

ಮುಂಬೈ: ಮಾಜಿ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಮತ್ತು ಹಿಂದಿ ನಟಿ ಸ್ವರಾ ಭಾಸ್ಕರ್ ನಡುವೆ 'ರೈಸ್ ಅಂಡ್ ಫಾಲ್' (Rise and Fall) ಸೀಸನ್ 2 ಎಂಬ ಹಿಂದಿ ರಿಯಾಲಿಟಿ ಗೇಮ್ ಶೋನಲ್ಲಿ ನಡೆದ ಜಗಳದಲ್ಲಿ ಪ್ರತಿಸ್ಪರ್ಧಿಯೊಬ್ಬ ಶೆಹಜಾದ್ಗೆ ಥಳಿಸಿದ ಘಟನೆ ಇದೀಗ ವೀಕ್ಷಕರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ 2ನೇ ಸೀಸನ್ನಲ್ಲಿ ಒಟ್ಟು 15 ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಕೊಟ್ಟಿದ್ದು, ಇವರ ಪೈಕಿ ಶೆಹಜಾದ್ ಪೂನಾವಾಲಾ ಮತ್ತು ಸ್ವರಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಸರಣಿ ಆರೋಪ ಎಸಗಿದ ಶೆಹಜಾದ್, ಮನೆಯ ಮತ್ತೊಬ್ಬ ಪುರುಷ ಸ್ಪರ್ಧಿಯಾದ ಸಿವೆಟ್ ತೋಮರ್ರನ್ನು ಉಲ್ಲೇಖಿಸಿ ಮಾತನಾಡಿದ್ದೇ ದೈಹಿಕ ಒಡೆದಾಟಕ್ಕೆ ಕಾರಣ ಎನ್ನಲಾಗಿದೆ. ಪ್ರಸ್ತಿತ, ಶೆಹಜಾದ್ಗೆ ಹೊಡೆದ ಸಿವೆಟ್ ತೋಮರ್ರನ್ನು ಸ್ಪಾಟ್ ಎಲಿಮಿನೇಷನ್ ಮಾಡಿ ಹೊರ ಕಳುಹಿಸಲಾಗಿದೆ.
ಸ್ವರಾ ಭಾಸ್ಕರ್ ಮತ್ತು ಸಿವೆಟ್ ತೋಮರ್ ಅವರನ್ನು ಟಾರ್ಗೆಟ್ ಮಾಡಿಕೊಂಡು ಮಾತು ಶುರುಮಾಡಿದ ಶೆಹಜಾದ್, ಸಿವೆಟ್‌ನ ಬೆನ್ನೆಲುಬನ್ನು ನೋಡಿ ಒಮ್ಮೆ. ಸ್ವರಾ ಭಾಸ್ಕರ್ ಜತೆ ಕುಳಿತಿರುವ ಆ ವ್ಯಕ್ತಿ ನನಗೆ ಉಪದೇಶ ಕೊಡಲು ಬರುತ್ತಾನೆ. ಇದೊಂದು ಬೂಟಾಟಿಕೆ. ಹೋಗಿ, ಮೈತ್ರಿ ಮಾಡಿಕೊಳ್ಳಿ. ಇದೇ ನಿಮ್ಮ ಮೈತ್ರಿ! ಟ್ಯಾಟೂ ಹಾಕಿಸಿಕೊಂಡು ಓಡಾಡುವ ವ್ಯಕ್ತಿ ಸ್ವರಾ ಭಾಸ್ಕರ್ ಜತೆ ಸೇರಿಕೊಂಡಿದ್ದಾನೆ ಎಂದರು. ಈ ಮಾತುಗಳಿಂದ ಕೆರಳಿದ ಸಿವೆಟ್, ಸಿಟ್ಟಿನಿಂದ ಬಂದು ಶೆಹಜಾದ್ಗೆ ಹೊಡೆದಿದ್ದಾರೆ.
ವೇಗವಾಗಿ ಶೆಹಜಾದ್ ಬಳಿ ಬಂದ ಸಿವೆಟ್ರನ್ನು ತಡೆದ ಸ್ವರಾ, ಯಾವುದೇ ಕಾರಣಕ್ಕೂ ಕೈಎತ್ತಬೇಡ ಎಂದ ಹೇಳಿದರೂ ಶೆಹಜಾದ್ ಪೂನಾವಾಲಾಗೆ ಥಳಿಸಿದರು. ಜಗಳದಲ್ಲಿ ಇತರ ಸ್ಪರ್ಧಿಗಳು ಮಧ್ಯಪ್ರವೇಶಿಸಲು ಮುಂದಾಗಿದ್ದೇ ಆದರೂ ಹಲ್ಲೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ, ಶೆಹಜಾದ್ ಪೂನಾವಾಲಾ ಕೆಳಗೆ ಬಿದ್ದಿದ್ದರು. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಹಿಂದಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಶೆಹಜಾದ್, ಸಿವೆಟ್ರನ್ನು ಕೆಣಕ್ಕಿದ್ದೆ ಈ ಘಟನೆಗೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ,(ಏಜೆನ್ಸೀಸ್).