ಸಲ್ಮಾನ್ ಖಾನ್ ಅವರ ಕುಟುಂಬದ ವಿಶೇಷತೆಯೇ ಅದು. ತಂದೆ ಸಲೀಂ ಖಾನ್ ಮುಸ್ಲಿಂ ಧರ್ಮದವರಾದರೆ, ತಾಯಿ ಸಲ್ಮಾ ಖಾನ್ (ಸುಶೀಲಾ ಚರಕ್) ಹಿಂದೂ ಧರ್ಮದ ಹಿನ್ನಲೆ ಹೊಂದಿದ್ದಾರೆ. ಹೀಗಾಗಿ ಖಾನ್ ಕುಟುಂಬದಲ್ಲಿ ಗಣೇಶೋತ್ಸವ, ಈದ್, ದೀಪಾವಳಿಯಂತಹ ಹಬ್ಬಗಳನ್ನು ಯಾವುದೇ ಭೇದಭಾವವಿಲ್ಲದೆ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಸಲ್ಮಾನ್ ಖಾನ್ ಕಳೆದ ಹಲವು ವರ್ಷಗಳಿಂದ ತಪ್ಪದೆ ಗಣಪತಿ ಪೂಜೆ ಮತ್ತು ವಿಸರ್ಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ, (ಏಜೆನ್ಸೀಸ್).