Khashaba - ಒಲಿಂಪಿಕ್​ನಲ್ಲಿ ಪದಕ ಗೆದ್ದ ಸ್ವತಂತ್ರ ಭಾರತದ ಮೊದಲ ಕುಸ್ತಿಪಟು ಬಯೋಪಿಕ್​

ನೈಜ ಘಟನೆಯಾಧಾರಿತ ಹಾಗೂ ಸಾಧಕರ ಜೀವನಾಧಾರಿತ ಸಿನಿಮಾಗಳಿಗೆ ಅದರದೇ ಆದ ಪ್ರೇಕ್ಷಕರಿದ್ದಾರೆ. ಹೀಗಾಗಿಯೇ ಇತ್ತೀಚೆಗೆ ಎಲ್ಲ ಭಾಷೆಗಳಲ್ಲೂ ಬಯೋಪಿಕ್​ಗಳು ಮೂಡಿಬರುತ್ತಿವೆ. ಇದರಿಂದ ಮರಾಠಿ ಚಿತ್ರರಂಗವೂ ಹೊರತಾಗಿಲ್ಲ. ಹೌದು, ಮರಾಠಿಯ ಮೊದಲ ₹100 ಕೋಟಿ ಸಿನಿಮಾ "ಸೈರಾಟ್​' ಜತೆಗೆ ಹಿಂದಿಯ "ಝುಂಡ್​' ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ನಾಗರಾಜ್​ ಮಂಜುಳೆ ಇದೀಗ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸ್ವತಂತ್ರ ಭಾರತದ ಮೊದಲ ಕುಸ್ತಿಪಟು ಎಂಬ ದಾಖಲೆ ಮಾಡಿರುವ ಖಶಬಾ ದಾದಾಸಾಹೇಬ್​ ಜಾಧವ್​ (ಕೆ.ಡಿ. ಜಾಧವ್​) ಜೀವನಾಧಾರಿತ ಚಿತ್ರಕ್ಕೆ ಆ್ಯಕ್ಷನ್​&ಕಟ್​ ಹೇಳುತ್ತಿದ್ದಾರೆ.
1952ರ ಒಲಿಂಪಿಕ್​ನಲ್ಲಿ ಕಂಚು ಪದಕ ಸ್ವೀಕರಿಸುತ್ತಿರುವ ಖಶಬಾ
1952ರ ಒಲಿಂಪಿಕ್​ನಲ್ಲಿ ಕಂಚು ಪದಕ ಸ್ವೀಕರಿಸುತ್ತಿರುವ ಖಶಬಾ
Published on: 

ನೈಜ ಘಟನೆಯಾಧಾರಿತ ಹಾಗೂ ಸಾಧಕರ ಜೀವನಾಧಾರಿತ ಸಿನಿಮಾಗಳಿಗೆ ಅದರದೇ ಆದ ಪ್ರೇಕ್ಷಕರಿದ್ದಾರೆ. ಹೀಗಾಗಿಯೇ ಇತ್ತೀಚೆಗೆ ಎಲ್ಲ ಭಾಷೆಗಳಲ್ಲೂ ಬಯೋಪಿಕ್​ಗಳು ಮೂಡಿಬರುತ್ತಿವೆ. ಇದರಿಂದ ಮರಾಠಿ ಚಿತ್ರರಂಗವೂ ಹೊರತಾಗಿಲ್ಲ. ಹೌದು, ಮರಾಠಿಯ ಮೊದಲ ₹100 ಕೋಟಿ ಸಿನಿಮಾ "ಸೈರಾಟ್​' ಜತೆಗೆ ಹಿಂದಿಯ "ಝುಂಡ್​' ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ನಾಗರಾಜ್​ ಮಂಜುಳೆ ಇದೀಗ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸ್ವತಂತ್ರ ಭಾರತದ ಮೊದಲ ಕುಸ್ತಿಪಟು ಎಂಬ ದಾಖಲೆ ಮಾಡಿರುವ ಖಶಬಾ ದಾದಾಸಾಹೇಬ್​ ಜಾಧವ್​ (ಕೆ.ಡಿ. ಜಾಧವ್​) ಜೀವನಾಧಾರಿತ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಸ್ಟ್​ ಲುಕ್​ ಟೀಸರ್​ ಬಿಡುಗಡೆ ಮಾಡಲಾಗಿದ್ದು, ಕುತೂಹಲ ಮೂಡಿಸುವಂತಿದೆ. ನಿರ್ದೇಶಕ ನಾಗರಾಜ್​ ಮಂಜುಳೆಯವರೇ ಕಥೆ, ಚಿತ್ರಕಥೆ ಜವಾಬ್ದಾರಿ ಹೊತ್ತಿದ್ದು ಜತೆಗೆ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಹರ್ಷವರ್ಧನ್​ ವಾಗ್ಧರೆ ಛಾಯಾಗ್ರಹಣ, ಕುತುಬ್​ ಇನಾಮ್ದಾರ್​ ಸಂಕಲನದಲ್ಲಿ ಸಿನಿಮಾ ಮೂಡಿಬರಲಿದೆ. ಉಳಿದಂತೆ ಕೆ.ಡಿ. ಜಾಧವ್​ ಪಾತ್ರದಲ್ಲಿ ಸೇರಿ ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದರ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ. "ಖಶಬಾ' 2027ರ ಜ.1ರಂದು "ಖಶಬಾ' ರಿಲೀಸ್​ ಆಗಲಿದೆ.

