ಸಾಮಾಜಿಕ ಜಾಲತಾಣಗಳಿಗೆ ಗುಡ್​ಬೈ ಹೇಳಿದ ಬಳಿಕ ಹೇಗಿದೆ ಜೀವನ? ಅಚ್ಚರಿ ಉತ್ತರ ಕೊಟ್ಟ ನಟಿ ಐಶ್ವರ್ಯಾ ಲಕ್ಷ್ಮೀ! Aishwarya Lekshmi

ಖ್ಯಾತ ಯೂಟ್ಯೂಬರ್​ ಪೂಜಾ ತಲ್ವಾರ್ ಅವರ ಸಂದರ್ಶನದಲ್ಲಿ ಮಾತನಾಡಿದ ಐಶ್ವರ್ಯಾ ಲಕ್ಷ್ಮೀ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ನನ್ನ ನಿರ್ಧಾರದಿಂದ ಜೀವನದಲ್ಲಿ ನೆಮ್ಮದಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Aishwarya Lekshmi
ನಟಿ ಐಶ್ವರ್ಯಾ ಲಕ್ಷ್ಮೀ
Published on: 

ತಿರುವನಂತಪುರಂ: ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೂರ ಉಳಿದು ನೆಮ್ಮದಿಯ ಜೀವನ ನಡೆಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ಲಕ್ಷ್ಮೀ ( Aishwarya Lekshmi ), ವರ್ಚುವಲ್ ಲೋಕದಿಂದ ಹೊರಬಂದ ಬಳಿಕ ತಮ್ಮ ಬದುಕಿನಲ್ಲಿ ಉಂಟಾಗಿರುವ ಧನಾತ್ಮಕ ಬದಲಾವಣೆಗಳ ಕುರಿತು ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಖ್ಯಾತ ಯೂಟ್ಯೂಬರ್​ ಪೂಜಾ ತಲ್ವಾರ್ ಅವರ ಸಂದರ್ಶನದಲ್ಲಿ ಮಾತನಾಡಿದ ಐಶ್ವರ್ಯಾ ಲಕ್ಷ್ಮೀ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ನನ್ನ ನಿರ್ಧಾರದಿಂದ ಜೀವನದಲ್ಲಿ ನೆಮ್ಮದಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಜಾಲತಾಣಗಳಿಗೆ ಗುಡ್​ ಬೈ ಹೇಳಿ ಒಂದು ವರ್ಷಕ್ಕೂ ಹೆಚ್ಚ ಸಮಯವಾಗಿದೆ. ಈ ಅವಧಿಯಲ್ಲಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಪಾಸಿಟಿವ್​ ಬದಲಾವಣೆಯನ್ನು ಅನುಭವಿಸಿದ್ದೇನೆ ಎಂದು ಸೌತ್​ ಬ್ಯೂಟಿ ತಿಳಿಸಿದ್ದಾರೆ.

Also Read
ಮದುವೆಗಾಗಿ ಸಿದ್ಧವಾಗಿತ್ತು 1 ಕೆಜಿ ಚಿನ್ನ ಆದರೆ ಐಶ್ವರ್ಯಾ ಲಕ್ಷ್ಮೀಯ ಆ ಒಂದು ನಡೆಯಿಂದ ಎಲ್ಲವೂ ನುಚ್ಚು ನೂರಾಯ್ತು..! Aishwarya Lekshmi
Aishwarya Lekshmi

ಸೋಷಿಯಲ್ ಮೀಡಿಯಾವು ನಟರಿಗೆ ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗೆ ಜನರನ್ನು ನೇರವಾಗಿ ತಲುಪಲು ಹಾಗೂ ಹೆಚ್ಚಿನ ಜನಪ್ರಿಯತೆ ಗಳಿಸಲು ಉತ್ತಮ ಅವಕಾಶಗಳನ್ನು ನೀಡುತ್ತದೆ ಎಂಬುದನ್ನು ಐಶ್ವರ್ಯಾ ಲಕ್ಷ್ಮೀ ಈ ಸಂದರ್ಭದಲ್ಲಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಇತ್ತೀಚಿನ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ 'ವಾಳ 2' (Vazha 2) ಸಿನಿಮಾದ ನಾಯಕ ಹಶೀರ್ ಅವರು ಒಬ್ಬ ಪ್ರಭಾವಶಾಲಿ ಇನ್ಫ್ಲುಯೆನ್ಸರ್ ಆಗಿರುವುದನ್ನು ಉದಾಹರಿಸಿದ ಐಶ್ವರ್ಯಾ, ಜಾಲತಾಣಗಳ ಈ ರೀತಿಯ ಸಕಾರಾತ್ಮಕ ಅವಕಾಶಗಳ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿದೆ ಎಂದಿದ್ದಾರೆ.

