ರಾಷ್ಟ್ರ ಪ್ರಶಸ್ತಿ ವಿಜೇತೆ "ಯಾಮಿ ಗೌತಮ್​" Yami Gautam

Yami Gautam: ತಮ್ಮ ಬಹುಮುಖ ಪ್ರತಿಭೆಯೊಂದಿಗೆ ಬಾಲಿವುಡ್​ನಲ್ಲಿ ಅದರಲ್ಲೂ ದೇಶಪ್ರೇಮವನ್ನು ಸಾರುವ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತನ್ನದೇ ಆದ ಫ್ಯಾನ್​ ಬೇಸ್​ ಹೊಂದಿರುವ ನಟಿ ಎಂದರೆ ಅದು ಯಾಮಿ ಗೌತಮ್​ ಆಗಿದ್ದಾರೆ. ಇವರು ಧುರಂಧರ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಪತ್ನಿ ಕೂಡ ಆಗಿದ್ದಾರೆ. ಕೆಲ ದಿನಗಳ ಹಿಂದೆ ಯಾಮಿ ಅಭಿನಯದ ಆರ್ಟಿಕಲ್​ 370 ಸಿನಿಮಾದಲ್ಲಿನ ನಟನೆಗಾಗಿ ಭಾರತ ಸರ್ಕಾರ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈಗ ಯಾಮಿ, ನಯೀ ನವೇಲಿ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾದ ಟ್ರೇಲರ್ ಲಾಂಚ್​ ಮೊದಲು ನಡೆಸಿದ ಫೋಟೊ ಶೂಟ್​ನಲ್ಲಿ ಕ್ಲಿಕ್​ಕಿಸಿದ ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತೆ "ಯಾಮಿ ಗೌತಮ್​" Yami Gautam
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net