ನಾಲ್ಕು ವರ್ಷದ ಹಿಂದಿನ ವಿವಾದ: ಕೊನೆಗೂ ಮೌನ ಮುರಿದು ಭಾವುಕರಾದ ಸೌತ್​ ಬ್ಯೂಟಿ ಸಾಯಿ ಪಲ್ಲವಿ! Sai Pallavi

ನಾಲ್ಕು ವರ್ಷದ ಹಿಂದಿನ ವಿವಾದ: ಕೊನೆಗೂ ಮೌನ ಮುರಿದು ಭಾವುಕರಾದ ಸೌತ್​ ಬ್ಯೂಟಿ ಸಾಯಿ ಪಲ್ಲವಿ! Sai Pallavi
ನಾಲ್ಕು ವರ್ಷದ ಹಿಂದಿನ ವಿವಾದ: ಕೊನೆಗೂ ಮೌನ ಮುರಿದು ಭಾವುಕರಾದ ಸೌತ್​ ಬ್ಯೂಟಿ ಸಾಯಿ ಪಲ್ಲವಿ! Sai Pallavi
Published on

ಪ್ರಮುಖ ಮುಖ್ಯಾಂಶಗಳು

  • ಸಾಯಿ ಪಲ್ಲವಿ ಈ ಹೆಸರು ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿತವನ್ನು ಹೆಚ್ಚಿಸುತ್ತದೆ
  • ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ
  • ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದಾರೆ
  • ಇದೀಗ ಸಾಯಿ ಪಲ್ಲವಿ ನಾಲ್ಕು ವರ್ಷ ಹಿಂದಿನ ವಿವಾದವೊಂದರ ಬಗ್ಗೆ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ
ಚೆನ್ನೈ: ಸಾಯಿ ಪಲ್ಲವಿ ( Sai Pallavi )… ಈ ಹೆಸರು ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿತವನ್ನು ಹೆಚ್ಚಿಸುತ್ತದೆ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಅವರ ಹೆಸರು ತೆಗೆದರೆ ಸಾಕು, ಕೇವಲ ಅವರ ಸೂಪರ್ ಹಿಟ್ ಸಿನಿಮಾಗಳ ಬಗ್ಗೆ ಅಲ್ಲದೇ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಜನ ಚರ್ಚಿಸುತ್ತಾರೆ. ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಜೊತೆಗೆ, ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದಾರೆ. ಅಲ್ಲದೆ, ಜನರ ನಂಬಿಕೆಗೆ ದ್ರೋಹ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಸಿನಿ ರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಸಾಯಿ ಪಲ್ಲವಿ ನಾಲ್ಕು ವರ್ಷದ ವಿವಾದವೊಂದರ ಬಗ್ಗೆ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಹಿಂದೆ, ಪತ್ರಿಕಾಗೋಷ್ಠಿಯೊಂದರಲ್ಲಿ ವರದಿಗಾರರೊಬ್ಬರು "ನೀವು ಮಲಯಾಳಿಗಳಾಗಿದ್ದರೂ ಸಹ, ತಮಿಳು ಭಾಷೆಯನ್ನು ಇಷ್ಟೊಂದು ಚೆನ್ನಾಗಿ ಮಾತನಾಡುತ್ತೀರಲ್ಲ ಹೇಗೆ? ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ಉತ್ತರಿಸಿದ್ದ ಸಾಯಿ ಪಲ್ಲವಿ, "ನಾನು ತಮಿಳು ಹುಡುಗಿ, ಮಲಯಾಳಿ ಅಲ್ಲ" ಎಂದಿದ್ದರು.
ಇನ್ನೂ ಈ ಹೇಳಿಕೆ ನೀಡಿದ ಎರಡು ವರ್ಷಗಳ ನಂತರ, ಕೆಲವರು ಹೇಳಿಕೆಯನ್ನು ತಿರುಚಿ, "ತನ್ನನ್ನು ಮಲಯಾಳಿ ಎಂದು ಕರೆದಾಗ ಸಾಯಿ ಪಲ್ಲವಿ ಕೋಪಗೊಂಡರು" ಎಂದು ಸುಳ್ಳು ಪ್ರಚಾರವನ್ನು ಹರಡಿದರು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿದವು. ಈ ಸುದ್ದಿಯನ್ನು ನೋಡಿದ ಬಳಿಕ ನನಗೆ ಆಘಾತವಾಯಿತು ಎಂದು ಇತ್ತೀಚಿನ ಸಂದರ್ಶನದಲ್ಲಿ ಸಾಯಿಪಲ್ಲವಿ ಹೇಳಿಕೊಂಡಿದ್ದಾರೆ.
ನಾನು ಹೇಳದೇ ಇರುವ ಮಾತನ್ನು ಇಟ್ಟುಕೊಂಡು ನನ್ನ ಮೇಲೆ ಆರೋಪ ಮಾಡುವುದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಹುಟ್ಟಿ ಬೆಳೆದ ನಾನು, ನನ್ನ ಮಾತೃಭಾಷೆ ತಮಿಳು ಎಂದು ಹೇಳಿದ್ದೆ ಹೊರತು, ನಾನು ಎಂದಿಗೂ ಇತರ ಭಾಷೆಗಳನ್ನು ಕೀಳಾಗಿ ನೋಡಿರಲಿಲ್ಲ. ಮಲಯಾಳಂ ಕೂಡ ನನ್ನ ನೆಚ್ಚಿನ ಭಾಷೆ ಎಂದಿರುವ ಸಾಯಿ ಪಲ್ಲವಿ, ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ವಿವಾದಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಾಯಿ ಪಲ್ಲವಿ ಅವರು ಅತಿ ಹೆಚ್ಚು ನಿರೀಕ್ಷೆ ಮೂಡಿಸಿರುವ ಬಾಲಿವುಡ್‌ನ ಬೃಹತ್ ಯೋಜನೆ ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೂಲಕ ಸಾಯಿ ಪಲ್ಲವಿ ಹಿಂದಿ ಚಿತ್ರರಂಗದ ಪದಾರ್ಪಣೆಯಾಗಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net