

ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರ ನಡುವೆ ಶುರುವಾದ ಸಮರ.
ರಾಕ್ಷಸರಾದ ಮಂಜು, ಗಗನ್, ಸಂಗೀತ, ಜಗ್ಗಿ, ಪ್ರಶಾಂತ್ ಹಾಗೂ ಸೌಂದರ್ಯ
ತಾಂಡವ್, ಯಶಸ್, ಸೋನಿಕಾ, ಕಾವ್ಯಾ, ಕಿರಣ್, ಗಾನವಿ ಗಂಧರ್ವರು
Bigg Boss Kannada 13: ಬಿಗ್ಬಾಸ್ ಲೋಕದಲ್ಲಿ ಕಣ್ಣಿನ ಸುತ್ತ ಕಪ್ಪು ಬಣ್ಣ, ಬಾಯಿಯ ಕೆಳಗೆ ಕೋರೆಯಂತೆ ಎಳೆದ ನಾಮ, ದಪ್ಪ ಕಪ್ಪಾದ ಹುಬ್ಬು, ಕಪ್ಪು ಬಟ್ಟೆ, ಕೆಂಪು ಕೊಂಬುಗಳು, ಕೆಂಪು ಕ್ರೇಪ್, ಭೀಕರ ರೂಪದ ರಕ್ಕಸರ ಗುಂಪು. ಮತ್ತೊಂದು ಕಡೆ, ಶಾಂತ ಸ್ವಭಾವದಲ್ಲಿ ಕೈಯಲ್ಲಿ ನಕ್ಷತ್ರದ ಕೋಲಿಡಿದು, ತಲೆಗೆ ಬಿಳಿ ಬಣ್ಣದ ಸ್ಫಟಿಕದ ಏರ್ ಬನ್ ಬಿಳಿ ಬಟ್ಟೆ ತೊಟ್ಟ ಗಂಧರ್ವರು.
ಹೌದು, ಬಿಗ್ಬಾಸ್11ರಲ್ಲಿ ತಂದಿದ್ದ ರಾಕ್ಷಸರು ಮತ್ತು ಗಂಧರ್ವರು ಕಾನ್ಸೆಪ್ಟ್ ಅನ್ನು ಸೀಸನ್ 13ರಲ್ಲಿಯೂ ತಂದಿದ್ದು, ಈಗಾಗಲೇ ರಿಲೀಸ್ ಆಗುವ ಪ್ರೋಮೋ ಅತ್ಯಂತ ಕುತೂಹಲವನ್ನು ಮೂಡಿಸಿದೆ. ಸ್ಪರ್ಧಿಗಳನ್ನು ಎರಡು ಪ್ರಮುಖ ತಂಡಗಳಾಗಿ ವಿಂಗಡಿಸಲಾಗಿದ್ದು, ರಾಕ್ಷಸರು ಮತ್ತು ಗಂಧರ್ವರ ನಡುವಿನ ಹೋರಾಟವು ಮನೆಯಲ್ಲಿ ತೀವ್ರಗೊಂಡಿದೆ.
ರಾಕ್ಷಸರ ವೇಷಧಾರಿಗಳು ಹಾಗೂ ಗಂಧರ್ವರ ವೇಷಧಾರಿಗಳ ನಡುವಿನ ಈ ಕದನವು ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ರಾಕ್ಷಸರ ತಂಡದಲ್ಲಿ ಮಂಜು, ಗಗನ್, ಸಂಗೀತ, ಜಗ್ಗಿ, ಪ್ರಶಾಂತ್ , ಮತ್ತು ಸೌಂದರ್ಯ ಇದ್ದರೆ, ಗಂಧರ್ವರ ತಂಡದಲ್ಲಿ ಧನುಷ್ , ತಾಂಡವ್, ಯಶಸ್, ಕಾವ್ಯ, ಕಿರಣ್, ಸೋನಿಕಾ ಹಾಗೂ ಗಾನವಿ ಇದ್ದಾರೆ.
ರಿಲೀಸ್ ಆಗಿರುವ ಪ್ರೋಮೋದಲ್ಲಿ ಈಗಾಗಲೇ ಮಂಜ ಮನೆ ಮಂದಿಗೆ ಕ್ವಾಟ್ಲೆ ಕೊಟ್ಟಿರುವುದು ಪ್ರೊಮೋದಲ್ಲಿದೆ. ಅಲ್ಲದೇ ಬೆಡ್ ರೂಮ್ನಲ್ಲಿ ಎಲ್ಲರ ಬಟ್ಟೆಯನ್ನು ಮಂಜ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಾವ್ಯಾ ಅವರಿಗೆ ವೈಟ್ ಸ್ನೋ ಲೋಷನ್ ಅನ್ನು ತಲೆಗೆ ಹಾಕಿರುವುದು. ಜಗದೀಶ್ ಅವರು ತಾಂಡವ್ ಅವರನ್ನು ಕಾಲಿಗೆ ಬಿದ್ದು ನಮಸ್ಕರಿಸುವಂತೆ ಆರ್ಡರ್ ಮಾಡಿರುವುದು ಪ್ರೋಮೋದಲ್ಲಿ ಇದೆ. ಈ ಹಿಂದೆ ಇದ್ದಂತೆ ರಾಕ್ಷಸರು ಮತ್ತೆ ಗಂಧರ್ವರಾಗುತ್ತಾರೆ. ಗಂಧರ್ವರು ರಾಕ್ಷಸರಾಗುವ ಅದಲು ಬದಲು ಇರುತ್ತದೆ. ಈ ವಾರ ಪೂರ್ತಿ ಈ ಟಾಸ್ಕ್ ಇರಲಿದ್ದು, ಏನೆಲ್ಲ ಸಮಸ್ಯೆಯಾಗಲಿದೆ. ಎಷ್ಟೆಲ್ಲ ರಾಧಾಂತ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
'ಬಿಗ್ ಬಾಸ್ ಕನ್ನಡ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಬಿರುಸುಗೊಂಡಿದ್ದು, ಈ ವಾರದ ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ಮಂಜುನಾಥ್ ಗಗನ್, ಗಾನವಿ, ಧನುಷ್, ಸೋನಿಕಾ, ತಾಂಡವ್, ರಾಮ್, ಯಶಸ್ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ, (ಏಜೆನ್ಸೀಸ್).