ಇದಲ್ಲದೆ, ಮಾಸ್ಟರ್ ಚಿತ್ರದ ಆಡಿಯೋ ಬಿಡುಗಡೆ ನಂತರ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಜಯ್ ಜತೆಗೆ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗದ ಕಾರಣ, ಸಂಗೀತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ನಟಿ ತ್ರಿಷಾ ಅವರೇ ಇದಕ್ಕೆಲ್ಲ ಕಾರಣ ಎಂಬ ಊಹಾಪೋಹಗಳು ಹಬ್ಬಿದ್ದವು. ಒಟ್ಟಾರೆ, ವಿಜಯ್ ಮತ್ತು ಸಂಗೀತಾ ಡಿವೋರ್ಸ್ ಪ್ರಕರಣದಲ್ಲಿ ತ್ರಿಷಾ ಹೆಸರು ಭಾರಿ ಚರ್ಚೆಯಾಗುತ್ತಿದೆ. ಈ ಸನ್ನಿವೇಶದಲ್ಲಿ ನೆಟ್ಟಿಗರು ನಟಿ ತ್ರಿಶಾ ಮಾಡಿದ ಹಳೆಯ ಪೋಸ್ಟ್‌ಗಳನ್ನು ಕೆದಕಿ ಮರುಪೋಸ್ಟ್ ಮಾಡುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದು ವಿಪರ್ಯಾಸ,(ಏಜೆನ್ಸೀಸ್).