ರಾಮಾಯಣ ಚಿತ್ರಕ್ಕೆ ದುಡಿದ ಕಲಾವಿದನಿಗೆ ಗೇಟ್ ಪಾಸ್! DNEG ವಿರುದ್ಧ ಆಕ್ರೋಶ | Ramayana movie

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಮಹಾಕಾವ್ಯ ರಾಮಾಯಣ ಸಿನಿಮಾ ತನ್ನ ಅದ್ದೂರಿ ದೃಶ್ಯ ವೈಭವದ ಮೂಲಕ ಭಾರೀ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ, ತೆರೆಯ ಹಿಂದೆ ಹಗಲಿರುಳು ಬೆವರು ಸುರಿಸಿದ ತಂತ್ರಜ್ಞನೊಬ್ಬನ ಆಕ್ರೋಶ ಇದೀಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಬರೋಬ್ಬರಿ 4.6 ವರ್ಷಗಳ ಕಾಲ ನಿಯತ್ತಾಗಿ ದುಡಿದರೂ ಒಂದೇ ಒಂದು ರೂಪಾಯಿ ವೇತನ ಹೆಚ್ಚಳ ನೀಡದೆ, ಕೊನೆಗೆ ಏಕಾಏಕಿ ಗೇಟ್ ಪಾಸ್ ನೀಡಲಾಗಿದೆ ಎಂದು VFX ಕಲಾವಿದ ರಾಹುಲ್ ಧನ್ವೆ ಗಂಭೀರ ಆರೋಪ ಮಾಡಿದ್ದಾರೆ.Ramayana movie
ರಾಮಾಯಣ ಚಿತ್ರಕ್ಕೆ ದುಡಿದ ಕಲಾವಿದನಿಗೆ ಗೇಟ್ ಪಾಸ್
ರಾಮಾಯಣ ಚಿತ್ರಕ್ಕೆ ದುಡಿದ ಕಲಾವಿದನಿಗೆ ಗೇಟ್ ಪಾಸ್WEB
Published on: 

ಮುಂಬೈ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಮಹಾಕಾವ್ಯ ರಾಮಾಯಣ ಸಿನಿಮಾ ತನ್ನ ಅದ್ದೂರಿ ದೃಶ್ಯ ವೈಭವದ ಮೂಲಕ ಭಾರೀ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ, ತೆರೆಯ ಹಿಂದೆ ಹಗಲಿರುಳು ಬೆವರು ಸುರಿಸಿದ ತಂತ್ರಜ್ಞನೊಬ್ಬನ ಆಕ್ರೋಶ ಇದೀಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಬರೋಬ್ಬರಿ 4.6 ವರ್ಷಗಳ ಕಾಲ ನಿಯತ್ತಾಗಿ ದುಡಿದರೂ ಒಂದೇ ಒಂದು ರೂಪಾಯಿ ವೇತನ ಹೆಚ್ಚಳ ನೀಡದೆ, ಕೊನೆಗೆ ಏಕಾಏಕಿ ಗೇಟ್ ಪಾಸ್ ನೀಡಲಾಗಿದೆ ಎಂದು VFX ಕಲಾವಿದ ರಾಹುಲ್ ಧನ್ವೆ ಗಂಭೀರ ಆರೋಪ ಮಾಡಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಮೆಗಾ ಬಜೆಟ್ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಚಿತ್ರದ ದೃಶ್ಯ ಪರಿಣಾಮಗಳ (VFX) ಜವಾಬ್ದಾರಿಯನ್ನು ಖ್ಯಾತ DNEG ಸಂಸ್ಥೆ ನಿರ್ವಹಿಸುತ್ತಿದೆ. ಆದರೆ, ಇದೇ ಪ್ರತಿಷ್ಠಿತ ಸಂಸ್ಥೆಯಲ್ಲಿ ಪರಿಸರ ವಿನ್ಯಾಸ ಕಲಾವಿದನಾಗಿ ಕಾರ್ಯನಿರ್ವಹಿಸಿದ್ದ ರಾಹುಲ್ ಧನ್ವೆ, ತಮಗಾದ ಕಹಿ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಸಿನಿಮಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

4.6 ವರ್ಷ ಕೆಲಸ, ಸಂಬಳದಲ್ಲಿ ಮಾತ್ರ ಏರಿಕೆಯಿಲ್ಲ

DNEG ಸಂಸ್ಥೆಯಲ್ಲಿ ಸುಮಾರು ನಾಲ್ಕೂವರೆ ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದ ರಾಹುಲ್, ತಮ್ಮ ವೃತ್ತಿಜೀವನದ ಕೊನೆಯ ಎರಡು ವರ್ಷಗಳನ್ನು ರಾಮಾಯಣ ಸಿನಿಮಾದ VFX ಕೆಲಸಕ್ಕೆ ಮೀಸಲಿಟ್ಟಿದ್ದಾಗಿ ತಿಳಿಸಿದ್ದಾರೆ. ಸಂಸ್ಥೆ ಕಷ್ಟದ ಸಮಯದಲ್ಲಿದ್ದಾಗಲೂ ಉದ್ಯೋಗಿಗಳು ಬೆಂಬಲವಾಗಿ ನಿಂತಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ತಮಗೆ ಯಾವುದೇ ರೀತಿಯ ಸಂಬಳ ಹೆಚ್ಚಳ ಸಿಗಲಿಲ್ಲ ಎಂಬುದು ಅವರ ಪ್ರಮುಖ ಆರೋಪ.

