

ಮಜ ಕೊಡದ ಬಿಗ್ಬಾಸ್ ಕನ್ನಡ 13, ಗಿಲ್ಲಿನ ಕರೆಸಿ ಎಂದ ವೀಕ್ಷಕರು
ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಟದ ಬಗ್ಗೆ ಸುದೀಪ್ ಟಾಕ್
ಒಗ್ಗಟ್ಟಿನ ಕೊರತೆ, ಟಾಸ್ಕ್ ರದ್ದಾದ ಬಗ್ಗೆ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್
ಖಾಲಿಯಾಗಿದ್ದ ಬಿಗ್ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಹೈಜಾಕರ್ ಆಗಿ ಎಂಟ್ರಿ ಕೊಟ್ಟ ಗಾನವಿ, ಪ್ರಶಾಂತ್ ಹಾಗೂ ಸೋನಿಕಾ ಆಟಗಳು ಅಷ್ಟಾಗಿ ವೀಕ್ಷಕರಿಗೆ ಮಜ ಕೊಟ್ಟಿಲ್ಲ. ಗಾನವಿಯವರ ಕಿರುಚಾಟ, ನಗುವೇ ತರಿಸದ ಪ್ರಶಾಂತ್ ಕಾಮಿಡಿಗೆ ರೋಸಿ ಹೋದ ಜನರು ಮತ್ತೆ ಗಿಲ್ಲಿನ ಕರಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಈ ವಾರ ಕ್ಯಾಪ್ಟನ್ ಸ್ಥಾನಕ್ಕಾಗಿ ನಡೆದ ಎರಡು ಟಾಸ್ಕ್ಗಳಲ್ಲಿ ಗಾನವಿ ನಾಯಕತ್ವದ ಗ್ರೀನ್ ಟೀಂ ಗೆದ್ದುಕೊಂಡಿತ್ತಾದರೂ ಸಹ ಉಸ್ತುವಾರಿಗಳಾದ ಮಂಜ ಮತ್ತು ಲಿಖಿತ್ ಪೆದ್ದಾಟದಿಂದ ಕ್ಯಾಪ್ಟನ್ ಸ್ಥಾನಕ್ಕೆ ಟಾಸ್ಕ್ ರದ್ದು ಮಾಡಲಾಗಿತ್ತು. ಇತರ ಸ್ಪರ್ಧಿಗಳಿಗೆ ಚಾನ್ಸ್ ಕೊಡದೆ ಕಿರುಚಾಡಿದ ಗಾನವಿ ವಿರುದ್ಧ ಇಡೀ ಮನೆ ನಿಂತು ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದರು. ಉಸ್ತುವಾರಿ ಸ್ಥಾನವನ್ನು ಸರಿಯಾಗಿ ನಿರ್ವಹಿಸದ ಮಂಜನನ್ನು ಸಹ ಈ ಬಾರಿ ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಈ ಎಲ್ಲ ವಿಚಾರದ ಬಗ್ಗೆ ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಚರ್ಚೆಯಾಗಲಿದೆ. ಈ ಬಗ್ಗೆ ಪ್ರೊಮೋಸಹ ರಿಲೀಸ್ ಆಗಿದೆ.
ಹೊಸದಾಗಿ ಬಂದ ಸ್ಪರ್ಧಿಗಳು ಮನೆಯಲ್ಲಿ ಯಾವ ರೀತಿಯ ಮನರಂಜನೆ ನೀಡುತ್ತಿದ್ದಾರೆ, ಹಳೆಯ ಸ್ಪರ್ಧಿಗಳೊಂದಿಗೆ ಅವರ ಹೊಂದಾಣಿಕೆ ಹೇಗಿದೆ ಎಂಬ ಬಗ್ಗೆ ಮಾತುಕತೆ ನಡೆಯಲಿದೆ. ' ನಿಜವಾಗಿಯೂ ಸ್ಪರ್ಧಿಗಳು ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರಾಅಥವಾ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಟದ ಮಜಲನ್ನು ಬದಲಾಯಿಸಿದ್ದಾರಾ. ಇಲ್ಲ ಹಳೆಯ ಸ್ಪರ್ಧಿಗಳ ಜೊತೆ ಒಗ್ಗಿಕೊಂಡಿದ್ದಾರಾ' ಎನ್ನುವ ಎಲ್ಲ ವಿಚಾರದ ಬಗ್ಗೆ ಈ ಬಾರಿ ಮಾತನಾಡಲಾಗುತ್ತದೆ ಎನ್ನುವುದನ್ನು ಸುದೀಪ್ ಉಲ್ಲೇಖಿಸಿದ್ದಾರೆ.
