‘ಕಿಂಗ್’ನಲ್ಲಿ ಕರೀನಾ : ವಿಶೇಷ ಸಾಂಗ್‌ನಲ್ಲಿ ಶಾರುಖ್ ಜತೆ ಹೆಜ್ಜೆ ಹಾಕಲಿರುವ ಬಾಲಿವುಡ್ ನಟಿ KAREENA KAPOOR

ಮತ್ತೊಮ್ಮೆ ಕರೀನಾ ಕಪೂರ್ ಬಹುನಿರೀಕ್ಷಿತ ಚಿತ್ರವೊಂದರಲ್ಲಿ ಸ್ಪೆಷಲ್ ಡಾನ್ಸ್ ಮಾಡುತ್ತಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಕಿಂಗ್’ ಚಿತ್ರದ ಶೂಟಿಂಗ್ ಮುಕ್ತಾಯ ಹಂತಕ್ಕೆ ಬಂದಿದೆ.
kareena kapoor
ಕರೀನಾ ಕಪೂರ್ ಖಾನ್
Published on: 

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಟನೆ ಜತೆಗೆ ಹಲವು ಚಿತ್ರಗಳ ವಿಶೇಷ ಸಾಂಗ್‌ಗಳಲ್ಲಿ ಕಾಣಿಸಿಕೊಂಡು ಕುಣಿದು ಕುಪ್ಪಳಿಸಿದ್ದಾರೆ. ಹಿಂದಿಯ ‘ಕ್ಯಾ ಲವ್ ಸ್ಟೋರಿ ಹೈ’, (ಇಟ್ಸ್ ರಾಕಿಂಗ್), ‘ಬಿಲ್ಲು’ (ಮರ್ಜಾನಿ), ‘ದಬಾಂಗ್’ (ಫೆವಿಕಲ್ ಸೇ).. ಹೀಗೆ ಹಲವು ಚಿತ್ರಗಳ ವಿಶೇಷ ಸಾಂಗ್‌ನಲ್ಲಿ ಗಮನಸೆಳೆದಿದ್ದಾರೆ. ಇದೀಗ ಮತ್ತೊಮ್ಮೆ ಕರೀನಾ ಕಪೂರ್ ಬಹುನಿರೀಕ್ಷಿತ ಚಿತ್ರವೊಂದರಲ್ಲಿ ಸ್ಪೆಷಲ್ ಡಾನ್ಸ್ ಮಾಡುತ್ತಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಕಿಂಗ್’ ಚಿತ್ರದ ಶೂಟಿಂಗ್ ಮುಕ್ತಾಯ ಹಂತಕ್ಕೆ ಬಂದಿದೆ. ಡಿ.25ಕ್ಕೆ ‘ಕಿಂಗ್’ ತೆರೆ ಮೇಲೆ ಬರಲಿದೆ. ಚಿತ್ರಕ್ಕೆ ವಿಶೇಷ ಮೆರುಗು ತರುವುದಕ್ಕಾಗಿ ಸ್ಪೆಷಲ್ ಸಾಂಗ್ ಇಡಲು ಚಿತ್ರತಂಡ ನಿರ್ಧರಿಸಿದ್ದು, ಕರೀನಾ ಕಪೂರ್ ಖಾನ್ ನರ್ತಿಸುವುದು ಖಚಿತವಾಗಿದೆ. ಆ ಮೂಲಕ ‘ರಾ. ಒನ್’ ತೆರೆಕಂಡು 15 ವರ್ಷಗಳ ಬಳಿಕ ಶಾರುಖ್ ಮತ್ತು ಕರೀನಾ ಮತ್ತೆ ಒಂದಾಗುತ್ತಿದ್ದಾರೆ. ಈ ಇಬ್ಬರು ‘ಡ್ಯಾಡಿ ಕೂಲ್’ ಎಂಬ ಶೀರ್ಷಿಕೆಯ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಈ ಸಾಂಗ್‌ನ ಶೂಟಿಂಗ್ ನಡೆಯಲಿದ್ದು, ಅದಕ್ಕಾಗಿ 5 ದಿನಗಳ ಕಾಲ ಡೇಟ್ಸ್ ನೀಡಿದ್ದಾರೆ. ಅದ್ದೂರಿಯಾಗಿ ಮೂಡಿಬರಲಿರುವ ಈ ಹಾಡಿನಲ್ಲಿ ಭಾರತದ ಜತೆಗೆ ಅಂತಾರಾಷ್ಟ್ರೀಯ ಕಲಾವಿದರು ಇರಲಿದ್ದಾರೆ. ಸಚಿನ್-ಜಿಗರ್ ‘ಡ್ಯಾಡಿ ಕೂಲ್’ ಸಾಂಗ್‌ಗೆ ಸಂಗೀತ ಸಂಯೋಜಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net