ಖಶಬಾ ಪೋಸ್ಟರ್
ಖಶಬಾ ಪೋಸ್ಟರ್

ಯಾರು "ಖಶಬಾ'?

ಸ್ವಾತಂತ್ರ್ಯಪೂರ್ವ ಬ್ರಿಟಿಷರ ಆಳ್ವಿಕೆಯಲ್ಲೂ ಭಾರತ ಹಾಕಿಯಲ್ಲಿ ಪಾರಮ್ಯ ಮೆರೆದಿತ್ತು. ಆದರೆ, ವೈಯಕ್ತಿಕವಾಗಿ ಕ್ರೀಡಾಕೂಟದಲ್ಲಿ ಒಬ್ಬರೇ ಕ್ರೀಡಾಪಟು ಪದಕ ಗೆದ್ದಿರಲಿಲ್ಲ. ಮಹಾರಾಷ್ಟ್ರದ ಕರಾಡ್​ನ ಕುಸ್ತಿ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಖಶಬಾ ದಾದಾಸಾಹೇಬ್​ ಜಾಧವ್​, ಬಾಲ್ಯದಿಂದಲೂ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. 5.6 ಅಡಿ ಎತ್ತ, 54 ಕೆಜಿ ತೂಕದ ಖಶಬಾ ಕುಸ್ತಿ ಅಖಾಡದಲ್ಲಿ ವೇಗವಾಗಿ ಚಲಿಸುತ್ತಿದ್ದರು. ಹೀಗಾಗಿಯೇ ಅವರನ್ನು ಪ್ರೀತಿಯಿಂದ "ಪಾಕೆಟ್​ ಡೈನಾಮೊ' ಎಂದೂ ಕರೆಯುತ್ತಿದ್ದರು. 1948ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್​ಗೆ ಆಯ್ಕೆಯಾದ ಅವರು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ನಂತರ ಹೆಚ್ಚಿನ ತಯಾರಿ ನಡೆಸಿ 1952ರಲ್ಲಿ ಮತ್ತೆ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಅವರು, ಜು. 20ರ ಒಂದೇ ದಿನ ಬ್ಯಾಕ್​ ಟು ಬ್ಯಾಕ್​ ಐವರು ಕಂಟೆಸ್ಟೆಂಟ್​ಗಳ ವಿರುದ್ಧ ತೊಡೆ ತಟ್ಟಿದರು. ಮೊದಲ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದ ಖಶಬಾ ನಂತರ ಒಂದು ಪಂದ್ಯದಿಂದ ಇನ್ನೊಂದು ಪಂದ್ಯದ ನಡುವೆ 30 ನಿಮಿಷವೂ ವಿಶ್ರಾಂತಿ ದೊರೆಯದ ಕಾರಣ ಎರಡು ಪಂದ್ಯಗಳಲ್ಲಿ ಸೋತರು. ಆದರೂ ಒಲಿಂಪಿಕ್ಸ್​ನಲ್ಲಿ ಕಂಚು ಪದಕಕ್ಕೆ ಕೊರಳೊಡ್ಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net