ಜೈಲರ್​ 2 X ರಿವ್ಯೂ: ರಜನಿಕಾಂತ್ ಮಾಸ್ ಆಕ್ಟಿಂಗ್‌ಗೆ ಸೂಪರ್, ಆದ್ರೆ Jailer 1 ಬೆಸ್ಟ್ ಎಂದ ನೆಟ್ಟಿಗರು..Jailer 2

ಜೈಲರ್​ 2 X ರಿವ್ಯೂ: ರಜನಿಕಾಂತ್ ಮಾಸ್ ಆಕ್ಟಿಂಗ್‌ಗೆ ಸೂಪರ್, ಆದ್ರೆ Jailer 1 ಬೆಸ್ಟ್ ಎಂದ ನೆಟ್ಟಿಗರು..Jailer 2
Published on: 
  • .ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಜೈಲರ್​ 2 ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತ

  • ಮೊದಲಾರ್ಧ ಚೆನ್ನಾಗಿದೆ, ದ್ವಿತೀಯಾರ್ಧ ಬೋರಿಂಗ್​ ಎಂದ ಸಿನಿ ಪ್ರೇಮಿಗಳು

  • ಸ್ಟಾರ್​ ನಟರ ಅತಿಥಿ ಪಾತ್ರವು, ಕಾಮಿಡಿ ಸೀನ್​ಗಳು, ರಜನಿಕಾಂತ್ ಸಿನಿಮಾದ ಸ್ತಂಭ ಎಂದ ಫ್ಯಾನ್ಸ್

Jailer 2 X Review: ಸೂಪರ್​​ ಸ್ಟಾರ್​ ರಜನಿಕಾಂತ್​ರ ಬಹುನಿರೀಕ್ಷಿತ ಸಿನಿಮಾ ಜೈಲರ್​ 2 ಬೆಳ್ಳಿ ತೆರೆಗೆ ಕಾಲಿಟ್ಟಿದೆ. ಚೆನ್ನೈ, ದುಬೈನಲ್ಲಿ, ಜಪಾನ್​ ಸೇರಿದಂತೆ ಹಲವು ಕಡೆ ಇರುವ ಅವರ ಅಭಿಮಾನಿಗಳು ಥಿಯೇಟರ್​​ಗಳ ಮುಂದೆ ಸಂಭ್ರಮಿಸುತ್ತಿದ್ದಾರೆ. ಜೈಲರ್​ 2 ಸಿನಿಮಾ ರಿಲೀಸ್​ ಆದ ಮೊದಲ ದಿನವೇ ಎಕ್ಸ್​ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಜೈಲರ್​ 2 ಸಿನಿಮಾವು ಥಿಯೇಟರ್​ನಲ್ಲೀಗ ಭಾರೀ ಸದ್ದು ಮಾಡುತ್ತಿದೆ.ಅದರಲ್ಲಿಯೂ ರಜನೀಕಾಂತ್​ರ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರಕ್ಕೆ ಮತ್ತೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಪ್ರೇಕ್ಷಕರಲ್ಲಿ ಕೇಳಿಬರುತ್ತಿರುವ ಮಾತು ಎಂದರೆ, 2023ರ ಒರಿಜಿನಲ್ ಚಿತ್ರದಷ್ಟು ಈ ಸೀಕ್ವೆಲ್ ಎಲ್ಲರಿಗೂ ಸಂಪೂರ್ಣವಾಗಿ ಇಷ್ಟವಾಗದಿರಬಹುದು ಎನ್ನುತ್ತಿದ್ದಾರೆ. ಚಿತ್ರದ ಆಕ್ಷನ್, ಅತಿಥಿ ಪಾತ್ರಗಳು, ನಿರೂಪಣೆ ಮತ್ತು ಕ್ಲೈಮ್ಯಾಕ್ಸ್ ಕುರಿತು ನಾನಾ ರೀತಿಯಲ್ಲಿ ಚರ್ಚೆಯಲ್ಲಿದೆ.

ದ್ವಿತೀಯಾರ್ಧ ಚೆನ್ನಾಗಿಲ್ಲ

ಕೆಲವು ಅಭಿಮಾನಿಗಳು ರಜನಿಕಾಂತ್​ರ ಆಕ್ಷನ್​ ಮತ್ತು ಮಾಸ್​​​​​​​ತನವನ್ನು 'ರಾಮ್‌ಪೇಜ್' ಎಂದು ಕರೆದರೆ, ಇನ್ನು ಕೆಲವರು ನಿಧಾನಗತಿ ನಿರೂಪಣೆ, ದ್ವಿತೀಯಾರ್ಧದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮತ್ತೂ ಕೆಲವರು ರಜನಿಕಾಂತ್ ಅವರ ಅಭಿನಯ ಮತ್ತು ಸಾಹಸ ದೃಶ್ಯಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಚಿತ್ರದ ಇಂಟರ್‌ವಲ್ ಟ್ವಿಸ್ಟ್ ಚರ್ಚಿತ ವಿಚಾರವಾಗಿ ಬದಲಾಗಿದೆ.

