

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ರಕ್ಷಿತ್ಶೆಟ್ಟಿಯನ್ನು ಹಾಡಿ ಹೊಗಳಿದ್ದಾರೆ.
ರಕ್ಷಿತ್ಶೆಟ್ಟಿ ತಮ್ಮ ಮನೆಗೆ ಬಂದಾಗ ಮನಸ್ಸಿನಲ್ಲಿ ಮೂಡಿದ ಭಾವನೆಯನ್ನು ನಟ ಜಗ್ಗೇಶ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ರಕ್ಷಿತ್ಶೆಟ್ಟಿ ಹಾಗೆ ಸುಮ್ಮನೆ ಮನೆಗೆ ಬಂದಾಗ ಯಾಕೋ ಗೊತ್ತಿಲ್ಲ ಇವನನ್ನು ನೋಡಿದರೆ ನನ್ನ ಹಿರಿಯ ಮಗನಂತೆ ಪ್ರೀತಿಸುತ್ತೆಮನ. ಬಹಳ ಮುಗ್ಧ ತನ್ನ ಅನ್ನ ಕಿತ್ತುತಿನ್ನೋ ರಣಹದ್ದು ಪಕ್ಕಕ್ಕೆ ಬಂದರೂ ಮುಗುಳು ನಗೆಯಿಂದ ರಣಹದ್ದನ್ನು ಮಗುವಿನ ನಗುವಿನಲ್ಲಿ ನೋಡುವ ಅಪ್ಪಟ ಬಂಗಾರದ ಹೃದಯ. ನನ್ನ ಪ್ರಕಾರ ಇವನ ಗುಣಕ್ಕೆ ನೂರು ಕಾಲ ಉಳಿಯುವ ಹೃದಯವಂತ ಎಂದು ಹೊಗಳಿದ್ದಾರೆ.
ಜಗ್ಗೇಶ್ ಅವರ ಈ ಹೊಗಳಿಕೆಗೆ ಅಭಿಮಾನಿಗಳು ಸಂತೋಷಗೊಂಡು ಪ್ರತಿಕ್ರಿಯೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)