ತೊದಲು ನುಡಿಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ಪ್ರಿಯಾಂಕಾ ಪುತ್ರಿ: ಪುಟಾಣಿ 'ಮಾಲ್ತಿ' ಗಾಯನದ ವಿಡಿಯೋ ವೈರಲ್​! Priyanka Chopra

A moment showing actress Priyanka Chopra chanting the Gayatri Mantra with her daughter, Malti Marie, sitting on her lap.
ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಡಿಲಲ್ಲಿ ಪುತ್ರಿ ಮಾಲ್ತಿ ಮೇರಿಯನ್ನು ಕೂರಿಸಿಕೊಂಡು ಗಾಯತ್ರಿ ಮಂತ್ರ ಪಠಿಸುತ್ತಿರುವ ಕ್ಷಣ.
Published on: 

ಹಾಲಿವುಡ್​: ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ತಮ್ಮ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮಾತ್ರ ಎಳ್ಳಷ್ಟೂ ಮರೆತಿಲ್ಲ. ವಿದೇಶದಲ್ಲೇ ನೆಲೆಸಿದ್ದರೂ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್‌ಗೆ ಭಾರತೀಯ ಸಂಸ್ಕಾರವನ್ನು ಧಾರೆ ಎರೆಯುತ್ತಿದ್ದಾರೆ. ಇದೀಗ, ಪುಟಾಣಿ ಮಾಲ್ತಿ ತನ್ನ ತೊದಲು ನುಡಿಯಲ್ಲಿ ಸ್ಪಷ್ಟವಾಗಿ 'ಗಾಯತ್ರಿ ಮಂತ್ರ' ಪಠಿಸುತ್ತಿರುವ ಮುದ್ದಾದ ವಿಡಿಯೋವೊಂದನ್ನು ಪ್ರಿಯಾಂಕಾ ಹಂಚಿಕೊಂಡಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ.

ಶೂಟಿಂಗ್ ಬಿಡುವಿನಲ್ಲಿ ತಾಯಿ-ಮಗಳ ಬಾಂಧವ್ಯ!

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ನಿಮ್ರೋಡ್ ಆಂಟಲ್ ನಿರ್ದೇಶನದ 'ಬ್ಲೂಫ್ಲೈ' (Bluefly) ಹಾಲಿವುಡ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಸೆಲ್ ಕ್ರೋವ್, ಮೈಕೆಲ್ ಚಿಕ್ಲಿಸ್ ಮತ್ತು ಡೇನಿಯಲ್ ಮ್ಯಾಕ್‌ಫರ್ಸನ್ ಅವರಂತಹ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ.

ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಪ್ರಿಯಾಂಕಾ ತಮ್ಮ ತಾಯಿ ಡಾ. ಮಧು ಚೋಪ್ರಾ ಮತ್ತು ಮಗಳು ಮಾಲ್ತಿ ಜೊತೆ ಕಾಲ ಕಳೆಯುತ್ತಿದ್ದಾರೆ. ಕಡಲತೀರದಲ್ಲಿ ವಾಕಿಂಗ್ ಮಾಡುವುದು ಸೇರಿದಂತೆ ಶೂಟಿಂಗ್ ಸ್ಪಾಟ್‌ನ ಸುಂದರ ಫೋಟೋ ಮತ್ತು ವಿಡಿಯೋಗಳನ್ನು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಗಾಯತ್ರಿ ಮಂತ್ರ ಪಠಿಸಿದ ಮಾಲ್ತಿ!

ಪ್ರಿಯಾಂಕಾ ಹಂಚಿಕೊಂಡಿರುವ ವಿಡಿಯೋ ಸರಣಿಯಲ್ಲಿ ಒಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಪ್ರಿಯಾಂಕಾ ತಮ್ಮ ಮಡಿಲಲ್ಲಿ ಮಗಳು ಮಾಲ್ತಿಯನ್ನು ಕೂರಿಸಿಕೊಂಡಿದ್ದು, ಇಬ್ಬರೂ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಕಿಟಕಿಯ ಹೊರಗೆ ನೋಡುತ್ತಾ ಕುಳಿತಿರುವ ಪುಟ್ಟ ಮಾಲ್ತಿ, ತನ್ನ ಮುದ್ದಾದ ಧ್ವನಿಯಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಿದ್ದಾಳೆ.