ತಾಂಡವ್ ಅವರು ಕ್ಯಾಪ್ಟನ್ ಸ್ಥಾನ ಹೈಜಾಕ್ ಮಾಡುವ ಮೂಲಕ ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಅವರು ಕಂಡಂತೆ ಆಸಿಯಾಗೆ ಸ್ನೇಹವನ್ನು ದುರ್ಬಳಕೆ ಮಾಡಿಕೊಳ್ಳುವವರು ಎಂದು ಫಲಕ ಕೊಟ್ಟಿದ್ರೆ, ಶಾಸ್ತ್ರಿಗೆ ಹೊಟ್ಟೆ ಕಿಚ್ಚು, ಸಂಗೀತಾಗೆ ಮುಖವಾಡ, ಲಿಖಿತ್ಗೆ ಮ್ಯಾನಿಪುಲೇಟ್ ಹಾಗೂ ಜಗದೀಶ್ಗೆ ಬೇರೆಯವರ ನೆರಳಲ್ಲಿ ಬದುಕುವವರು ಎನ್ನುವ ಫಲಕ ಕೊಟ್ಟಿದ್ದರು. ಈ ಬಗ್ಗೆ ಎಲ್ಲ ಸ್ಪರ್ಧಿಗಳು ದಿಕ್ಕಾರ ಕೂಗಿದ್ದರು. ತಾಂಡವ್ರ ಈ ನಿರ್ಧಾರ ಸರಿಯಾ, ಕ್ಯಾಪ್ಟನ್ ಆಗಿ ಎಂಟ್ರಿ ಕೊಟ್ಟ ನಂತರ ಅವರು ಬಿಗ್ಬಾಸ್ ಮನೆಯಲ್ಲಿ ಆಟದ ತಂತ್ರವನ್ನು ಬದಲಾಯಿಸಿದ್ದಾರಾ ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ.
ಹಳ್ಳಿ ಪವರ್ನಲ್ಲಿ ಘಾಟಿ ಗಾನವಿ ಎಂದೇ ಫೇಮಸ್ ಆದ ಇವರು ತಮ್ಮ ಇಡೀ ಟೀಂ ಅನ್ನು ಒಟ್ಟಾಗಿಟ್ಟುಕೊಂಡು ಎರಡು ಟಾಸ್ಕ್ನಲ್ಲಿ ಗೆದ್ದಿದ್ದರು. ಭಾರ ಹೊತ್ತ ಧೀರ ಟಾಸ್ಕ್ನಲ್ಲಿ ಗಗನ್, ಸೌಂದರ್ಯ ಹಾಗೂ ಇತರ ಸ್ಪರ್ಧಿಗಳಿಗೆ ಚಾನ್ಸ್ ನೀಡದ ಕಾರಣ ಅವರ ಟೀಂ ಸದಸ್ಯರು ಅವರ ವಿರುದ್ಧ ನಿಂತರು. ಕಳಪೆ ಎಂದು ಬಂದಾಗ ಜಗದೀಶ್, ಗಗನ್ ಹಾಗೂ ಸೌಂದರ್ಯ ಸೇರಿದಂತೆ ಹಲವರು ಗಾನವಿ ವಿರುದ್ಧ ನಿಂತರು. ನಾನು ಒಂಟಿಯಾಗಿ ನಿಂತು ಹೋರಾಡ್ತೇನೆ ಎಂದಿದ್ದರು. ಸದ್ಯ ಜೈಲಿನಲ್ಲಿ ಗಾನವಿ ಇದ್ದಾರೆ. ಗಾನವಿ ಅವರ ಈ ವರ್ತನೆ ಸರಿಯಿತ್ತಾ? ಎನ್ನುವ ಪ್ರಶ್ನೆ ಇನ್ನೂ ಹಲವರಲ್ಲಿ ಇದೆ.
ಲಿಖಿತ್ ಯಾವ ಟಾಸ್ಕ್ ಅನ್ನು ಸರಿಯಾಗಿ ಆಡದೆ, ಆಸಿಯಾ ವಿರುದ್ಧ ಆಗಾಗ್ಗೆ ಇರಿಟೇಟ್ ಮಾಡುತ್ತಿರುವ ಬಗ್ಗೆ ಚರ್ಚೆ ಮಾಡಲು ವೀಕ್ಷಕರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರಾ ಅಥವಾ ಈ ಬಾರಿ ಉಸ್ತುವಾರಿಗಳಾಗಿದ್ದ ಲಿಖಿತ್ ಮತ್ತು ಮಂಜುನನ್ನು ಹೇಗೆ ತರಾಟೆಗೆ ತೆಗೆದುಕೊಳ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).