

ರಾಕಿ, ರಾವಣ, ರಾಯ ಏನೇ ಆಗಲಿ ನಾನೆಂದಿಗೂ ರಾಧಿಕಾ ಪರಿ.
ಬೆಂಗಳೂರಿನಲ್ಲಿ ನಡೆದ ರಾಮಾಯಣ ಪ್ರಚಾರ ಕಾರ್ಯಕ್ರಮದಲ್ಲಿ ಯಶ್ ಮಾತು.
ರಾಮಾಯಣ ಸಿನಿಮಾವು ಮನೆ ಮಂದಿ ಕುಳಿತು ನೋಡಬಹುದಾದ ಸಿನಿಮಾ ಎಂದ ಯಶ
Ramayana Event In Bengaluru: ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಭಾಗ 1 ನವೆಂಬರ್ 5ರಂದು ವಿಶ್ವದಾದ್ಯಂತ ರಿಲೀಸ್ ಆಗಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಅ.15ರಂದು ಬೆಂಗಳೂರಿನಲ್ಲಿ ನಡೆದ ರಾಮಾಯಣ ಪ್ರಚಾರ ಕಾರ್ಯಕ್ರಮದಲ್ಲಿ ಸಿನಿಮಾ ತಂಡ ಹಾಜರಿತ್ತು. ಈ ವೇಳೆ ಕನ್ನಡದ ನಟ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಮಾತನಾಡಿರುವ ತುಣುಕುಗಳು ಎಕ್ಸ್ನಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ರಾಮಾಯಣ ಸಿನಿಮಾದ ಪ್ರಚಾರದ ಭಾಗವಾಗಿ ಕಾರ್ಯಕ್ರಮ ಆಯೋಜನೆಯಾಗಿತ್ತು. ರಣಬೀರ್ ಕಪೂರ್, ಸಾಯಿ ಪಲ್ಲವಿ, ರಾಧಿಕಾ ಪಂಡಿತ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಚಿತ್ರ ತಂಡದ ದಂಡೇ ಇತ್ತು. ಈ ವೇಳೆ ಯಶ್ ಅರ್ಧ ಗಂಟೆ ಮಾತನಾಡಿದ್ದು ಟಾಕ್ಸಿಕ್ ಸಿನಿಮಾ, ಪ್ರೇಮದ ಊರಲಿ, ಪತ್ನಿ ರಾಧಿಕಾ ಹಾಗೂ ರೆಹಮಾನ್ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕುಗಳು ಮೆಚ್ಚುಗೆಗೆ ಕಾರಣವಾಗಿದೆ.
ಯಶ್ ಮತ್ತು ರಾಧಿಕಾ ಅವರು 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಂದಿನಿಂದ ಇಲ್ಲಿಯವರೆಗೂ ಅವರಿಬ್ಬರ ಪ್ರೀತಿ, ಅನೋನ್ಯತೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಟಾಕ್ಸಿಕ್ ಸಿನಿಮಾ ಪ್ರಚಾರ ಕಾರ್ಯದಲ್ಲಿಯೂ ರಾಧಿಕಾ ಅವರು ಭಾಗಿಯಾಗಿ ಬೆಂಬಲಿಸಿದ್ದರು. ಸದ್ಯ ರಾಮಾಯಣ ಸಿನಿಮಾಕ್ಕೂ ಅದೇ ಪ್ರೀತಿ ವ್ಯಕ್ತಪಡಿಸಿದ್ದಾರೆ. ಯಶ್ ಸಹ ಎಷ್ಟೇ ಸಿನಿಮಾ ಮಾಡಿದರೂ, ತಮ್ಮ ಪತ್ನಿಯನ್ನು ಬಿಟ್ಟುಕೊಟ್ಟಿಲ್ಲ. ಅವರ ಈ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ರಾಧಿಕಾ ಪಂಡಿತ್ ಅವರನ್ನು ಯಶ್ ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದ್ದು ರಾಮಾಯಣ ಪ್ರಚಾರದ ವೇದಿಕೆಯಲ್ಲಿ..