

ಸಂಗೀತಾ ಭಟ್ ಆರೋಗ್ಯದಲ್ಲಿ ಏರುಪೇರು
ಟಾಸ್ಕ್ ವೇಳೆ ಉಸಿರಾಟದ ಸಮಸ್ಯೆ ಎದುರಿಸಿದ ಸಂಗೀತಾ ಭಟನ್
ಇನ್ಹೇಲರ್ಗಾಗಿ ತಡಕಾಡಿದ್ರು ಸಿಗದ ಕಾರಣ ಕನ್ಫೆಷನ್ ರೂಂಗೆ ಹೊತ್ತೊಯ್ದ ತಾಂಡವ್ ರಾಮ್
ಬಿಗ್ಬಾಸ್ ಮನೆಯಲ್ಲಿ ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್ ನಡೆಯುವ ಸಂದರ್ಭದಲ್ಲಿ ಸಂಗೀತಾ ಭಟ್ ಅವರ ಆರೋಗ್ಯದಲ್ಲಿ ಏರುಪೇರುಂಟಾಗಿ ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ಬಿಗ್ಬಾಸ್ ವೈದ್ಯಕೀಯ ತಂಡ ನೋಡಿಕೊಳ್ಳುತ್ತಿದೆ ಎನ್ನಲಾಗಿದೆ.
ಸಂಗೀತಾ ಭಟ್ ಅವರು ಅಸ್ವಸ್ಥಗೊಂಡ ಬಗ್ಗೆ ಬಿಗ್ಬಾಸ್ ತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ, 24 ಗಂಟೆ ಬಿಗ್ಬಾಸ್ ವೀಕ್ಷಣೆಗೆ ಲಭ್ಯವಿರುವ ಜಿಯೋ ಹಾಟ್ಸ್ಟಾರ್ನಲ್ಲಿ ನೋಡಿದ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಸಂಗೀತಾ ಅವರ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿದ್ದಾರೆ.
ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸಂಗೀತಾ ಭಟ್ ಅವರು ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ಅವರ ಸುತ್ತಲೂ ಸ್ಪರ್ಧಿಗಳು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಸೌಂದರ್ಯ ಮತ್ತು ಕಾವ್ಯಾ ಅವರಿಗೆ ಇನ್ಹೇಲರ್ ನೀಡಲು ತಡಕಾಡಿದರು. ಇನ್ಹೇಲರ್ ಸಿಗದ ಕಾರಣ ತಾಂಡವ್ ರಾಮ್, ಸಂಗೀತಾರನ್ನು ಕನ್ಫೆಷನ್ ಕೋಣೆಗೆ ಕರೆದೊಯ್ದಿರು. ಇತರ ಸ್ಪರ್ಧಿಗಳು ಆತಂಕಕ್ಕೆ ಒಳಗಾಗಿರುವುದು ವಿಡಿಯೋದಲ್ಲಿ ಇದೆ.
ಇತ್ತೀಚೆಗೆ ಓಂ ಪ್ರಕಾಶ್ ರಾವ್ ಅವರು ಆರೋಗ್ಯದ ಕಾರಣದಿಂದಾಗಿ ಬಿಗ್ಬಾಸ್ ಪಯಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಸದ್ಯ ಅವರ ಹಾದಿಯಲ್ಲೇ ಸಂಗೀತಾರ ಪಯಣ ಇರಲಿದ್ಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಸಂಗೀತಾ ಭಟ್ ಅವರ ಆರೋಗ್ಯದಲ್ಲಿ ಸುಧಾರಿಸಿದ ನಂತರ ವಾಪಸ್ ಆಗುತ್ತಾರಾ? ಅಥವಾ ಅರ್ಧಕ್ಕೆ ಬಿಗ್ಬಾಸ್ ಮನೆಯ ಆಟವನ್ನು ನಿಲ್ಲಿಸಿ ಮನೆಯ ಕಡೆ ಹೆಜ್ಜೆ ಹಾಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ರಾಕ್ಷಸರ ವೇಷಧಾರಿಗಳು ಹಾಗೂ ಗಂಧರ್ವರ ವೇಷಧಾರಿಗಳ ನಡುವಿನ ಈ ಕದನವು ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ರಾಕ್ಷಸರ ತಂಡದಲ್ಲಿ ಮಂಜು, ಗಗನ್, ಸಂಗೀತ, ಜಗ್ಗಿ, ಪ್ರಶಾಂತ್ , ಮತ್ತು ಸೌಂದರ್ಯ ಇದ್ದರೆ, ಗಂಧರ್ವರ ತಂಡದಲ್ಲಿ ಧನುಷ್ , ತಾಂಡವ್, ಯಶಸ್, ಕಾವ್ಯ, ಕಿರಣ್, ಸೋನಿಕಾ ಹಾಗೂ ಗಾನವಿ ಇದ್ದಾರೆ.
ಕಳೆದವಾರ ಎಲಿಮಿನೇಷನ್ ತೂಗುಗತ್ತಿಯಲ್ಲಿ ಸಂಗೀತಾ ಭಟ್ ಇದ್ದರು. ಕಮಾಂಡೋಗಳು ಮನೆಗೆ ಬಂದು ಬಾಟಂ 3ರಲ್ಲಿ ಇದ್ದ ಸ್ಪರ್ಧಿಗಳನ್ನು ಎಳೆದೊಯ್ದಿದ್ದರು. ಈ ವೇಳೆ ಸೇಫ್ ಆಗಿ ಸಂಗೀತಾ ಭಟ್ ವಾಪಸ್ ಆಗಿದ್ದರು. 'ನನ್ನನ್ನು ಹಾಗೆಯೇ ಮನೆಗೆ ಕಳುಹಿಸಬೇಕಿತ್ತು. ಇಲ್ಲಿ ನೋವು ಮಾಡಿಕೊಳ್ಳಲಾಗುತ್ತಿಲ್ಲ' ಎಂದಿದ್ದರು.
ಕಳೆದ ವಾರವೇ ಅವರ ಆರೋಗ್ಯದಲ್ಲಿ ಏರುಪೇರುಂಟಾಗಿತ್ತು. ಹೀಗಿದ್ದರೂ ಅವರನ್ನು ಬಿಗ್ಬಾಸ್ ಮನೆಯಲ್ಲಿ ಉಳಿಸಿಕೊಳ್ಳಬಾರದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.