

ತಾಂಡವ್ ರಾಮ್ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ.
ವಾರದ ಕತೆ ಕಿಚ್ಚನ ಎಪಿಸೋಡ್ ಪ್ರೋಮೋದಲ್ಲಿ ಹಿಂಟ್ ಕೊಟ್ಟ ಸುದೀಪ್.
ತಾಂಡವ್ ವಾಪಸ್ ಬರ್ತಾರಾ ಅಥವಾ ಇಲ್ಲವಾ ಎನ್ನುವುದೇ ಗೊಂದಲ.
Bigg Boss Kannada Season 13: ಜನರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ತಾಂಡವ್ ರಾಮ್ ಬಿಗ್ಬಾಸ್ ಕನ್ನಡ ಸೀಸನ್ 13ರಿಂದ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಎಲಿಮಿನೇಟ್ ಆಗಿದ್ದರು. ಸದ್ಯ ಎಲ್ಲರಲ್ಲಿ ಮನೆ ಮಾಡಿರುವ ಪ್ರಶ್ನೆ, ಗೊಂದಲ ಎಂದರೆ ತಾಂಡವ್ ರಾಮ್ ವಾಪಸ್ ದೊಡ್ಮನೆಗೆ ಬರ್ತಾರಾ ಎನ್ನುವುದು. ಇದಕ್ಕೆ ಪೂರಕವಾಗಿ ಇಂದು ರಿಲೀಸ್ ಆಗಿರುವ ಪ್ರೊಮೋ ಮತ್ತಷ್ಟು ಹಿಂಟ್ಗಳ ಹುಳವನ್ನು ವೀಕ್ಷಕರ ತಲೆಯಲ್ಲಿ ಬಿಟ್ಟಂತಾಗಿದೆ.
ಹೌದು, 'ತಾಂಡವ್ ಅವರ ವಾಪಸಾತಿ ಕುರಿತು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಆ ಬಗ್ಗೆ ಕಿಚ್ಚ ಸುದೀಪ್ ಕೊಟ್ಟ ಸುಳಿವು ಹೀಗಿದೆ, ಒಂದು ಮನೆಗೆ ಟೈಂ ಪೀಸ್ ಇದ್ದಂತೆ. ಅದು ಮನೆಯಲ್ಲಿರುವ ತನಕ ಅದರ ಉಪಸ್ಥಿತಿ ಸಹ ಎನಿಸುತ್ತದೆ. ಆದರೆ ಅದು ನಿಂತು ಹೋದರೆ ಎಲ್ಲರ ಗಮನ ಅದರತ್ತ ತಿರುಗುತ್ತದೆ' ಎಂದು ತಾಂಡವ್ ರಾಮ್ ಅವರ ನಿರ್ಗಮನವು ಎಷ್ಟರ ಮಟ್ಟಕ್ಕೆ ಸದ್ದಾಗಿತ್ತು, ಸ್ಪರ್ಧಿಗಳಲ್ಲಿ ಉಂಟಾದ ಬೇಸರ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ,.
ಮುಂದುವರೆದು ಮಾತನಾಡಿದ ಅವರು, 'ನಿಂತು ಹೋಗಿರುವ ವಾಚ್ಗೆ ಮತ್ತೆ ಜೀವ ಬರುತ್ತಾ ಅಥವಾ ಗೋಡೆಯಿಂದ ಶಾಶ್ವತವಾಗಿ ತೆಗೆದು ಹಾಕುವ ಸಮಯ ಬಂದಿದೆಯಾ' ಎನ್ನುವ ಮಾತುಗಳನ್ನು ಸುದೀಪ್ ಆಡಿದ್ದಾರೆ. ಕಾವ್ಯಾತ್ಮಕವಾಗಿ ಕಿಚ್ಚ ಸುದೀಪ್ ಕೊಟ್ಟ ಸುಳಿವು ಮತ್ತಷ್ಟು ಗೊಂದಲವನ್ನು ವೀಕ್ಷಕರಲ್ಲಿ ಹುಟ್ಟಿಸಿದೆ. ಕಿಚ್ಚ ಸುದೀಪ್ ಅವರು ನೀಡಿರುವ ಸುಳಿವುಗಳ ಪ್ರಕಾರ ತಾಂಡವ್ ಮತ್ತೆ ವಾಪಸ್ ಬರ್ತಾರಾ ಅಥವಾ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.
ತಾಂಡವ್ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮೂಲಕ ವಾಪಸ್ ಆಗ್ತಾರ ಎನ್ನುವ ಅನುಮಾನ ಮೂಡಿದೆ. ಸುದೀಪ್ ಅವರು ಕೊಟ್ಟಿರುವ ಸುಳಿವಿನ ಪ್ರಕಾರ ತಾಂಡವ್ ವಾಪಸ್ ಬರುತ್ತಾರಾ? ಅಥವಾ ಹೊರಗುಳಿಯುತ್ತಾರಾ ಎನ್ನುವುದನ್ನು ವಾರದ ಪೂರ್ಣ ಎಪಿಸೋಡ್ ಅನ್ನು ಕಾದು ನೋಡಬೇಕಾಗಿದೆ
ತಾಂಡವ್ ರಾಮ್ ನಿರ್ಗಮನವು ಹಲವರಲ್ಲಿ ಭಾರಿ ಬೇಸರವನ್ನುಟ್ಟು ಹಾಕಿತ್ತು. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿಗಳು, ಕಿರುತರೆ ನಟ-ನಟಿಯರು ಬಿಗ್ಬಾಸ್ನ ನಿರ್ಧಾರ ಫೇಕ್ ಇರಬಹುದು. ತಾಂಡವ್ ಮತ್ತೆ ಬರ್ತಾರೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ವಾರಾಂತ್ಯದಲ್ಲಿ ಕೊಡುವ ಉತ್ತಮ ಹಾಗೂ ಕಳಪೆ ಮೆಡಲ್ ಅನ್ನು ಮನೆ ಮಂದಿ ಇಬ್ಬರಿಗೆ ನೀಡಿದರು. ಕಿರಿಕಿರಿ, ಬಿಗ್ಬಾಸ್ ನಿಯಮ ಮುರಿದು ನಿದ್ರೆ ಮಾಡಿದ ಕಿರಣ್ ಶಾಸ್ತ್ರಿಗೆ ಕಳಪೆ ಕೊಟ್ಟರು. ಇನ್ನೂ ಗಗನ್ಗೆ ಉತ್ತಮ ಕೊಟ್ಟರು. ಈ ವೇಳೆ ಗಗನ್ ಭಾವುಕರಾಗಿ ತಾಂಡವ್ ಬರೆದಿಟ್ಟು ಹೋದ ಮೆಮೋರಿ ಗೋಡೆ ಬಳಿ ನಿಂತು ಮಚ್ಚಾ ಇದು ನಿನಗೆ ಎಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುವಂತೆ ಮಾಡಿತ್ತು, (ಏಜೆನ್ಸೀಸ್).