ವಿಲನ್​ ಆದ ಬಿಗ್​ಬಾಸ್​ ಕಾರ್ತಿಕ್​ ಮಹೇಶ್​! ಬೆಳ್ಳಿತೆರೆಗೆ ಸೋಷಿಯಲ್​ ಮೀಡಿಯಾ ಜೋಡಿ ಪ್ರತೀಕ್​, ಮೌಲ್ಯ

_zzcvd
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಅಭಿಮಾನ ಬಳಗ ಹೊಂದಿರುವ ಜೋಡಿ ಪ್ರತೀಕ್​ ಮತ್ತು ಮೌಲ್ಯ. ನಿಜ ಜೀವನದ ದಂಪತಿ ಇದೀಗ ‘ದ್ರುವತಾರೆ‘ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು ಖುದ್ದು ಪ್ರತೀಕ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇತ್ತೀಚೆಗಷ್ಟೆ ‘ದ್ರುವತಾರೆ‘ ಫಸ್ಟ್​ ಲುಕ್​ ಪೋಸ್ಟರ್​ ರಿಲಿಸ್​ ಮಾಡಲಾಗಿದೆ.

ಪ್ರತೀಕ್​ ಮತ್ತು ಮೌಲ್ಯ ಜತೆ ರಮೇಶ್ ಭಟ್, ಮೂಗು ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿ.ಡಿ. ಸತೀಶ್, ಸಂಗೀತ ನಾರಾಯಣ್ ಪ್ರಮುಖ ತಾರಾಗಣದಲ್ಲಿದ್ದಾರೆ. ವಿಶೇಷ ಅಂದರೆ ಬಿಗ್​ಬಾಸ್​ ಖ್ಯಾತಿಯ ಕಾರ್ತಿಕ್​ ಮಹೇಶ್​ ಈ ಚಿತ್ರದಲ್ಲಿ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 70 ದಿನಗಳ ಬೆಂಗಳೂರು ಮತ್ತು ಸಕಲೇಶಪುರ ಸುತ್ತಮುತ್ತ ನಡೆಸಲಾಗಿದೆ.

ಚಿತ್ರಕ್ಕೆ ಸೂರಜ್ ಜೋಯ್ಸ್ ಸಂಗೀತವನ್ನು ನೀಡುತ್ತಿದ್ದಾರೆ. ಜೀಚನ್ ಕ್ಯಾಮರಾ ಹಿಡಿದಿದ್ದಾರೆ. ತನ್ನ ಎಲ್ಲಾ ಕೆಲಸವನ್ನು ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ ಸೆಪ್ಟೆಂಬರ್ ಹೊತ್ತಿಗೆ ತೆರೆಗೆ ತರುವ ಆಲೋಚನೆ ಪ್ರತೀಕ್​ ಮತ್ತು ಟೀಮ್​ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net