ ಇರಲಿಲ್ಲ. ಇದೊಂದು ದೊಡ್ಡ ಜವಾಬ್ದಾರಿ ದಿನವೂ ನಾನು ಈ ಪಾತ್ರಕ್ಕೆ ಅರ್ಹನಾಗುವುದಕ್ಕಿಂತ, ಈ ಕಥೆಯ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಅರ್ಹನಾಗುವುದು ನನ್ನ ಕರ್ತವ್ಯ ಎಂದುಕೊಳ್ಳುತ್ತಿದ್ದೆ ಎಂದು ರಣಬೀರ್ ಕಪೂರ್ ಮಾತನಾಡಿದ್ದಾರೆ, (ಏಜೆನ್ಸೀಸ್).