'ನೀವೇನಾದ್ರು ನಿಮ್ಮ ಜೀವನದಲ್ಲಿ ಸೀತೆ ನೋಡಿದ್ದೀರಾ?'; ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸರಿಯಾದ ಆಯ್ಕೆಯಲ್ಲ ಎಂದ ನಟಿ ತನೀಶಾ ಮುಖರ್ಜಿಗೆ ನೆಟ್ಟಿಗರಿಂದ ಕ್ಲಾಸ್

ನಟಿ ಸಾಯಿ ಪಲ್ಲವಿ, ನಟಿ ತನೀಶಾ ಮುಖರ್ಜಿ
ನಟಿ ಸಾಯಿ ಪಲ್ಲವಿ, ನಟಿ ತನೀಶಾ ಮುಖರ್ಜಿ
Published on: 
  • ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅವರ ಆಯ್ಕೆ ಸರಿಯಾಗಲ್ಲ ಎಂದ ನಟಿ ತನಿಷಾ ಮುಖರ್ಜಿ.

  • ರಾವಣ ಮತ್ತು ರಾಮನ ಪಾತ್ರದಲ್ಲಿ ಯಶ್​​, ರಣಬೀರ್​ ಮಿಂಚಿದ್ದಾರೆ ಎಂದು ಕೊಂಡಾಡಿದ ನಟಿ.

  • ರಾಮಾಯಣ ಸಿನಿಮಾದ ದೃಶ್ಯ ವೈಭವ ಅದ್ಭುತವಾಗಿದಎ ಎಂದು ಕೊಂಡಾಡಿದ ನಟಿ ತನಿಷಾ ಮುಖರ್ಜಿ.

  • ನಟಿ ತನಿಷಾ ಮುಖರ್ಜಿ ವಿರುದ್ಧ ಕೆಂಡಕಾರಿದ ನೆಟ್ಟಿಗರು, ನಿಮ್ಮ ಸೋತ ಸಿನಿಮಾ ಮೇಲೆ ಕಣ್ಣಾಯಿಸಿ ಎಂದು ಕಾಮೆಂಟ್.

'ನಿಮಗೆ ಎಂಥಾ ಸೀತಾ ಬೇಕು?', 'ನೀವೇನಾದ್ರು ನಿಮ್ಮ ಜೀವನದಲ್ಲಿ ಸೀತೆ ನೋಡಿದ್ದೀರಾ?', 'ಮೊದಲು ನಿಮ್ಮ ಸೋತ ಸಿನಿಮಾಗಳನ್ನು ನೋಡಿಕೊಂಡು ಬನ್ನಿ'. 'ಸೀತೆ ಪಾತ್ರವನ್ನು ಸಾಯಿ ಪಲ್ಲವಿ ಅವರು ಬಿಟ್ಟು ಬೇರಾರು ಮಾಡಲು ಸಾಧ್ಯವಿಲ್ಲ'. 'ಅಯಾನ್​ ಮುಖರ್ಜಿಯನ್ನು ಮೆಚ್ಚಿಸಲು ಇಷ್ಟೆಲ್ಲ ಡ್ರಾಮಾನಾ?'..ಹೀಗೆ ನೆಟ್ಟಿಗರಿಂದ ಟೀಕೆಗೊಳಗಾಗಿದ್ದು ಬಾಲಿವುಡ್​​ ನಟಿ ತನಿಷಾ ಮುಖರ್ಜಿ.

ಹೌದು, ಕಾಜಲ್​ ಬಾಲಿವುಡ್​ ನಟಿ ಕಾಜಲ್​ ದೇವಗನ್​​ ಸಹೋದರಿ ಮತ್ತು ನಟಿ ತನಿಷಾ ಮುಖರ್ಜಿ ಅವರು, ನವೆಂಬರ್​5ರಂದು ರಿಲೀಸ್ ಆಗಿರುವ ಸಿನಿಮಾವನ್ನು ಇತ್ತೀಚೆಗೆ ವೀಕ್ಷಿಸಿ ಎಕ್ಸ್​ನಲ್ಲಿ ವಿಮರ್ಶೆ ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದರು. ಸಿನಿಮಾ ಚೆನ್ನಾಗಿದೆ ನೋಡಬಹುದು. ರಣಬೀರ್​, ಯಶ್ ನಟನೆ ಚೆನ್ನಾಗಿದೆ ಆದರೆ, ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಸಂಪೂರ್ಣ ತಪ್ಪು ಎಂದು ಕಾಮೆಂಟ್ ಮಾಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ತನಿಷಾ ಮುಖರ್ಜಿ ಪೋಸ್ಟ್​​ ಹೀಗಿದೆ

