ಮಮಿತಾ ಮೈಲಿಗಲ್ಲು! : ತ್ರಿಬಲ್ ಹಿಟ್ ಬಳಿಕ ನಟಿಯ ಮತ್ತೊಂದು ಚಿತ್ರದ ರಿಲೀಸ್ ಡೇಟ್ ಅನೌನ್ಸ್ mamitha baiju

ಈ ವರ್ಷದ ದ್ವಿತೀಯಾರ್ಧವು ಮಾಲಿವುಡ್ ನಟಿ ಮಮಿತಾ ಬೈಜುಗೆ ಅದೃಷ್ಟ ತಂದುಕೊಟ್ಟಿದೆ. 2026ರಲ್ಲಿ ನಟಿಯ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದು, ಅದರಲ್ಲಿ ಮೂರು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದ ಮೈಲಿಗಲ್ಲು ಸಾಧಿಸಿವೆ.
mamitha baiju
ಮಮಿತಾ ಬೈಜುinstagram
Published on: 

ಈ ವರ್ಷದ ದ್ವಿತೀಯಾರ್ಧವು ಮಾಲಿವುಡ್ ನಟಿ ಮಮಿತಾ ಬೈಜುಗೆ ಅದೃಷ್ಟ ತಂದುಕೊಟ್ಟಿದೆ. 2026ರಲ್ಲಿ ನಟಿಯ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದು, ಅದರಲ್ಲಿ ಮೂರು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದ ಮೈಲಿಗಲ್ಲು ಸಾಧಿಸಿವೆ. ತಮಿಳಿನ ‘ಜನಾಯಗನ್’ (325 ಕೋಟಿ ರೂ.), ‘ವಿಶ್ವನಾಥ್ ಆ್ಯಂಡ್ ಸನ್ಸ್’ (260 ಕೋಟಿ ರೂ.) ಮತ್ತು ಮಲಯಾಳಂ ‘ಬೆಥೆಹ್ಲೆಂ ಕುಡುಬಂ ಯೂನಿಟ್’ (323 ಕೋಟಿ ರೂ.) ಗೆಲುವು ಸಾಧಿಸುವ ಮೂಲಕ ನಟಿಯ ವರ್ಚಸ್ಸನ್ನು ಹೆಚ್ಚಿಸಿವೆ. ಆ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನು ತನ್ನತ್ತ ಸೆಳೆದಿರುವ ಮಮಿತಾ ಇದೀಗ ಮತ್ತೊಂದು ಹೊಸ ಚಿತ್ರದ ಮೂಲಕ ಸಿದ್ಧರಾಗಿದ್ದಾರೆ. ಅದೇ ತಮಿಳಿನ ‘ಇರಂಡು ವಾನಮ್’. ಈ ರೊಮ್ಯಾಂಟಿಕ್ ಡ್ರಾಮಾಕ್ಕೆ ರಾಮ್‌ಕುಮಾರ್ ನಿರ್ದೇಶನವಿದ್ದು, ವಿಷ್ಣು ವಿಶಾಲ್ ಹಾಗೂ ಮಮಿತಾ ಮುಖ್ಯಭೂಮಿಕೆಯಲ್ಲಿದ್ದಾರೆ. ಸದ್ಯ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಅಕ್ಟೋಬರ್ 23ಕ್ಕೆ ರಿಲೀಸ್ ಆಗಲಿದೆ. ಆ ಮೂಲಕ ಮಮಿತಾ ಅಭಿನಯದ ಐದನೇ ಸಿನಿಮಾ ಈ ವರ್ಷ ಬಿಡುಗಡೆಗೆ ಸಿದ್ಧವಾಗಿದೆ.-ಏಜೆನ್ಸೀಸ್

ಮಾಲಿವುಡ್‌ನಲ್ಲಿ ಛಾಪು

ಬ್ಯಾಕ್ ಟು ಬ್ಯಾಕ್ ಹಿಟ್ ಮೂಲಕ ಮಮಿತಾ ಬೈಜು ಈ ವರ್ಷ ಮಾಲಿವುಡ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ನಟಿಯ ‘ಜನನಾಯಗನ್’, ‘ವಿಶ್ವನಾಥ್ ಆ್ಯಂಡ್ ಸನ್ಸ್’ ಹಾಗೂ ‘ಬೆಥ್ಲೆಹಂ ಕುಡುಬಂ ಯೂನಿಟ್’ ಮೂರು ಚಿತ್ರಗಳು ಕೇರಳಂ ಬಾಕ್ಸಾಫೀಸ್‌ನಲ್ಲಿ 178 ಕೋಟಿ ರೂ. ಗಳಿಕೆ ಮಾಡಿವೆ. ಈ ಸಾಧನೆ ಮಾಡಿದ ಮೊದಲ ನಟಿ ಹಾಗೂ ಎರಡನೇ ಮಲಯಾಳಂ ಕಲಾವಿದೆ ಎಂಬ ಹಿರಿಮೆಗೆ ಮಮಿತಾ ಪಾತ್ರರಾಗಿದ್ದಾರೆ. ಕಳೆದ ವರ್ಷ ನಟ ಮೋಹನ್ ಲಾಲ್ ಕೇರಳಂ ಬಾಕ್ಸಾಫೀಸ್‌ನಲ್ಲಿ 250 ಕೋಟಿ ರೂ. (‘ಎಂಪುರಾನ್ 2’, ‘ಹೃದಯಪೂರ್ವಂ’, ‘ತುಡರುಂ) ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net