ಲಿಂಕ್ಡ್‌ಇನ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಅವರು, ಸಂಸ್ಥೆಯ ಹಿರಿಯ ಅಧಿಕಾರಿಗಳು ಕಷ್ಟದ ಸಮಯದಲ್ಲಿ ಕಂಪನಿಗೆ ಬೆಂಬಲ ನೀಡುವಂತೆ ಉದ್ಯೋಗಿಗಳನ್ನು ಪದೇಪದೆ ಕೇಳಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಉದ್ಯೋಗಿಗಳು ತಮ್ಮ ಕೆಲಸದ ಮೂಲಕ ಸಂಸ್ಥೆಗೆ ನೆರವಾದರೂ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

4.6 ವರ್ಷ ಕೆಲಸ, ಸಂಬಳದಲ್ಲಿ ಮಾತ್ರ ಏರಿಕೆಯಿಲ್ಲWEB

ಕೊನೆಗೆ ಸಿಕ್ಕಿದ್ದು ಲೇಆಫ್ ಎಂಬ ಆಘಾತ

ಸಂಸ್ಥೆಯ ಕಷ್ಟದ ಸಮಯದಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದರೂ ಕೊನೆಗೆ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ. ವಿಶೇಷ ಸವಲತ್ತುಗಳನ್ನು ನಿರೀಕ್ಷಿಸಿರಲಿಲ್ಲ. ಆದರೆ 4.6 ವರ್ಷಗಳ ವೃತ್ತಿಜೀವನವನ್ನು ಸಂಸ್ಥೆಗೆ ಮೀಸಲಿಟ್ಟ ನಂತರ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಊಹಿಸಿರಲಿಲ್ಲ ಎಂಬುದು ಅವರ ಅಳಲು. ತಮ್ಮ ಅನುಭವವನ್ನು ಅತ್ಯಂತ ನಿರಾಶಾದಾಯಕ ಎಂದು ಬಣ್ಣಿಸಿರುವ ಅವರು, ಸಂಸ್ಥೆಯಲ್ಲಿ ಕಳೆದ ಸಮಯವೇ ತಮ್ಮ ವೃತ್ತಿಜೀವನದ ದೊಡ್ಡ ವಿಷಾದಗಳಲ್ಲಿ ಒಂದಾಗಿದೆ ಎಂಬರ್ಥದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಮಾಯಣ ಚಿತ್ರದ VFX ಕೆಲಸದ ನಡುವೆ ವಿವಾದ

ಭಾರತೀಯ ಪೌರಾಣಿಕ ಕಥೆಯನ್ನು ಆಧರಿಸಿರುವ ರಾಮಾಯಣ ಸಿನಿಮಾ ಭಾರೀ ಬಜೆಟ್ ಮತ್ತು ಅತ್ಯಾಧುನಿಕ ದೃಶ್ಯ ಪರಿಣಾಮಗಳಿಂದಾಗಿ ಈಗಾಗಲೇ ಸುದ್ದಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಚಿತ್ರದ VFX ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕಲಾವಿದರೊಬ್ಬರು ಸಂಸ್ಥೆಯ ಉದ್ಯೋಗಿ ನಿರ್ವಹಣೆ ಮತ್ತು ವೇತನ ನೀತಿಯ ಬಗ್ಗೆ ಆರೋಪ ಮಾಡಿರುವುದು ಗಮನ ಸೆಳೆದಿದೆ. ಆದರೆ ಇವು ರಾಹುಲ್ ಧನ್ವೆ ಅವರ ವೈಯಕ್ತಿಕ ಆರೋಪಗಳಾಗಿದ್ದು, ಈ ಕುರಿತು DNEG ಸಂಸ್ಥೆಯ ಅಧಿಕೃತ ಪ್ರತಿಕ್ರಿಯೆ ಲಭ್ಯವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಮಹಾಕಾವ್ಯ ರಾಮಾಯಣ ಸಿನಿಮಾ ತನ್ನ ಅದ್ದೂರಿ ದೃಶ್ಯ ವೈಭವದ ಮೂಲಕ ಭಾರೀ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ, ತೆರೆಯ ಹಿಂದೆ ಹಗಲಿರುಳು ಬೆವರು ಸುರಿಸಿದ ತಂತ್ರಜ್ಞನೊಬ್ಬನ ಆಕ್ರೋಶ ಇದೀಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಬರೋಬ್ಬರಿ 4.6 ವರ್ಷಗಳ ಕಾಲ ನಿಯತ್ತಾಗಿ ದುಡಿದರೂ ಒಂದೇ ಒಂದು ರೂಪಾಯಿ ವೇತನ ಹೆಚ್ಚಳ ನೀಡದೆ, ಕೊನೆಗೆ ಏಕಾಏಕಿ ಗೇಟ್ ಪಾಸ್ ನೀಡಲಾಗಿದೆ ಎಂದು VFX ಕಲಾವಿದ ರಾಹುಲ್ ಧನ್ವೆ ಗಂಭೀರ ಆರೋಪ ಮಾಡಿದ್ದಾರೆ.