ಯಶ್ ಮಾತನಾಡುತ್ತಾ ಹೇಳಿದ್ದು ಹೀಗೆ. 'ನಮ್ಮ ಸೀತಾ ಇಲ್ಲೇ ಇದ್ದಾರೆ ರಾಧಿಕಾ. ರಾವಣನಾಗ್ಲಿ, ರಾಯನಾಗ್ಲಿ, ರಾಕಿ, ರಾಜಾಹುಲಿಯಾಗಲೀ ಏನೇ ಆಗಲಿ. ನಾನು ಮನೆಗೆ ಬಂದಾಗ ರಾಧಿಕಾಪತಿ. ರಾಮಾಯಣದಲ್ಲಿ ಒಂದು ನನಗೆ ಅರ್ಥವಾಗಿದ್ದು ಏನೆಂದರೆ..ಈಗೆಲ್ಲ ನಾವು ನಮ್ಮ ಸರ್ನೇಮ್ ನಮ್ಮ ಹೆಂಡತಿಯರು ಇಟ್ಟುಕೊಳ್ಳ ಬೇಕು ಎಂದು ಬಯಸುತ್ತೇವೆ. ಆದರೆ, ಅಂದಿನ ಕಾಲದಲ್ಲಿ ತದ್ವಿರುದ್ಧ. ಅವರು ಹೆಂಡತಿ ಹೆಸರಿನೊಂದಿಗೆ, ತಮ್ಮ ಹೆಸರನ್ನು ಗಂಡಂದಿರು ಇಟ್ಟುಕೊಳ್ಳುತ್ತಿದ್ದರು. ಅಲ್ವಾ... ಅದಿಕ್ಕೆ ನಾವು ರಾಧಿಕಾ ಪತಿ ಎಂದು ಇಟ್ಟುಕೊಳ್ಳುತ್ತೇವೆ' ಎಂದು ಹೇಳಿದರು. ಅವರ ಈ ಮಾತಿಗೆ ರಾಧಿಕಾ ಮಂದಹಾಸ ಬೀರಿದ್ದು ವಿಡಿಯೋದಲ್ಲಿ ಇದೆ.
'ರೆಹಮಾನ್ ಸರ್ ಹಾಡುಗಳಿಗೆ ನಾವು ಶಾಲೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದೆವು. ಈಗ ಅವರು ನಾನು ನಟಿಸಿರುವ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ ಎಂದರೆ ನಿಜಕ್ಕೂ ಅದು ನನ್ನ ಕನಸು.. ನನಸಾದ ಯಶಸ್ಸಿನ ಸಂಕೇತ. ಸರ್ ಸೌತ್ ಇಂಡಿಯನ್ಸ್ ನಿಮ್ಮ ಹಾಡಿಗೆ ಎಂದು ಫಿದಾ. ಕನ್ನಡಿಗರು ಕೊಟ್ಟ ಬೆಂಬಲದಿಂದಲೇ ರೆಹಮಾನ್ ಅವರು ಸ್ಟುಡಿಯೋ ಕಟ್ಟಿದ್ದು. ಚುಕುಬುಕು ರೈಲು ಹಾಡಿಗೆ ಸಂಗೀತ ಸಂಯೋಜಿಸಿದ್ದು ರೆಹಮಾನ್ ಸರ್' ಎಂದರು ಯಶ್.
'ಯಾರೇನೆ ಮಾತನಾಡಲಿ, ಯಾವ ಯಾವ ಸಿನಿಮಾ ಯಾರ್ಯಾರು ನೋಡಬೇಕು ಅನ್ನೋದು ನಮಗೂ ಗೊತ್ತಿರುತ್ತದೆ. ರಾಮಾಯಣ ಸಿನಿಮಾವು ಮನೆ ಮಂದಿಯೆಲ್ಲರೂ ಕೂತು ನೋಡುವ ಸಿನಿಮಾ. ನೋಡಿ ನೋಡಿ ಆಮೇಲೆ ಸಿಗಣ' ಎಂದು ಯಶ್ವ್ಯಂಗ್ಯವಾಡಿದರು. ಇದು ಟಾಕ್ಸಿಕ್ ಬಗ್ಗೆ ಸಿಕ್ಕ ವ್ಯಂಗ್ಯ ಕಾಮೆಂಟ್ಗಳಿಗೆ ಕೊಟ್ಟ ಟಾಂಗ್ನಂತೆ ಇತ್ತು, (ಏಜೆನ್ಸೀಸ್).