ಮೈಸೂರಿನಲ್ಲಿ Dharman​ ಶೂಟಿಂಗ್​​; ಆಟೋ ಹತ್ತಿ, ಫ್ಯಾನ್ಸ್​​ನತ್ತ ಬಂದ ಸೂಪರ್ ​ಸ್ಟಾರ್ ರಜನಿಕಾಂತ್, ವಿಡಿಯೋಗಳು ವೈರಲ್

ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ
ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ
Published on: 
  • ಮೈಸೂರಿನಲ್ಲಿ ಕಾಲಿವುಡ್​ನ ಧರ್ಮನ್​ ಸಿನಿಮಾ ಶೂಟಿಂಗ್​​

  • ಆಟೋದಲ್ಲಿ ಸಿನಿಮಾಕ್ಕಾಗಿ ಪ್ರಯಾಣಿಸಿದ ಸೂಪರ್​ ಸ್ಟಾರ್​ ರಜನಿಕಾಂತ್

  • ಮೈಸೂರಿನ ಚಾಮುಂಡಿ ದರ್ಶನ ಪಡೆದ ವಿಡಿಯೋಗಳು ವೈರಲ್

Rajinikanth in Mysuru for dharman cinema shooting: ಅಕ್ಟೋಬರ್​ 15ರಂದು ಜೈಲರ್​ 2 ಸಿನಿಮಾ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಈ ಹೊತ್ತಿನಲ್ಲಿ ಸೂಪರ್​ ಸ್ಟಾರ್​ ರಜನೀಕಾಂತ್​ ಅವರ ಮುಂಬರುವ ಸಿನಿಮಾ ಧರ್ಮನ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಮೈಸೂರಿನಲ್ಲಿ​ ಚಿತ್ರದ ಸೆಟ್​ನಲ್ಲಿ ಹಾಗೂ ಚಾಮುಂಡೇಶ್ವರಿ ದರ್ಶನ ಪಡೆದ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಓ ಮೈ ಕಡುವುಲೆ, ಡ್ರ್ಯಾಗನ್, ತೆಲುಗು ರಿಮೇಕ್ ಸಿನಿಮಾವಾದ ಒರಿ ದೇವುಡ ಸಿನಿಮಾಕ್ಕೆ ಆಕ್ಷನ್​ ಕಟ್ ಹೇಳಿ ಹಿಟ್​ ಕೊಟ್ಟಿರುವ ನಿರ್ದೇಶಕ ಅಶ್ವಥ್​ ಮಾರಿಮುತ್ತು ಅವರು ರಜನೀಕಾಂತ್​ ಅವರ ಮುಂದಿನ ಸಿನಿಮಾ ಧರ್ಮನ್​ಗಾಗಿ ಆಕ್ಷನ್​ ಕಟ್ ಹೇಳುತ್ತಿದ್ದಾರೆ.

ಧರ್ಮನ್​ ಚಿತ್ರತಂಡ ಮೈಸೂರಲ್ಲಿ

ಧರ್ಮನ್ ಸಿನಿಮಾದ ಚಿತ್ರೀಕರಣಕ್ಕಾಗಿ ಸೂಪರ್​ ಸ್ಟಾರ್​ ರಜನೀಕಾಂತ್​ ಅವರು ಮೈಸೂರಿನಲ್ಲಿ ತಂಗಿದ್ದು, ಸೋಮಾನಾಥ ಪುರದಲ್ಲಿ ಸಿನಿಮಾದ ಹಲವು ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಬುಧವಾರಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. ಬಿಳಿ ಪಂಚೆ, ಶರ್ಟ್​ ಹಾಗೂ ಶಾಲು ಧರಿಸಿ ದೇಗುಲದಿಂದ ಹೊರಕ್ಕೆ ಬರುವಾಗ ಅವರನ್ನು ಕಂಡ ಅಭಿಮಾನಿಗಳು ಹೋ ಎಂದು ಕೂಗಾಡಿದ್ದಾರೆ.

