

ಬೆಂಗಳೂರು: ಸಿನಿಮಾದ ಕಥೆ ಆಯ್ಕೆ ವಿಚಾರದಲ್ಲಿ ನಟ, ನಿರ್ಮಾಪಕ ಪುನೀತ್ ರಾಜ್ಕುಮಾರ್ ಮತ್ತೊಮ್ಮೆ ಗೆದ್ದಿದ್ದಾರೆ. ಈ ಹಿಂದಿನ ‘ಕವಲುದಾರಿ’ಯಲ್ಲಿ ಕಂಟೆಂಟ್ಗೆ ಒತ್ತು ನೀಡಿದ್ದ ಪುನೀತ್, ‘ಮಾಯಾಬಜಾರ್’ನಲ್ಲೂ ಅದನ್ನೇ ಪ್ರಧಾನವಾಗಿಸಿಕೊಂಡಿದ್ದಾರೆ. ಸಣ್ಣ ಬಜಾರ್ನಲ್ಲಿ ಅವರು ಕುತೂಹಲದ ಕೋಟೆಯನ್ನೇ ನಿರ್ವಿುಸಿದ್ದಾರೆ. ಅದನ್ನು ಕಟ್ಟಿಸಿದ್ದು ಪುನೀತ್ ಅವರಾದರೆ, ಆ ಕೋಟೆ ಕಟ್ಟಿದ್ದು ನಿರ್ದೇಶಕ ರಾಧಾಕೃಷ್ಣ ರೆಡ್ಡಿ. ಚೊಚ್ಚಲ ಸಿನಿಮಾದಲ್ಲಿಯೇ ನಿರ್ದೇಶಕ ರಾಧಾಕೃಷ್ಣ, ‘..ಬಜಾರ್’ ಒಳಗಿನ ಹಲವು ಸತ್ಯಾಸತ್ಯತೆಗಳಿಗೆ, ಸೂಕ್ಷ್ಮತೆಯ ಕನ್ನಡಿ ಹಿಡಿದಿದ್ದಾರೆ.
ಚಿತ್ರ: ಮಾಯಾಬಜಾರ್ 2016 ನಿರ್ದೇಶನ: ರಾಧಾಕೃಷ್ಣ ರೆಡ್ಡಿ ನಿರ್ಮಾಣ: ಪಿಆರ್ಕೆ ಪ್ರೊಡಕ್ಷನ್ಸ್ ಪಾತ್ರವರ್ಗ: ಅಚ್ಯುತ್ ಕುಮಾರ್, ರಾಜ್ ಬಿ. ಶೆಟ್ಟಿ, ವಸಿಷ್ಠ ಸಿಂಹ, ಚೈತ್ರಾ ರಾವ್, ಪ್ರಕಾಶ್ ರೈ, ಸಾಧುಕೋಕಿಲ, ಸುಧಾರಾಣಿ ಮುಂತಾದವರು.
| ಮಂಜು ಕೊಟಗುಣಸಿ