

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕಿಯಾರಾ ಅಡ್ವಾನಿ
ಇನ್ಸ್ಟಾಗ್ರಾಮ್ನಲ್ಲಿ ಹೊಸ ಪೋಸ್ಟ್ ಹಂಚಿಕೊಂಡ ಟಾಕ್ಸಿಕ್ ಚೆಲುವೆ
ಮತ್ತೆ ಬದುಕಿಗೆ ಶ್ರೇಷ್ಠ ಉಡುಗೊರೆಯೊಂದು ಸಿಕ್ಕಿದೆ ಎಂದು ಪೋಸ್ಟ್
Kiara-Sidharth announce second pregnancy: ಟಾಕ್ಸಿಕ್ನಲ್ಲಿ ನಾದಿಯಾಳಾಗಿ ಮಿಂಚಿದ್ದ ಕಿಯಾರಾ ಅಡ್ವಾನಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ವಿಚಾರವನ್ನು ಬಾಲಿವುಡ್ನ ಸ್ಟಾರ್ ದಂಪತಿ ಅಧಿಕೃತವಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಕಿಯಾರಾ ಅಡ್ವಾನಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ 2025 ಜುಲೈ15ರಂದು ತಮ್ಮ ಮೊದಲ ಮಗು ಸರಯಾಳನ್ನು ಬರಮಾಡಿಕೊಂಡಿದ್ದರು. ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಅಕ್ಟೋಬರ್ 7ರಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾರೆ
ಸರಯಾ, ಕಿಯಾರಾ ಹಾಗೂ ಸಿದ್ಧಾರ್ಥ್ ಕೈ ಮೇಲೆ ಬಿಳಿ ಬಣ್ಣದ ಪುಟ್ಟದಾದ ಸಾಕ್ಸ್ಟ್ ಇಟ್ಟು ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆ ಕೊಟ್ಟಿರುವುದು ಹೀಗೆ, 'ನಮ್ಮ ಬದುಕಿಗೆ ಮತ್ತೊಂದು ಶ್ರೇಷ್ಠ ಉಡುಗೊರೆ ಸಿಕ್ಕಿದೆ. ನಮ್ಮ ಮನವು ಸದ್ಯ ಪ್ರೀತಿ ಮತ್ತು ಕೃತಜ್ಞತಾ ಭಾವದಿಂದ ಕೂಡಿದೆ' ಎಂದು ಬರೆದುಕೊಂಡಿದ್ದಾರೆ ಕಿಯಾರ.
ದಂಪತಿಯ ಈ ಪೋಸ್ಟ್ಗೆ ಸಿನಿಮಾ ರಂಗದ ಗಣ್ಯರು, ನಟ-ನಟಿಯರು ಕಂಗ್ರ್ಯಾಟ್ಸ್ ಹೇಳುವ ಮೂಲಕ ಅಭಿನಂದಿಸಿದ್ದಾರೆ. ಕರಣ್ ಜೋಹರ್, ಆಥಿಯಾ ಶೆಟ್ಟಿ, ಭೂಮಿ ಪಡ್ನೇಕರ್ ಮತ್ತು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಹಾರೈಸಿದ್ದಾರೆ.
2018ರಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಶೇರ್ ಷಾ ಸಿನಿಮಾ ಮೂಲಕ ಪರಿಚಿತರಾದರು. ಇಬ್ಬರ ಬಗ್ಗೆ ಡೇಟಿಂಗ್ ವದಂತಿಗಳು ಹರಿದಾಡಿತ್ತು. ಊಹಾಪೋಹದ ಮಧ್ಯೆ ಫೆಬ್ರವರಿ 2023 ರಲ್ಲಿ ರಾಜಸ್ಥಾನದಲ್ಲಿ ಮದುವೆಯಾದರು, (ಏಜೆನ್ಸೀಸ್)