ನಟಿ ತನಿಷಾ ಮುಖರ್ಜಿ ಎಕ್ಸ್​ ಪೋಸ್ಟ್​ನಲ್ಲಿ ರಾಮಾಯಣ ಸಿನಿಮಾದ ದೃಶ್ಯ ವೈಭವದ ಬಗ್ಗೆ ಕೊಂಡಾಡಿದ್ದಾರೆ. ಮಾಧ್ಯಮಗಳು ಸಿನಿಮಾ ಬಗ್ಗೆ ತಪ್ಪು ಮಾಹಿತಿ ಹಂಚಿಕೊಂಡು ದಾರಿ ತಪ್ಪಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ರಾಮಾಯಣ ಸಿನಿಮಾದಲ್ಲಿ ರಣಬೀರ್​ ಪಾತ್ರದ ಬಗ್ಗೆ ಹೊಗಳುತ್ತಾ ಹೇಳಿದ್ದಿಷ್ಟು, 'ಅನಿಮಲ್' ಸಿನಿಮಾದಲ್ಲಿ ಅವರನ್ನು ಇಷ್ಟಪಟ್ಟ ನಂತರ, ಶ್ರೀರಾಮನ ಪಾತ್ರದಲ್ಲಿ ಅವರನ್ನು ಕಲ್ಪಿಸಿಕೊಳ್ಳಲು ನನಗೆ ಸಾಧ್ಯವಾಗುವುದಿಲ್ಲವೇನೋ ಅಂದುಕೊಂಡಿದ್ದೆ. ಆದರೆ ಓ ಮೈ ಗಾಡ್..ಅವರು ಆ ಪಾತ್ರಕ್ಕೆ ಅಕ್ಷರಶಃ ಜೀವ ತುಂಬಿದಾರೆ ಎಂದು ನನಗನಿಸಿತು.

ಸಾಯಿ ಪಲ್ಲವಿ ಮಿಸ್​​ಕಾಸ್ಟ್

ಇನ್ನೂ ಸಾಯಿ ಪಲ್ಲವಿ ಅವರು ಸೀತೆಯಾಗಿ ನಟಿಸಿದ ವಿಚಾರಕ್ಕೆ ಬಂದರೆ, ಅವರು ಉತ್ತಮ ನಟಿ ಆಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ, ಸೀತೆಯ ಪಾತ್ರಕ್ಕೆ ಅವರು ಸಂಪೂರ್ಣವಾಗಿ ತಪ್ಪು ಆಯ್ಕೆ (ಮಿಸ್‌ಕಾಸ್ಟ್) ಎನಿಸಿದರು. ಕೆಲವೊಂದು ದೃಶ್ಯಗಳಲ್ಲಿ ಅವರ ನಟನೆ ನನ್ನ ಮನಸ್ಸಿಗೆ ಇಷ್ಟವಾಗಿಲ್ಲ. ಇನ್ನುಳಿದಂತೆ ದೃಶ್ಯವೈಭವ, ಕಥೆ ಮತ್ತು ನಟನೆ ಎಲ್ಲವೂ ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ.

ರಾವಣನಾಗಿ ಯಶ್ ಮಿಂಚಿದ್ದಾರೆ

ರಾವಣನಾಗಿ ಯಶ್ ಅದ್ಭುತವಾಗಿ ನಟಿಸಿದ್ದಾರೆ. ತಾವು ಯಾವುದೇ ಪಾತ್ರವನ್ನು ಎಷ್ಟು ಪರಿಪೂರ್ಣವಾಗಿ ನಿರ್ವಹಿಸಬಲ್ಲೆ ಎಂಬುದನ್ನು ಸಾಬೀತುಪಡಿಸುವ ಮೂಲಕ ಅವರು ಎಲ್ಲಾ ನಿರೀಕ್ಷೆಗಳನ್ನು ಮೀರಿಸಿದ್ದಾರೆ. ಶ್ರೀರಾಮ ಮತ್ತು ರಾವಣ ಎರಡೂ ಪಾತ್ರಗಳನ್ನು, ಆ ಪಾತ್ರಗಳನ್ನೇ ತಮ್ಮೊಳಗೆ ಆವಾಹಿಸಿಕೊಂಡಂತೆ ನಟಿಸಿದ್ದಾರೆ ರಾಮನಿಗೆ ರಾವಣ ಸರಿಸಾಟಿಯಾಗಿದ್ದಾನೆ! ಖಂಡಿತವಾಗಿಯೂ ನೋಡಲೇಬೇಕಾದ ಸಿನಿಮಾ ಎಂದಿದ್ದಾರೆ ತನಿಷಾ ಮುಖರ್ಜಿ.

