ಮಗಳ ನೆನಪು, 3 ವರ್ಷಗಳಿಂದ ಚಪ್ಪಲಿ ಧರಿಸದ ಖ್ಯಾತ ನಟ!

ಖ್ಯಾತ ತಮಿಳು ನಟ, ಸಂಗೀತ ನಿರ್ದೇಶಕ ವಿಜಯ್​ ಆಂಟನಿ, ಕಳೆದ ಮೂರು ವರ್ಷಗಳಿಂದ ಪಾದರೆ ಧರಿಸುತ್ತಿರಲಿಲ್ಲ. ಕೆಲವೆಡೆ ಲೈವ್​ ಸಂಗೀತ ಕಾರ್ಯಕ್ರಮ ನೀಡುವಾಗ ಹೊರತುಪಡಿಸಿದರೆ, ಶೂಟಿಂಗ್​, ಪ್ರಚಾರ ಸೇರಿ ಎಲ್ಲ ಸಮಾರಂಭಗಳಿಗೂ ಬರಿಗಾಲಿನಲ್ಲೇ ಬರುತ್ತಿದ್ದರು. ಅವರ ಈ ಹಠಾತ್​ ಬದಲಾವಣೆಯ ಬಗ್ಗೆ ಹಲವಾರು ಮಂದಿ ಪ್ರಶ್ನಿಸಿದ್ದರೂ, ಆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.
ವಿಜಯ್ ಆ್ಯಂಟನಿ
ವಿಜಯ್ ಆ್ಯಂಟನಿ
Published on: 

ಖ್ಯಾತ ತಮಿಳು ನಟ, ಸಂಗೀತ ನಿರ್ದೇಶಕ ವಿಜಯ್​ ಆಂಟನಿ, ಕಳೆದ ಮೂರು ವರ್ಷಗಳಿಂದ ಪಾದರೆ ಧರಿಸುತ್ತಿರಲಿಲ್ಲ. ಕೆಲವೆಡೆ ಲೈವ್​ ಸಂಗೀತ ಕಾರ್ಯಕ್ರಮ ನೀಡುವಾಗ ಹೊರತುಪಡಿಸಿದರೆ, ಶೂಟಿಂಗ್​, ಪ್ರಚಾರ ಸೇರಿ ಎಲ್ಲ ಸಮಾರಂಭಗಳಿಗೂ ಬರಿಗಾಲಿನಲ್ಲೇ ಬರುತ್ತಿದ್ದರು. ಅವರ ಈ ಹಠಾತ್​ ಬದಲಾವಣೆಯ ಬಗ್ಗೆ ಹಲವಾರು ಮಂದಿ ಪ್ರಶ್ನಿಸಿದ್ದರೂ, ಆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ "ಅಪ್ಪ ಕುಟ್ಟಿ' ಚಿತ್ರದ ಪ್ರಿ-ರಿಲೀಸ್​ ಕಾರ್ಯಕ್ರಮದಲ್ಲಿ ವಿಜಯ್​ ಪತ್ನಿ ಫಾತಿಮಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, 2023ರಲ್ಲಿ ಮಗಳು ಮೀರಾ ಆತ್ಮಹತ್ಯೆಯ ಬಳಿಕ ವಿಜಯ್​ ಪಾದರಕ್ಷೆ ತೊರೆದಿದ್ದಾರೆ ಎಂದಿದ್ದಾರೆ.

ವಿಜಯ್ ಆ್ಯಂಟನಿ
ವಿಜಯ್ ಆ್ಯಂಟನಿ

"ನಮ್ಮ ಹಿರಿಯ ಪುತ್ರಿ ಮೀರಾ ನಿಧನಾನಂತರ ನಾನು ಯಾವುದೇ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದೀಗ ಐದು ವರ್ಷಗಳ ಬಳಿಕ ನಾನು "ಅಪ್ಪ ಕುಟ್ಟಿ' ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮೀರಾಗೆ ಪಾದರಕ್ಷೆಗಳೆಂದರೆ ಇಷ್ಟ. ಹೀಗಾಗಿ ಹಲವು ರೀತಿಯ ಬ್ರಾಂಡೆಡ್​ ಚಪ್ಪಲಿಗಳನ್ನು ಕೊಡಿಸಿದ್ದೆವು. ಮೀರಾ ನಿಧನದ ಬಳಿಕ ಅವುಗಳನ್ನು ನೋಡಿದ ವಿಜಯ್​, ತಾವು ಚಪ್ಪಲಿ ಧರಿಸುವುದನ್ನು ನಿಲ್ಲಿಸಿದರು. ಹಾಗೇ ವಿಜಯ್​ಗೆ ವಾಚ್​ಗಳೆಂದರೆ ತುಂಬ ಪ್ರೀತಿ. ಹಲವು ದುಬಾರಿ ಬೆಲೆಯ ವಾಚ್​ಗಳಿದ್ದರೂ ಅವರು ಇತ್ತೀಚೆಗೆ ಎಲ್ಲೆಡೆ ಒಂದೇ ಕೈಗಡಿಯಾರ ಧರಿಸುತ್ತಾರೆ. ಅದಕ್ಕೆ ಕಾರಣ ಮೀರಾ ನಿಧನದ ವೇಳೆ ಆ ವಾಚ್​ ಧರಿಸಿದ್ದಳು. ಆಕೆಯ ನೆನಪಿಗಾಗಿ ಅವರು ಆ ವಾಚ್​ಅನ್ನೇ ಎಲ್ಲೆಡೆ ಧರಿಸುತ್ತಾರೆ' ಎಂದು ಭಾವುಕರಾಗಿ ಫಾತಿಮಾ ಹೇಳಿಕೊಂಡಿದ್ದಾರೆ.