Also Read
ಹನುಮಂತನ ಪಾತ್ರಕ್ಕೆ ಸನ್ನಿ ಡಿಯೋಲ್ ಬೆಸ್ಟ್ ಚಾಯ್ಸ್ ಎಂದ ರಾಮಾಯಣ ನಿರ್ಮಾಪಕ ! ಕಾರಣ ಏನು ಗೊತ್ತಾ? Ramayana
ರಾಮಾಯಣ ಚಿತ್ರಕ್ಕೆ ದುಡಿದ ಕಲಾವಿದನಿಗೆ ಗೇಟ್ ಪಾಸ್

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಮೆಗಾ ಬಜೆಟ್ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಚಿತ್ರದ ದೃಶ್ಯ ಪರಿಣಾಮಗಳ (VFX) ಜವಾಬ್ದಾರಿಯನ್ನು ಖ್ಯಾತ DNEG ಸಂಸ್ಥೆ ನಿರ್ವಹಿಸುತ್ತಿದೆ. ಆದರೆ, ಇದೇ ಪ್ರತಿಷ್ಠಿತ ಸಂಸ್ಥೆಯಲ್ಲಿ ಪರಿಸರ ವಿನ್ಯಾಸ ಕಲಾವಿದನಾಗಿ ಕಾರ್ಯನಿರ್ವಹಿಸಿದ್ದ ರಾಹುಲ್ ಧನ್ವೆ, ತಮಗಾದ ಕಹಿ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಸಿನಿಮಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

4.6 ವರ್ಷ ಕೆಲಸ, ಸಂಬಳದಲ್ಲಿ ಮಾತ್ರ ಏರಿಕೆಯಿಲ್ಲ

DNEG ಸಂಸ್ಥೆಯಲ್ಲಿ ಸುಮಾರು ನಾಲ್ಕೂವರೆ ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದ ರಾಹುಲ್, ತಮ್ಮ ವೃತ್ತಿಜೀವನದ ಕೊನೆಯ ಎರಡು ವರ್ಷಗಳನ್ನು ರಾಮಾಯಣ ಸಿನಿಮಾದ VFX ಕೆಲಸಕ್ಕೆ ಮೀಸಲಿಟ್ಟಿದ್ದಾಗಿ ತಿಳಿಸಿದ್ದಾರೆ. ಸಂಸ್ಥೆ ಕಷ್ಟದ ಸಮಯದಲ್ಲಿದ್ದಾಗಲೂ ಉದ್ಯೋಗಿಗಳು ಬೆಂಬಲವಾಗಿ ನಿಂತಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ತಮಗೆ ಯಾವುದೇ ರೀತಿಯ ಸಂಬಳ ಹೆಚ್ಚಳ ಸಿಗಲಿಲ್ಲ ಎಂಬುದು ಅವರ ಪ್ರಮುಖ ಆರೋಪ.

ಲಿಂಕ್ಡ್‌ಇನ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಅವರು, ಸಂಸ್ಥೆಯ ಹಿರಿಯ ಅಧಿಕಾರಿಗಳು ಕಷ್ಟದ ಸಮಯದಲ್ಲಿ ಕಂಪನಿಗೆ ಬೆಂಬಲ ನೀಡುವಂತೆ ಉದ್ಯೋಗಿಗಳನ್ನು ಪದೇಪದೆ ಕೇಳಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಉದ್ಯೋಗಿಗಳು ತಮ್ಮ ಕೆಲಸದ ಮೂಲಕ ಸಂಸ್ಥೆಗೆ ನೆರವಾದರೂ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Also Read
ರಣಬೀರ್​, ಯಶ್​ ಅಲ್ಲವೇ ಅಲ್ಲ! ರಾಮಾಯಣ ಭಾಗ 2ರಲ್ಲಿ ಇವರ ಪಾತ್ರವೇ ಎಲ್ಲರ ಕಣ್ಮನ ಸೆಳೆಯೋದು | Ramayana Part 2