ವಿಜಯ್​ಗೂ ಚಮಕ್​ ಕೊಟ್ರಾ ಚರಿಷ್ಮಾ ಸುಂದರಿ? ರಶ್ಮಿಕಾ ಬಗ್ಗೆ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ!

1275574
Published on

ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ದೇವರಕೊಂಡ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾರೀ ಸುದ್ದಿಯಾಗಿದ್ದಾರೆ.

ವಿಜಯ್​ ದೇವರಕೊಂಡ ಹುಟ್ಟುಹಬ್ಬ ಆಚರಣೆಗೂ ರಶ್ಮಿಕಾ ಸುದ್ದಿಯಾಗುವುದಕ್ಕೂ ಏನು ಸಂಬಂಧ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ವಿಜಯ್​ ಮತ್ತು ರಶ್ಮಿಕಾ ತುಂಬಾ ಆತ್ಮೀಯರು. ಅಲ್ಲದೆ, ವಿಜಯ್ ಜತೆ ಆಗಾಗ ಹೋಟೆಲ್​ ಹಾಗೂ ಪ್ರವಾಸಿ ತಾಣಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಈ ವರ್ಷ ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾತಿ ಹಬ್ಬ ಕೂಡ ಆಚರಿಸಿದ್ದರು. ಅಲ್ಲದೆ, ಹೊಸ ವರ್ಷದಂದು ವಿಜಯ್​ ಕುಟುಂಬದ ಜತೆ ಗೋವಾದಲ್ಲಿ ರಶ್ಮಿಕಾ ವರ್ಷಾಚಾರಣೆ ಮಾಡಿದ್ದರು. ವಿಜಯ್​ಗಾಗಿ ಒಮ್ಮೆ ಅಮೆರಿಕಕ್ಕೂ ರಶ್ಮಿಕಾ ಪ್ರವಾಸ ಮಾಡಿದ್ದರು. ಇಷ್ಟೊಂದು ಆತ್ಮೀಯಳಾಗಿದ್ದ ರಶ್ಮಿಕಾ, ಇದೀಗ ವಿಜಯ್​ ಬರ್ತಡೇಗೆ ಒಂದೇ ಒಂದು ಶುಭ ಕೋರಿಲ್ಲ ಅಂದರೆ ಅಚ್ಚರಿಯಲ್ಲದೇ ಮತ್ತೇನು? ಈ ಕಾರಣದಿಂದಲೇ ರಶ್ಮಿಕಾ ಇದೀಗ ಭಾರೀ ಸುದ್ದಿಯಾಗಿದ್ದಾರೆ.

ರಶ್ಮಿಕಾ ವಿಶ್ ಮಾಡದೇ ಇರೋದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ರಶ್ಮಿಕಾ ಮತ್ತು ವಿಜಯ್ ನಡುವೆ ಬಿರುಕು ಮೂಡಿದೆ ಅನ್ನೋ ಚರ್ಚೆ ಶುರುವಾಗಿದೆ. ಅಷ್ಟೊಂದು ಆತ್ಮೀಯರಾಗಿದ್ದವರೂ ವಿಶ್ ಮಾಡದೇ ಇರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಇಬ್ಬರೂ ರಿಲೇಷನ್​​ಶಿಪ್ ನಲ್ಲಿದ್ದಾರೆ ಅನ್ನೋ ಗಾಸಿಪ್ ಇತ್ತು. ಮದ್ವೆನೂ ಆಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದರೆ, ಇದೀಗ ರಶ್ಮಿಕಾ ಶುಭಕೋರದೇ ಇರುವುದು ತೀವ್ರ ಕುತೂಹಲ ಮೂಡಿಸಿದ್ದು, ರಶ್ಮಿಕಾ ಏನು ಉತ್ತರ ನೀಡಲಿದ್ದಾರೆ ಎಂಬುದರ ಮೇಲೆ ಎಲ್ಲರ ಗಮನವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net