Also Read
ಹನುಮಂತನ ಪಾತ್ರಕ್ಕೆ ಸನ್ನಿ ಡಿಯೋಲ್ ಬೆಸ್ಟ್ ಚಾಯ್ಸ್ ಎಂದ ರಾಮಾಯಣ ನಿರ್ಮಾಪಕ ! ಕಾರಣ ಏನು ಗೊತ್ತಾ? Ramayana
ನಟಿ ಸಾಯಿ ಪಲ್ಲವಿ, ನಟಿ ತನೀಶಾ ಮುಖರ್ಜಿ

ನೆಟ್ಟಿಗರಿಂದ ಟೀಕೆ ವ್ಯಕ್ತ

ತನಿಷಾ ಮುಖರ್ಜಿ ಅವರ ಈ ಪೋಸ್ಟ್​ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಸಾಯಿ ಪಲ್ಲವಿ ಅವರನ್ನು ಹೊರತುಪಡಿಸಿ ಈ ಪಾತ್ರವನ್ನು ಮಾಡುವುದು ಯಾರಿಂದಲೂ ಸಾಧ್ಯವಿಲ್ಲ. ಅವರು ಈ ಸಿನಿಮಾಕ್ಕೆ ತಕ್ಕುದಾದ ಆಯ್ಕೆಯಾಗಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಅಯಾನ್​ ಮೆಚ್ಚಿಸಲು ಡ್ರಾಮಾ

ತನಿಷಾ ಮುಖರ್ಜಿ ಅವರು ಅಯಾನ್ ಮುಖರ್ಜಿಯವರ ಸೋದರಸಂಬಂಧಿ; ಅಯಾನ್ ರಣಬೀರ್ ಮತ್ತು ಆಲಿಯಾ ಇಬ್ಬರಿಗೂ ಅತ್ಯಂತ ಆಪ್ತ ಸ್ನೇಹಿತರು. ಹೀಗಾಗಿಯೇ ಅವರು ರಣಬೀರ್‌ರನ್ನು ಅತಿಯಾಗಿ ಹೊಗಳುತ್ತಾರೆ, ಆದರೆ ಸಾಯಿ ಪಲ್ಲವಿ ಬಗ್ಗೆ ಇಷ್ಟು ಕಠಿಣ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ರಾಮಾಯಣ ಸಿನಿಮಾದ ಭಾಗವಾಗಲು ಸಾಧ್ಯವಾಗಲಿಲ್ಲ ಎಂಬ ಬೇಸರ ಆಲಿಯಾ ಅವರಲ್ಲಿ ಇನ್ನೂ ಇದೆ ಎಂಬುದನ್ನು ಇದು ತೋರಿಸುತ್ತದೆ. ಇದಕ್ಕಿಂತ ಸ್ಪಷ್ಟವಾಗಿ ಬೇರೆ ಹೇಗೆ ಹೇಳಲು ಸಾಧ್ಯ? ಅಂದರೆ, ಈ ಬಗ್ಗೆ ಕೇಳಿಬರುತ್ತಿದ್ದ ಮಾತುಗಳು ನಿಜವೇ ಆಗಿವೆ ಎಂದಾಯಿತು ಎಂದು ಮತ್ತೊಬ್ಬರು ಖಾರವಾಗಿ ನುಡಿದಿದ್ದಾರೆ.

ಸಾಯಿ ಪಲ್ಲವಿ ಹೆಚ್ಚು ಇಷ್ಟವಾಗ್ತಾರೆ

ಸಾಯಿ ಪಲ್ಲವಿ ಕ್ರಮೇಣ ಹೆಚ್ಚು ಇಷ್ಟವಾಗುತ್ತಾ ಹೋಗುತ್ತಾರೆ. ನಾನು ಈ ಸಿನಿಮಾವನ್ನು 4 ಬಾರಿ ನೋಡಿದ್ದೇನೆ, ಪ್ರತಿ ಬಾರಿಯೂ ಅವರು ಇನ್ನಷ್ಟು ಉತ್ತಮವಾಗಿ ಕಂಡರು ಎಂದು ಸಾಯಿಪಲ್ಲವಿ ನಟನೆಯನ್ನು ಹೊಗಳಿದ್ದಾರೆ.

ಹೇಗಿರ್ಬೇಕ್ ರೀ ಸೀತೆ

ನೀವು ಎಂತಹ ಸೀತೆಯನ್ನು ನಿರೀಕ್ಷಿಸುತ್ತಿದ್ದೀರಿ ಎಂದು ನನಗೆ ತಿಳಿಯುತ್ತಿಲ್ಲ. ನಿಜ ಜೀವನದಲ್ಲಿ ನೀವು ಎಂದಾದರೂ ಸೀತೆಯನ್ನು ನೋಡಿದ್ದೀರಾ? ಸಾಯಿ ಪಲ್ಲವಿಯವರನ್ನು ಟೀಕಿಸುವ ಮೊದಲು, ನಿಮ್ಮದೇ ಆದ ಸೋತ ಚಲನಚಿತ್ರಗಳತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ. ಸೀತೆ ನಿಮ್ಮ ಕಲ್ಪನೆಯಲ್ಲಿರುವಂತೆಯೇ ಇರಬೇಕೆಂದು ನಿರೀಕ್ಷಿಸುವುದನ್ನು ನಿಲ್ಲಿಸಿ ಎಂದು ಮಲರ್ ಹೆಸರಿನ ಎಕ್ಸ್​ ಖಾತೆಯ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).