OM - Chapter 1 ರಿಲೀಸ್ ಡೇಟ್ ಅನೌನ್ಸ್; ನ.20ರಂದು ಮಮ್ಮುಟ್ಟಿ, ಧನುಷ್ ಕಾಂಬಿನೇಷನ್ ಸಿನಿಮಾ ಅಬ್ಬರ

OM - Chapter 1 ರಿಲೀಸ್ ಡೇಟ್ ಅನೌನ್ಸ್;  ನ.20ರಂದು ಮಮ್ಮುಟ್ಟಿ, ಧನುಷ್ ಕಾಂಬಿನೇಷನ್ ಸಿನಿಮಾ ಅಬ್ಬರ
Published on: 
  • ಧನುಷ್ ನಟನೆ ಓಂ ಅಧ್ಯಾಯ 1 ಸಿನಿಮಾ ರಿಲೀಸ್ ಡೇಟ್​ ಅನೌನ್ಸ್

  • ನವೆಂಬರ್ 20ರಂದು 'ಓಂ - ಅಧ್ಯಾಯ 1: ಉಧಿರಾಮ್ - ದಿ ಬ್ಲಡ್ ವುಡ್' ಬೆಳ್ಳಿತೆರೆಗೆ

  • ಸಾಯಿಪಲ್ಲವಿ, ಶ್ರೀಲೀಲಾ ಮತ್ತು ನಾಸಿರುದ್ದೀನ್ ಶಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ

ನಟ ಧನುಷ್, ಮಾಲಿವುಡ್​ ನಟ ಮಮ್ಮುಟ್ಟಿ ಹಾಗೂ ಸಾಯಿಪಲ್ಲವಿ ಕಾಂಬಿನೇಷನ್​ನ ಓಂ;ಅಧ್ಯಾಯ1 ಅಕ್ಟೋಬರ್​ 16ರಂದು ರಿಲೀಸ್​ ಆಗಬೇಕಿತ್ತು. ಆದರೆ, ಜೈಲರ್​ 2ಗಾಗಿ ಮುಂದೂಡಲಾಗಿತ್ತು. ಇದ್ರಿಂದ ಬೇಸರದಲ್ಲಿದ್ದ ಫ್ಯಾನ್ಸ್​ಗೆ ಚಿತ್ರತಂಡ ಗುಡ್​ನ್ಯೂಸ್ ಕೊಟ್ಟಿದ್ದು, ಹೊಸ ಡೇಟ್​ ಅನ್ನು ರಿವೀಲ್ ಮಾಡಿದೆ.

'ಓಂ - ಅಧ್ಯಾಯ 1: ಉಧಿರಾಮ್ - ದಿ ಬ್ಲಡ್ ವುಡ್' ಸಿನಿಮಾವು ನವೆಂಬರ್ 20ರಂದು ರಿಲೀಸ್​ ಆಗಲಿದೆ ಈ ಬಗ್ಗೆ ಸಿನಿಮಾ ತಂಡ ಹಾಗೂ ನಟ ಮಮ್ಮುಟಿ ಸಹ ತಮ್ಮ ಎಕ್ಸ್​ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ. #OM See you all in theatres on November 20 ಎಂದು ಬರೆದುಕೊಳ್ಳುವ ಮೂಲಕ ಅಧಿಕೃತ ಮಾಹಿತಿಯನ್ನು ಕೊಟ್ಟಿದ್ದಾರೆ.

ಗನ್​ ಹಿಡಿದು ನಿಂತ ಸ್ಟಾರ್​ ನಟರು

ವಂಡರ್​ಬಾರ್ ಫಿಲ್ಮ್​ನ ಎಕ್ಸ್​ ಖಾತೆಯಿಂದ ಹಂಚಿಕೊಂಡಿರುವ ಫೋಟೋದಲ್ಲಿ ಧನುಷ್​ ಮತ್ತು ಮಮ್ಮೂಟಿ ಗನ್​ ಹಿಡಿದು ನಿಂತಿದ್ದಾರೆ. ಇದೊಂದು ರಕ್ತ ಸಿಕ್ತ ಕೈಗಳು, ಹಿಂದೆ ಒಂದು ಕಾರು ಇರುವುದು ಪೋಸ್ಟರ್​ನಲ್ಲಿದೆ. ಅರಣ್ಯ ಪ್ರದೇಶದ ಸುತ್ತ ಸುತ್ತುವ ಕತೆ ಇದಾಗಿದೆ ಎನ್ನಲಾಗಿದೆ.

ಅಮರನ್​ ನಿರ್ದೇಶಕ ನಿರ್ದೇಶನದ ಸಿನಿಮಾ

ಅಮರನ್​ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ಈ ಸಿನಿಮಾಗೆ ಆಕ್ಷನ್​ ಕಟ್ ಹೇಳಿದ್ದು, ಧನುಷ್, ಮಮ್ಮುಟ್ಟಿ, ಸಾಯಿಪಲ್ಲವಿ, ಶ್ರೀಲೀಲಾ ಮತ್ತು ನಾಸಿರುದ್ದೀನ್ ಶಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ.

ಎಳಿಲ್ ಅರಸು ಕೆ. ಛಾಯಾಗ್ರಹಣ ನಿರ್ವಹಿಸಿದರೆ, ಆರ್. ಕಲೈವಾಣನ್ ಸಂಕಲನ, ಚಿತ್ರದ ತಾಂತ್ರಿಕ ತಂಡದಲ್ಲಿ ಎ. ಪನ್ನೀರ್‌ಸೆಲ್ವಂ ಕಲಾ ನಿರ್ದೇಶಕರಾಗಿದ್ದಾರೆ. ಯಾನಿಕ್ ಬೆನ್ ಮತ್ತು ಕೆಚಾ ಖಂಫಕ್ಡೀ ಸಾಹಸ ನೃತ್ಯ ಸಂಯೋಜನೆಯಲ್ಲಿ ಕೆಲಸ ಮಾಡಿದ್ದಾರೆ.

ಜೈಲರ್​2ನಿಂದ ಸಿನಿಮಾ ರಿಲೀಸ್ ಮುಂದೂಡಿಕೆ

ಇತ್ತೀಚೆಗೆ ನಟ ಧನುಷ್​ ಅವರು ಓಂ ಸಿನಿಮಾ ರಿಲೀಸ್​ ಆಗುವ ದಿನಾಂಕ ಮುಂದೂಡಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. 'ನಾವು ಹಲವು ವರ್ಷದಿಂದ ನೆಚ್ಚಿಕೊಂಡಿರುವ ರಜನೀಕಾಂತ್​ ಸರ್ ನಟನೆಯ ಜೈಲರ್​ 2 ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ, ಅವರ ಮೇಲಿನ ಗೌರವದಿಂದಾಗಿ ಓಂ ಸಿನಿಮಾ ರಿಲೀಸ್ ಆಗುವ ದಿನಾಂಕವನ್ನು ಮುಂದೂಡಲು ನಿರ್ಧರಿಸಿದ್ದೇವೆ. ನಮ್ಮ ಸಿನಿಮಾ ದೀಪಾವಳಿಗೂ ರಿಲೀಸ್ ಆಗೋದಿಲ್ಲ. ಸೂರ್ಯ ಅವರ 'ಸೀನ್' ಸಿನಿಮಾ ಅಂದು ರಿಲೀಸ್ ಆಗ್ತಿದೆ, ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ' ಎಂದು ಬರೆದುಕೊಂಡಿದ್ದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net