ಎಕ್ಸ್​ ಬಳಕೆದಾರರ ರಿವ್ಯೂ ಏನು?

ಕಮರ್ಷಿಯಲ್​ ಆಕ್ಷನ್​ ಸಿನಿಮಾ ಬಯಸುವ ಸಿನಿ ಪ್ರೇಮಿಗಳಿಗೆ ಜೈಲರ್​2 ರಸದೌತಣ. ರಜನಿಕಾಂತ್ ಅವರ ಸ್ಕ್ರೀನ್ ಪ್ರೆಸೆನ್ಸ್, ಆಕ್ಷನ್ ಸೀಕ್ವೆನ್ಸ್‌ಗಳು ಮತ್ತು ಹೈ-ಎನರ್ಜಿ ನಿಜಕ್ಕೂ ಅದ್ಭುತ. ಮೊದಲಾರ್ಧ ನಿಧಾನಗತಿಯಲ್ಲಿ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಬರುವ ಆಕ್ಷನ್, ಫ್ಲ್ಯಾಶ್‌ಬ್ಯಾಕ್ ಮತ್ತು ಅತಿಥಿ ಪಾತ್ರಗಳು ನಿಮ್ಮನ್ನು ಕೂರಿಸಿಟ್ಟುಕೊಳ್ಳುತ್ತದೆ. ಇದೇ ಸಿನಿಮಾದ ಹೈಲೆಟ್​ ಕೂಡ ಎಂದಿದ್ದಾರೆ.

ಜೈಲರ್​ 2 ಸಿನಿಮಾ ಬಲವಂತವಾಗಿ ಚಿತ್ರೀಕರಿಸಿದ ಒಂದು ಸೀಕ್ವೆಲ್​ ಸಿನಿಮಾದಂತೆ ಅನಿಸುತ್ತದೆ. ಮೊದಲ ಭಾಗದಷ್ಟು ಪ್ರಭಾವಶಾಲಿಯಾಗಿಲ್ಲ. ರವಿಚಂದರ್ ಅವರ ಹಿನ್ನೆಲೆ ಸಂಗೀತ ಬೋರಿಂಗ್​ ಆಗಿದೆ. ಒಟ್ಟಾರೆಯಾಗಿ ಮೊದಲಾರ್ಧ, ದ್ವಿತೀಯಾರ್ಧ ಎರಡು ಪರಿಣಾಮಕಾರಿಯಾಗಿದೆ ಎಂದನಿಸೋದಿಲ್ಲ ಎಂದಿದ್ದಾರೆ ಎಲ್ಸ್​ ಬಳಕೆದಾರರು.

ಬೋರ್ ಆಗೋದೆ ಇಲ್ಲ, ಕಾಮಿಡಿ ಚೆನ್ನಾಗಿದೆ

ಹರಿಚರಣ್ ಪುಡಿಪೆಡ್ಡಿ ಅವರ ಪ್ರಕಾರ, ಜೈಲರ್​ 2 ಮನರಂಜನಾತ್ಮಕವಾದ ಸೀಕ್ವೆಲ್. 3.75 ರೇಟಿಂಗ್​​ ಕೊಟ್ಟರೆ ತಪ್ಪೇನಿಲ್ಲ. ಮಧ್ಯಂತರಗಳಲ್ಲಿ ಚಿತ್ರವನ್ನು ರೋಮಾಂಚನಗೊಳಿಸುತ್ತದೆ. ಅತಿಥಿ ಪಾತ್ರಗಳನ್ನು ತಂದಿರುವ ಬಗೆ ಚಂದ. ನೆಲ್ಸನ್ ಅವರ ದೊಡ್ಡ ಶಕ್ತಿಯಾಗಿರುವ ಮತ್ತು ಅವರಿಗೆ ಸಹಜವಾಗಿ ಬರುವ ಚತುರ ಹಾಗೂ ಪರಿಣಾಮಕಾರಿ ಹಾಸ್ಯದ ಬಳಕೆಯಿಂದಾಗಿ, ಸಿನಿಮಾ ಎಂದಿಗೂ ಬೋರಿಂಗ್ ಎನಿಸುವುದಿಲ್ಲ. ದ್ವಿತೀಯಾರ್ಧದಲ್ಲಿ ಸ್ವಲ್ಪ ಮಟ್ಟಿಗೆ ವೇಗ ತಗ್ಗಿದರೂ, ಸ್ಟಾರ್‌ಗಳ ಅತಿಥಿ ಪಾತ್ರಗಳು ಮತ್ತು ಕೆಲವು ಅಚ್ಚರಿಗಳು ಕೊನೆಯ ದೃಶ್ಯದವರೆಗೂ ಚಿತ್ರದ ಉತ್ಸಾಹ ಕುಂದದಂತೆ ನೋಡಿಕೊಳ್ಳುತ್ತವೆ. ಸ್ಟಾರ್ ನಟರ ಎಲ್ಲ ಸೀಕ್ವೆಲ್‌ಗಳ ಪೈಕಿ ಇದು ಅತ್ಯಂತ ಮನರಂಜನಾತ್ಮಕವಾದ ಚಿತ್ರವಾಗಿದೆ ಎಂದು ಬರೆದುಕೊಂಡಿದ್ದಾರೆ.

