ವಿಜಯ್​ಗೆ 'ಜನ ನಾಯಗನ್' ಕೊನೇ ಚಿತ್ರವಲ್ಲ! ಸೋಲಿನ ಭಯದಲ್ಲಿರುವ ನಿರ್ಮಾಪಕರಿಗೆ ಮತ್ತೊಂದು ಭರವಸೆ?​

ವಿಜಯ್​ ಅಭಿನಯದ 'ಜನ ನಾಯಗನ್'​ ಸಿನಿಮಾ
ವಿಜಯ್​ ಅಭಿನಯದ 'ಜನ ನಾಯಗನ್'​ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್ ಅವರ ಕೊನೇ ಚಿತ್ರ ಜನ ನಾಯಗನ್​ ರಿಲೀಸ್​ಗೆ ಸಂಕಷ್ಟ
  • ಇತ್ತೀಚಿನ ಬೆಳವಣಿಗೆಗಳನ್ನು ಕಂಡ ಮೇಲೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋಲುವ ಭೀತಿ
  • ಚಿತ್ರದ ನಿರ್ಮಾಪಕರಿಗೆ ಇನ್ನೊಂದು ಸಿನಿಮಾ ಮಾಡಿಕೊಡುವ ಭರವಸೆ ಕೊಟ್ಟ ನಟ
ಚೆನ್ನೈ: ಕಾಲಿವುಡ್​ ಸ್ಟಾರ್​ ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್'​ ರಿಲೀಸ್​ಗೆ ಸದ್ಯ ಸೆನ್ಸಾರ್​ ಮಂಡಳಿ ತಂದಿಟ್ಟ ಸಂಕಷ್ಟ ಇನ್ನೂ ಬಗೆಹರಿದಿಲ್ಲ. ಕೋರ್ಟ್​ ಮೆಟ್ಟಿಲೇರಿದ ಚಿತ್ರತಂಡಕ್ಕೆ ಅಂದುಕೊಂಡ ದಿನದಂದೇ ಬಿಡುಗಡೆ ಭಾಗ್ಯ ನೀಡದಂತೆ ಮಾಡಿದ್ದು ಸಿಬಿಎಫ್​ಸಿ. ಜ.09ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿದ್ದ ವಿಜಯ್​ ಚಿತ್ರ, ಇಂದಿಗೂ ರಿಲೀಸ್​ ಆಗದಿರುವುದು ಹಲವು ಕಾಲಿವುಡ್​ ಚಿತ್ರಗಳಿಗೆ ಭಾರೀ ಸಂಕಷ್ಟ ತಂದೊಡ್ಡಿದೆ.
ವಿಜಯ್ ಅವರ ಜನನಾಯಗನ್​ ಚಿತ್ರದ ರಿಲೀಸ್​ ಯಾವಾಗ ಎಂಬ ಸ್ಪಷ್ಟ ಮಾಹಿತಿ ತಮಿಳು ಚಿತ್ರರಂಗಕ್ಕೆ ಇನ್ನೂ ಲಭ್ಯವಾಗಿಲ್ಲ. ಇದು ರಿಲೀಸ್​ಗೆ ಎದುರುನೋಡುತ್ತಿರುವ ನಟನ ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳಲ್ಲಿ ದೊಡ್ಡ ಗೊಂದಲ ಸೃಷ್ಟಿಸಿದೆ. ಜನವರಿಯಿಂದ ಇಲ್ಲಿಯವರೆಗೂ ಬಿಡುಗಡೆ ಯಾವಾಗ ಎಂಬುದೇ ಇನ್ನೂ ತಿಳಿಯದ ನಿರ್ಮಾಪಕರಿಗೆ ಸೋಲು ಸಿಕ್ಕರೆ ಏನು ಗತಿ? ಎಂಬ ತಲೆಬಿಸಿ ಕಾಡತೊಡಗಿದೆ. ಅದಕ್ಕೀಗ, ವಿಜಯ್​ ಮತ್ತೊಂದು ಸಿನಿಮಾದಲ್ಲಿ ನಟಿಸುವ ಮೂಲಕ ನಿರ್ಮಾಪಕರಿಗೆ ಹಣವನ್ನು ಹಿಂತಿರುಗಿಸಲು ಮುಂದಾಗಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.
ಮೊದಲೇ ರಿಲೀಸ್​ ಸಂಕಷ್ಟ ಅನುಭವಿಸುತ್ತಿರುವ ಜನ ನಾಯಗನ್​ಗೆ ಇತ್ತೀಚೆಗಷ್ಟೇ ಚಿತ್ರದ ಬಹುಮುಖ್ಯ ದೃಶ್ಯಗಳ ಸೋರಿಕೆ ದೊಡ್ಡ ಹೊಡೆತ ನೀಡಿದೆ. ಈ ಎಲ್ಲ ಬೆಳವಣಿಗೆಗಳು, ಸಿನಿಮಾದ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಲಿದೆ ಎಂಬ ಭಯ ಅದಾಗಲೇ ನಿರ್ಮಾಪಕರಲ್ಲಿ ಕಾಡಲಾರಂಭಿಸಿದೆ. ಇದೇ ಕಾರಣಕ್ಕೋ, ಏನೋ ಚಿತ್ರದ ನಿರ್ಮಾಪಕರಿಗೆ ಇನ್ನೊಂದು ಚಿತ್ರ ಮಾಡಿಕೊಡುವ ಭರವಸೆಯನ್ನು ವಿಜಯ್​ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ನಿರ್ಧಾರ ಜನ ನಾಯಗನ್​ ಒಟ್ಟು ಗಳಿಕೆಯನ್ನು ನೋಡಿದ ಮೇಲೆ ಕೈಗೊಳ್ಳುವುದಾಗಿ ವಿಜಯ್​ ಹೇಳಿದ್ದಾರೆ ಎನ್ನಲಾಗಿದೆ. ಚಿತ್ರದ ತಯಾರಕರು ಹೇಳಿರುವಂತೆ ಇದೇನಾದರೂ ನಿಜವಾದರೆ, ಅದರಲ್ಲೂ ನಟನ ಕೊನೆಯ ಚಿತ್ರ ಎನ್ನಲಾದ ಜನ ನಾಯಗನ್ ಬಾಕ್ಸ್ ಆಫೀಸ್​ನಲ್ಲಿ ಸೋತರೆ, ಅದೇ ನಿರ್ಮಾಪಕರಿಗೆ ಇನ್ನೊಂದು ಸಿನಿಮಾ ಮಾಡಿಕೊಡುವುದು ವಿಜಯ್​ ಅವರ ಉದ್ದೇಶವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net