ಮಗಳು ಮಂತ್ರದ ಕೊನೆಯ ಸಾಲನ್ನು ಪೂರ್ಣಗೊಳಿಸುತ್ತಿದ್ದಂತೆಯೇ ಪ್ರಿಯಾಂಕಾ ಸೋ ಬ್ಯೂಟಿಫುಲ್​, ಎಂದು ಖುಷಿಯಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು "ವಿದೇಶದಲ್ಲಿದ್ದರೂ ಮಗಳಿಗೆ ಎಂಥ ಒಳ್ಳೆಯ ಸಂಸ್ಕಾರ ಕಲಿಸಿದ್ದೀರಿ" ಎಂದು ಪ್ರಿಯಾಂಕಾ ಅವರನ್ನು ಕೊಂಡಾಡುತ್ತಿದ್ದಾರೆ.

Also Read
ಸಲ್ಲು ಭಯಕ್ಕೆ ಐಶ್ವರ್ಯಾಗೆ ಸ್ಪೆಷಲ್ ಬಾಡಿಗಾರ್ಡ್: ಅವನ ಕಾರಣದಿಂದಲೇ ನಾನು ಕೆಲಸ ಬಿಟ್ಟೆ; 'ಐಶ್​' ಮಾಜಿ ಅಂಗರಕ್ಷಕ ಬಿಚ್ಚಿಟ್ಟ ಕರಾಳ ಸತ್ಯವೇನು? Ketan Karande
A moment showing actress Priyanka Chopra chanting the Gayatri Mantra with her daughter, Malti Marie, sitting on her lap.

ಎರಡೂ ಸಂಸ್ಕೃತಿಗಳ ನಡುವೆ ಬೆಳೆಯುತ್ತಿರುವ ಬಾಲಕಿ

ಮನೆಯಲ್ಲಿ ಪೂಜೆ-ಪುನಸ್ಕಾರ ಮಾಡುವುದರಿಂದ ಹಿಡಿದು ಬಣ್ಣಗಳ ಹಬ್ಬ ಹೋಳಿ ಆಚರಿಸುವವರೆಗೆ ಪ್ರಿಯಾಂಕಾ ತಮ್ಮ ಮಗಳಿಗೆ ಭಾರತೀಯ ಸಂಪ್ರದಾಯಗಳನ್ನು ಪರಿಚಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಗಳೊಂದಿಗೆ ಅಯೋಧ್ಯೆಯ ರಾಮ ಮಂದಿರ ಮತ್ತು ಮುಂಬೈನ ಸಿದ್ಧಿವಿನಾಯಕ ದೇವಾಲಯಕ್ಕೂ ಭೇಟಿ ನೀಡಿದ್ದರು. ಮತ್ತೊಂದೆಡೆ, ಪತಿ ನಿಕ್ ಜೋನಾಸ್ ಕುಟುಂಬದ ಸಂಪ್ರದಾಯದಂತೆ ಕ್ರಿಸ್‌ಮಸ್, ಹ್ಯಾಲೋವೀನ್, ಈಸ್ಟರ್ ಹಬ್ಬಗಳನ್ನೂ ಅಷ್ಟೇ ಸಂಭ್ರಮದಿಂದ ಆಚರಿಸುತ್ತಾ, ಮಗಳನ್ನು ಬಹುಸಂಸ್ಕೃತಿಯ ವಾತಾವರಣದಲ್ಲಿ ಬೆಳೆಸುತ್ತಿದ್ದಾರೆ, (ಏಜೆನ್ಸೀಸ್​).