ಅಂದಹಾಗೆ, ನಟಿ ಐಶ್ವರ್ಯಾ ಲಕ್ಷ್ಮೀ ಅವರು 2025ರ ಸೆಪ್ಟೆಂಬರ್‌ನಲ್ಲಿ ಸಾಮಾಜಿಕ ಜಾಲತಾಣಗಳಿಂದ ವಿರಾಮ ಪಡೆದುಕೊಂಡರು. ಅಂದಿನಿಂದ ಅವರ ಸೋಷಿಯಲ್​ ಮೀಡಿಯಾ ಬ್ಯಾನ್​ ಮುಂದುವರಿದಿದೆ. ಘೋಷಣೆ ಮಾಡಿದ ಆ ಸಂದರ್ಭದಲ್ಲಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಐಶ್ವರ್ಯಾ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಅವರು, ವೃತ್ತಿಪರ ನಟಿಯಾಗಿ ಮುಂದುವರಿಯಲು ಜಾಲತಾಣ ಅತ್ಯಗತ್ಯ ಎಂದೇ ದೀರ್ಘಕಾಲದವರೆಗೆ ನಂಬಿದ್ದೆ. ಕಾಲಕ್ಕೆ ತಕ್ಕಂತೆ ಬದಲಾಗಲು ಈ ಆನ್‌ಲೈನ್ ವೇದಿಕೆಗಳ ಬಳಕೆ ಅನಿವಾರ್ಯ ಎಂಬ ಭಾವನೆಯಲ್ಲಿದ್ದೆ. ಆದರೆ, ಕಾಲಾನಂತರದಲ್ಲಿ ಕೆಲಸದ ಮೇಲೆ ಗಮನಹರಿಸಬೇಕಿದ್ದ ನನ್ನನ್ನು ಸೋಷಿಯಲ್ ಮೀಡಿಯಾವೇ ಸಂಪೂರ್ಣವಾಗಿ ನಿಯಂತ್ರಿಸಲು ಆರಂಭಿಸಿತು ಎಂದು ಐಶ್ವರ್ಯಾ ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಜಾಲತಾಣಗಳ ಬಳಕೆ ನನ್ನ ಸ್ವತಂತ್ರ ಆಲೋಚನಾ ಶಕ್ತಿಯ ಮೇಲೆ ನೆಗೆಟಿವ್ ಪ್ರಭಾವ ಬೀರುತ್ತಿರುವುದಲ್ಲದೆ, ನನ್ನ ಭಾಷೆ ಹಾಗೂ ಸಂವಹನ ಶೈಲಿಯನ್ನು ಸಹ ಬದಲಾಯಿಸುತ್ತಿದೆ ಎಂಬುದನ್ನು ಅರಿತುಕೊಂಡೆ. ಸಾಮಾನ್ಯ ಜೀವನದ ಸಣ್ಣಪುಟ್ಟ ಖುಷಿಗಳನ್ನು ಅನುಭವಿಸುವ ಸ್ವಾತಂತ್ರ್ಯವನ್ನೂ ಜಾಲತಾಣ ಕಸಿದುಕೊಳ್ಳುತ್ತಿದೆ ಎಂಬ ಭಾವನೆ ನನ್ನಲ್ಲಿ ಮೂಡಿತು. ಈ ಕಾರಣಕ್ಕೆ ನಾನು ಜಾಲತಾಣಗಳಿಂದ ದೂರ ಉಳಿಯುತ್ತಿದ್ದೇನೆ ಎಂದು ಐಶ್ವರ್ಯಾ ಅವರು ತಿಳಿಸಿದ್ದರು.

Also Read
ಆ ಬಟ್ಟೆಯಲ್ಲಿ ಜನರ ಕಣ್ಣುಗಳು ಏನು ಹುಡುಕುತ್ತಿವೆ ಎಂಬುದು ನನಗೆ ಗೊತ್ತಿತ್ತು: ನಟಿ ಐಶ್ವರ್ಯಾ ಲಕ್ಷ್ಮಿ ಬೋಲ್ಡ್​ ಸ್ಟೇಟ್​ಮೆಂಟ್​! Aishwarya Lekshmi
Aishwarya Lekshmi

ಪ್ರಸ್ತುತ ತಮ್ಮ ಬದುಕಿನಲ್ಲಿ ಹಿಂದಿನ ಸಮಸ್ಯೆಗಳು ಹಾಗೂ ನೆಗೆಟಿವ್ ಅಂಶಗಳು ಅಲ್ಲಲ್ಲಿ ಇದ್ದರು ಕೂಡ ಅವುಗಳು ಪ್ರತಿದಿನ ನನ್ನ ಕಣ್ಣಿಗೆ ಬೀಳುತ್ತಿಲ್ಲವಾದ್ದರಿಂದ ನನಗೆ ದೊಡ್ಡ ಸಮಾಧಾನವಿದೆ ಎಂದು ಐಶ್ವರ್ಯಾ ಲಕ್ಷ್ಮೀ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದ ಅನಾವಶ್ಯಕ ಗೊಂದಲ ಹಾಗೂ ಟೀಕೆಗಳಿಂದ ದೂರ ಉಳಿದಿರುವುದರಿಂದ ತಮ್ಮ ಮನಸ್ಸಿಗೆ ಅಪಾರ ನೆಮ್ಮದಿ ಸಿಕ್ಕಿದ್ದು, ವೃತ್ತಿಬದುಕಿನತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿದೆ ಎಂದು ಐಶ್ವರ್ಯಾ ಅವರು ಖುಷಿಯಿಂದ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಗದ್ದಲದಿಂದ ದೂರವಿರುವ ನಟಿ ಐಶ್ವರ್ಯಾ ಲಕ್ಷ್ಮೀ ಪ್ರಸ್ತುತ ತಮ್ಮ ಮುಂಬರುವ ಹೊಸ ನೆಟ್‌ಫ್ಲಿಕ್ಸ್ ಸಿರೀಸ್ ‘ಲವ್’ (Love) ಬಿಡುಗಡೆಯ ಸಿದ್ಧತೆ ಹಾಗೂ ಪ್ರಚಾರ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನಿರ್ಮಾಪಕಿ ಸೌಂದರ್ಯ ರಜನೀಕಾಂತ್ ಹಾಗೂ ಸಹನಟ ಅರ್ಜುನ್ ದಾಸ್ ಅವರೊಂದಿಗೆ ಸೇರಿ ಈ ಸಿರೀಸ್‌ನ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ನಟಿ, ಸಿನಿಮಾಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net