

ಪ್ರಮುಖ ಮುಖ್ಯಾಂಶಗಳು
Sai Pallavi as Sita:
ನೈಸರ್ಗಿಕ ಸ್ಕಿನ್ ಟೋನ್, ನಟನೆ, ಡ್ಯಾನ್ಸ್ ವಿಚಾರಕ್ಕೆ ಸಾಯಿಪಲ್ಲವಿ ಬಗ್ಗೆ ಹೀಗೆಳೆಯೋ ಮಾತೆ ಇಲ್ಲ. ಪ್ರೇಮಂ, ಫಿದಾ, ಶ್ಯಾಮ್ ಸಿಂಗ್ ರಾಯ್ನಲ್ಲಿ ಅವರ ಅದ್ಭುತ ನಟನೆಗೆ ಮನಸೋತೋರಿಲ್ಲ. ಬ್ಯೂಟಿ ಪ್ರಾಡಕ್ಟ್ ಅಥವಾ ಫೇರ್‌ನೆಸ್ ಕ್ರೀಮ್ ಜಾಹೀರಾತುಗಳನ್ನು ಅನುಮೋದಿಸುವುದಿಲ್ಲ ಮತ್ತು ಮಾರಾಟ ಮಾಡುವುದಿಲ್ಲ. ಅವರು 2 ಕೋಟಿ ರೂ.ಗಳ ಬ್ರ್ಯಾಂಡ್ ಜಾಹೀರಾತು ಆಫರ್ ಅನ್ನು ಮುಲಾಜಿಲ್ಲದೆ ರಿಜೆಕ್ಟ್ ಮಾಡಿದ್ದರು. ಇಂತಹ ವ್ಯಕ್ತಿತ್ವವುಳ್ಳ ಸಾಯಿಪಲ್ಲವಿ ಅವರು ಏಕ್ ದಿನ್ ಸಿನಿಮಾ ನಂತರ ರಾಮಾಯಣ ವಿಚಾರಕ್ಕಾಗಿ ಹೆಚ್ಚು ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಸೀತೆ ಸುಂದರವಾಗಿಲ್ಲ
ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವ ಮಹಿಳಾ ನಟಿಯರನ್ನು ಸಾಂಪ್ರದಾಯಿಕ ಸೌಂದರ್ಯದ ಮಾನದಂಡಗಳೊಂದಿಗೆ ಹೇಗೆ ಅಳೆಯಲಾಗುತ್ತದೆ ಎಂಬುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಉದ್ಭವವಾಗಿದೆ.
ಸೈನಾ ಎಂಬುವವರು ಪೋಸ್ಟ್ ಹಂಚಿಕೊಂಡಿದ್ದು ಯಾವ ಆಧಾರದ ಮೇಲೆ ಸಾಯಿಪಲ್ಲವಿ ಅವರನ್ನು ರಾಮಾಯಣ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.ಚೆಂದ ಅಥವಾ ನಟನೆಯ ಬಗ್ಗೆ ಮರೆತುಬಿಡಿ, ಈ ಪಾತ್ರಕ್ಕಾಗಿ ಅನೇಕ ಜನರು ನಿರೀಕ್ಷಿಸುವ ಸೌಂದರ್ಯವೂ ಅವರಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಸೈನಾ ಅವರ ಈ ಪೋಸ್ಟ್ಗೆ ಹಲವರು ಕಾಮೆಂಟ್ ಮಾಡಿದ್ದು, ನಿಮಗೆ ಸೀತಾ ಮಾತೆಯ ಸಾರ ಏನು ಎನ್ನುವುದೇ ಅರ್ಥವಾಗೋದಿಲ್ಲ. ಸೀತಾ ಪಾತ್ರಕ್ಕೆ ಬೇರೆ ನಟಿಯರಿಗಿಂತ ಜೀವ ತುಂಬಿ ಅಭಿನಯಿಸೋದು ಸಾಯಿಪಲ್ಲವಿಗಿಂತ ಬೇರೆಯಾರು ಇಲ್ಲ. ಅವರ ನೋಟಕ್ಕಿಂತ ನಟನೆಯನ್ನು ಚೆನ್ನಾಗಿ ಮಾಡುತ್ತಾರೆ. ಅದೇ ಆಕರ್ಷಣೆ ಎಂದು ನಂದಕುಮಾರ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.