ಆಟೋದಲ್ಲಿ ರಜನೀ ಪ್ರಯಾಣ

ಧರ್ಮನ್​ ಸಿನಿಮಾವು ಶೂಟಿಂಗ್​ ನಡೆಯುತ್ತಿದ್ದ ಸೆಟ್​ನಲ್ಲಿ ರಜನೀಕಾಂತ್ ನೋಡಲು ಫ್ಯಾನ್ಸ್​ ದಂಡು​ ಆಗಮಿಸಿತ್ತು. ಈ ವೇಳೆ ಹಳದಿ ಹಾಗೂ ಹಸಿರು ಮಿಶ್ರಿತ ಆಟೋದಲ್ಲಿ ಬಂದರು. ಭದ್ರತಾ ತಂಡ ಗೇಟ್​ ಮುಚ್ಚಲು ಯತ್ನಿಸಿತು. ಆದರೂ ಆಟೋದಿಂದ ಕೆಳಕ್ಕಿಳಿದು ಬಂದ ಅವರು ನೇರ ಫ್ಯಾನ್ಸ್​​ನತ್ತ ತೆರಳಿ, ಕೈ ಬೀಸಿ ಎಲ್ಲರಿಗೂ ಜೊತೆಗೆ 2002ರಲ್ಲಿ ರಿಲೀಸ್​ ಆಗಿದ್ದ ಬಾಬಾ ಚಿತ್ರದದಲ್ಲಿ ನಮಸ್ಕರಿಸುವಂತೆ ಅಭಿಮಾನಿಗಳತ್ತ ಕೈ ಸನ್ನೆ ಮಾಡಿದರು. ಈ ವೇಳೆ ಬಿಳಿ ಪಂಚೆ ಹಾಗೂ ಮರೂನ್​ ಬಣ್ಣದ ಶರ್ಟ್​ ಅನ್ನು ಅವರು ತೊಟ್ಟಿದ್ದರು.

ಧರ್ಮನ್​ ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?

ಧರ್ಮನ್ ಸಿನಿಮಾದಲ್ಲಿ ರಜನಿಕಾಂತ್, ಸಿಮ್ರಾನ್, ರಾಶಿ ಖನ್ನಾ ಮತ್ತು ಯೋಗಿ ಬಾಬು ಹಾಗೂ ರಾಮ್​ ಪೋತಿನೇನಿ, ಶ್ರೀ ಲೀಲಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಪ್ರಕಾರ ಶ್ರೀಲೀಲಾ ಮೈಸೂರಿನ ಧರ್ಮನ್ ಸೆಟ್‌ನಲ್ಲಿ ಗುಲಾಬಿ ಮತ್ತು ನೀಲಿ ಬಣ್ಣದ ಲಂಗದಾವಣಿ ತೊಟ್ಟಿರುವುದು ದೃಶ್ಯದಲ್ಲಿ. ಜೊತೆಗೆ ರಾಮ್​ ಪೋತಿನೇನಿ, ರಾಶಿ ಖನ್ನಾ ಹಾಗೂ ರಜನೀಕಾಂತ್​ ಅವರು ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋಗಳು ಸಹ ಇವೆ. ಆದರೆ, ಈ ಸಿನಿಮಾದ ಭಾಗವಾಗಿ ಇವರು ಇದ್ದಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಈ ವರ್ಷದ ಜೂನ್‌ನಲ್ಲಿ ಅನೌನ್ಸ್​ ಮಾಡಲಾಗಿದ್ದ ಕಮಲ್ ಹಾಸನ್ ನಿರ್ಮಿಸುತ್ತಿರುವ ಚಿತ್ರಕ್ಕೆ ಧರ್ಮನ್ ಎಂದು ಹೆಸರಿಸಲಾಗಿದೆ. ಅಶ್ವತ್ ಮಾರಿಮುತ್ತು ಅದನ್ನು ನಿರ್ದೇಶಿಸಲಿದ್ದಾರೆ ಎಂದು ಘೋಷಿಸಿದರು. ಫಸ್ಟ್-ಲುಕ್ ಪೋಸ್ಟರ್‌ನಲ್ಲಿ ರಜನಿಕಾಂತ್ ಅವರು ಡಾಕ್ಟರ್​ ಕೋಟ್​ ತೊಡ್ಡು ರಕ್ತಸಿಕ್ತ ಸ್ಕಾಲ್ಪೆಲ್‌ನೊಂದಿಗೆ ಶಸ್ತ್ರಚಿಕಿತ್ಸಾ ಥಿಯೇಟರ್‌ನಲ್ಲಿ ನಿಂತಿರುವುದು ಇದೆ. ಅವರ ಪಾದಗಳ ಬಳಿ ಮೃತ ದೇಹಗಳನ್ನು ಹೊಲಿಯಲಾಗಿರುವುದನ್ನು ತೋರಿಸಲಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net