2nd ಹಾಫ್ ಬೋರಿಂಗ್

ಜೋಸೆಫ್​ ಆಂಡ್ರ್ಯೂ ಎಂಬುವವರು ಟ್ವೀಟ್​ ಮಾಡಿದ್ದು ಜೈಲರ್​ ಸಿನಿಮಾಕ್ಕೆ ಜೈಲರ್​ 2 ಪರ್ಫೆಕ್ಟ್ ಸೀಕ್ವೆಲ್​. ಸಿನಿಮಾಕ್ಕೆ ಸೂಪರ್ ಸ್ಟಾರ್ ಮತ್ತು ಅನಿರುದ್ಧ್ ಅತಿ ದೊಡ್ಡ ಆಧಾರಸ್ತಂಭಗಳು. ಹಾಸ್ಯ ಪ್ರಧಾನ ಪಾತ್ರಗಳು ಅದ್ಭುತವಾಗಿವೆ. ಮೊದಲಾರ್ಧ ಅದ್ಭುತ ಮತ್ತು ಮಧ್ಯಂತರ ಭಾಗ ಚೆನ್ನಾಗಿಲ್ಲ. ಆಕ್ಷನ್ ಸೀಕ್ವೆನ್ಸ್‌ಗಳು ಚೆನ್ನಾಗಿದೆ,. ಯಾವುದೇ ಪಾತ್ರದ ಬಗ್ಗೆ ವಿವರಣೆ ಕಾಣೆಯಾಗಿದೆ ಎನಿಸುತ್ತದೆ. 3.75/5 ನೀಡಬಹುದು ಎಂದು ಬರೆದುಕೊಂಡಿದ್ದಾರೆ.

ಜೈಲರ್ ಬೆಸ್ಟ್

ಮೊದಲಾರ್ಧ ಸಿನಿಮಾ ಮೂರ್ತಿ ಬಿಜಿಎಂ, ಕಾಮಿಡಿ, ಆಕ್ಷನ್​ ಗೂಸ್‌ಬಂಪ್ಸ್ ನೀಡುತ್ತದೆ. ಇಂಟರ್ವೆಲ್ ಓಕೆ, ನಿರೀಕ್ಷಿಸಿದ ಮಟ್ಟಕ್ಕಿಲ್ಲ. ಜೈಲರ್ ಟ್ರಾನ್ಸ್‌ಫರ್ಮೇಷನ್ ಸೀನ್ ನಂತರ ಸ್ವಲ್ಪ ಕಥೆ ಬೇರೆ ಕಡೆಗೆ ಸಾಗುತ್ತದೆ. ಆದರೆ ಸೆಂಟಿಮೆಂಟ್ ದೃಶ್ಯಗಳು ಕುಟುಂಬದವರಿಗೆ ಚೆನ್ನಾಗಿ ಕನೆಕ್ಟ್ ಆಗುತ್ತದೆ. ಬಿಜಿಎಂ ಜೈಲರ್ 1ರ ಹಾಗೆಯೇ ಇದೆ, ಹೊಸದೇನೂ ಇಲ್ಲ. ಆದರೆ 1ನೇ ಭಾಗವೇ ಬೆಸ್ಟ್ ಎಂದು ಮತ್ತೊಬ್ಬ ನೆಟ್ಟಿಗ ಬರೆದುಕೊಂಡಿದ್ದಾರೆ.

2023ರ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಮುಂದುವರಿದ ಭಾಗವಾಗಿರುವ ಇದರಲ್ಲಿ, ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ಮಿರ್ನಾ ಹಿಂದಿನ ಪಾತ್ರಗಳಲ್ಲಿ ಮುಂದುವರಿದಿದ್ದಾರೆ. ಇವರೊಂದಿಗೆ ವಿದ್ಯಾ ಬಾಲನ್, ಎಸ್‌ಜೆ ಸೂರ್ಯ, ಮಿಥುನ್ ಚಕ್ರವರ್ತಿ ಮತ್ತು ಸೂರಜ್ ವೆಂಜರಮೂಡು ಕೂಡ ತಾರಾಗಣದಲ್ಲಿದ್ದಾರೆ. ಜೊತೆಗೆ ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಕೂಡ ಸೀಕ್ವೆಲ್​ನಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net