ಇತ್ತೀಚಿನ ಸಂದರ್ಶನವೊಂದರಲ್ಲಿ ಧನುಷ್ ಬಗ್ಗೆ ಮಾತನಾಡಿದ ಮೃನಾಲ್, ಧನುಷ್ ಅವರಂತಹ ನಟನನ್ನು ನಾನು ಎಂದಿಗೂ ನೋಡಿಲ್ಲ. ನಾನು ಧನುಷ್ ಅವರ ಅಸುರನ್, ರಾಯನ್, ರಾಮಜಾನ್, ಕ್ಯಾಪ್ಟನ್ ಮಿಲ್ಲರ್ ಹಾಗೂ ಮಾರಿ ಸೇರಿದಂತೆ ಮುಂತಾದ ಚಿತ್ರಗಳನ್ನು ನೋಡಿದ್ದೇನೆ. ಅಂದಿನಿಂದ, ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ನಾನು ಅಸುರನ್ ಅನ್ನು ಎಷ್ಟು ಬಾರಿ ನೋಡಿದ್ದೇನೆಂದು ತಿಳಿದಿಲ್ಲ. ಅವರು ಕೇವಲ ನಟನಲ್ಲ, ನಿರ್ದೇಶಕ, ಬರಹಗಾರ, ಗೀತರಚನೆಕಾರ ಮತ್ತು ಗಾಯಕ ಕೂಡ. ಇಷ್ಟೊಂದು ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿ ಇರುವುದು ಬಹಳ ಅಪರೂಪ ಎಂದು ಮೃನಾಲ್ ಹೇಳಿದರು.