PHOTOS| ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; ಬಾಲಿವುಡ್​ ನಟ ನಟಿಯರ ಸ್ಫೂರ್ತಿದಾಯಕ ಮಾತುಗಳು, ಹಂಚಿಕೊಂಡ ಫೋಟೋಗಳ ಝಲಕ್​....

BOLLYWOOD ACTOR
Published on

ಮುಂಬೈ: ಮಹಿಳಾ ದಿನಾಚರಣೆ ಅಂಗವಾಗಿ ಬಾಲಿವುಡ್​ ನಟ ನಟಿಯರು, ನಿರ್ದೇಶಕ, ನಿರ್ಮಾಪಕರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.

ಮಹಿಳೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಮಾನತೆಯ ಸ್ಫೂರ್ತಿ ಮಾತುಗಳನ್ನು ಹೇಳುತ್ತಿದ್ದಾರೆ. ಅದರಲ್ಲಿ ಮಾಧುರಿ ದೀಕ್ಷಿತ್ ನೆನೆ​, ಶಿಲ್ಪಾ ಶೆಟ್ಟಿ ಕುಂದ್ರಾ, ಬಿಪಾಶ ಬಸು, ಕಾಜೋಲ್​- ಅಜಯ್​ ದೇವಗನ್​ ದಂಪತಿ ಮಾದಲಾದವರಿದ್ದಾರೆ.

ಮಾಧುರಿ ದೀಕ್ಷಿತ್​ ಮತ್ತು ಶಿಲ್ಪಾ ಶೆಟ್ಟಿ ಟ್ವೀಟರ್​ ಮಾಡಿ ವಿಡಿಯೋ ಮತ್ತು ಫೋಟೊ ಹಂಚಿಕೊಂಡರೆ, ಬಿಪಾಶ, ಕಾಜೋಲ್​-ಅಜಯ್​ ದೇವಗನ್​ ಇನ್​ಸ್ಟಾಗ್ರಾಮನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬನ್ನಿ ಅವರ ಅಭಿಪ್ರಾಯಗಳನ್ನು ನೋಡೋಣ.

ಅವಳು ಬಲಶಾಲಿ ... ಅವಳು ಉಗ್ರ. ಅವಳು ಸುಂದರ. ಅವಳು ತನ್ನ ಕುಟುಂಬಕ್ಕೆ ತಾಯಿ, ಸಹೋದರಿ ಮತ್ತು ಬೆಂಬಲ ವ್ಯವಸ್ಥೆ. ಪ್ರಪಂಚದಾದ್ಯಂತದ ಎಲ್ಲ ಅದ್ಭುತ ಮಹಿಳೆಯರಿಗೆ ಶುಭಾಶಯಗಳು ಎಂದು ಮಾಧುರಿ ದೀಕ್ಷಿತ್​ ಬರೆದುಕೊಂಡಿದ್ದಾರೆ.

'=' (EQUAL) ಚಿಹ್ನೆಯಲ್ಲಿನ ಎರಡು ಸಮಾನಾಂತರ ರೇಖೆಗಳಂತೆ, ನಾವು ಮಾಡುವ ಎಲ್ಲದರಲ್ಲೂ ಸಮಾನವಾಗಿ ಪರಿಗಣಿಸಬೇಕು. ಜೀವನದಲ್ಲಿ ಅವಕಾಶವನ್ನು ನೀಡಬೇಕು ಮತ್ತು ಗರ್ಭದಲ್ಲಿ ಕೊಲ್ಲಬಾರದು. ನಮ್ಮ ಸಹೋದರರಂತೆ ಶಿಕ್ಷಣವನ್ನು ಪಡೆಯಲು, ನಮ್ಮ ಮನೆ, ಸಮಾಜ ಮತ್ತು ದೇಶಗಳಲ್ಲಿ ಸುರಕ್ಷಿತವಾಗಿರಬೇಕು ಎಂಬುದು ನಟಿ ಶಿಲ್ಪಾ ಶೆಟ್ಟಿ ಅಭಿಪ್ರಾಯ.

ಪ್ರಬಲ ಮಹಿಳೆಯರು ಸರಳವಾಗಿ ಜನಿಸುವುದಿಲ್ಲ. ನಾವು ಜೀವನದ ಸವಾಲಿನೊಂದಿಗೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಳೆಯುತ್ತೇವೆ. ನಾವು ನಮ್ಮ ತಲೆ ಎತ್ತಿ ಬಾಳುತ್ತೇವೆ. ಮತ್ತು ಆ ಶಕ್ತಿಯನ್ನು ಯಾರೂ ನಿರಾಕರಿಸಲಾರರು ಎಂದಿರುವ ನಟಿ ಬಿಪಾಶ ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಜೀವನದಲ್ಲಿ ಮಹಿಳೆಯರು ಎಂದರೆ ನನ್ನ ತಾಯಿ, ಸಹೋದರಿಯರು, ಹೆಂಡತಿ, ಶಿಕ್ಷಕರು ಮತ್ತು ಮಗಳು ಕಾಗುಣಿತ ಶಕ್ತಿ. ಅವರಿಗೆ ನಮಸ್ಕಾರ. ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನಟ ಅಜಯ್​ ದೇವಗನ್​ ಪತ್ನಿ ಕಾಜೋಲ್​ ಮತ್ತು ಮಗಳು ನ್ಯಾಸ ಅವರ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net