'ಕೆಟ್ಟ ಯೋಚನೆಯ ಕಳ್ಳ ಕಿರಣ್'​; ಶಾಸ್ತ್ರಿಗೆ ಕಳಪೆ ಪಟ್ಟ ಕೊಟ್ಟು, ಜೈಲಿಗೆ ಕಳುಹಿಸಿದ ಬಿಗ್​ಬಾಸ್​​ ಮನೆ ಮಂದಿ..BBK 13

'ಕೆಟ್ಟ ಯೋಚನೆಯ ಕಳ್ಳ ಕಿರಣ್'​; ಶಾಸ್ತ್ರಿಗೆ ಕಳಪೆ  ಪಟ್ಟ ಕೊಟ್ಟು, ಜೈಲಿಗೆ ಕಳುಹಿಸಿದ ಬಿಗ್​ಬಾಸ್​​ ಮನೆ ಮಂದಿ..BBK 13
Published on: 
  • ಕಿರಣ್​ ಶಾಸ್ತ್ರಿಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ ಬಿಗ್​ಬಾಸ್ ಮನೆ ಮಂದಿ

  • ಕೆಟ್ಟ ಯೋಚನೆಯ ಕಳ್ಳ ಕಿರಣ್​ ಎಂದು ಮಂಜ ವಾಗ್ದಾಳಿ

  • ಬೊಗಳೋರು ಬೊಗಳ್ರಿ, ನಾವು ಬೆಳಿತೀವಿ ಎನ್ನುತ್ತ ಜೈಲಿನೊಳಕ್ಕೆ ತೆರಳಿ ಕಿರಣ್​ ಶಾಸ್ತ್ರಿ

BBK- 13: ಕಳೆದ ವಾರ ನಡೆದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಕಿರಣ್​ ಶಾಸ್ತ್ರಿಗೆ ಸುದೀಪ್​ ಅವರು ಭಾರಿ ಕ್ಲಾಸ್​ ತೆಗೆದುಕೊಂಡಿದ್ದರು. ವಿನಾಕರಣ ಸ್ಪರ್ಧಿಗಳ ಮೇಲೆ ನಿಮ್ಮ ತಲೆಯಲ್ಲಿ ಬುದ್ಧಿ ಇಲ್ಲ, ಲದ್ದಿ ಇದೆ. ಐವತ್ತು ಪೈಸೆಗೆ ಪ್ರಯೋಜನವಿಲ್ಲ. ಬಳೆ ತೊಟ್ಕೊಳ್ಳಿ ಎಂದು ಮಾಡಿದ್ದ ಆರೋಪಗಳನ್ನು ವಿಟಿ ಸಮೇತ ಪ್ರಸಾರ ಮಾಡಿ ಒಂದೊಂದಕ್ಕು ವಿಶ್ಲೇಷಣೆ ಕೊಟ್ಟು ಬುದ್ಧಿವಾದ ಹೇಳಿದ್ದರು.

ಎಪಿಸೋಡ್​ ಕೊನೆಯಲ್ಲಿ ಮಾತನಾಡಿದ್ದ ಶಾಸ್ತ್ರಿ, 'ನನ್ನ ಬುದ್ಧಿಗೆ ಮಂಕು ಬಡೆದಿತ್ತು. ತಪ್ಪು ತಿದ್ದಿಕೊಳ್ಳುತ್ತೇನೆ. ನಾನು ಎನ್ನುವ ಗರ್ವ ನನ್ನ ತಲೆಯಲ್ಲಿ ತುಂಬಿತ್ತು' ಎಂದು ಹೇಳಿದ್ದರು. ಈ ವಾರ ಬದಲಾದಂತೆ ಪೋಸ್ ಕೊಟ್ಟಿದ್ದರು.

ಬದಲಾದಂತೆ ನಟಿಸಿದ್ರಾ?

ಆದರೆ, ವಾರದ ಕೊನೇ ದಿನ ಕೊಡುವ ಕಳಪೆ ಮತ್ತು ಉತ್ತಮ ಟಾಸ್ಕ್​ನಲ್ಲಿ ಮನೆಯ ಅರ್ಧಕ್ಕರ್ಧ ಮಂದಿ ಕಿರಣ್​ ಶಾಸ್ತ್ರಿ ಕಳಪೆ ಕೊಟ್ಟಿದ್ದಾರೆ. ಆ ಮೂಲಕ ಕಿರಣ್​ ಶಾಸ್ತ್ರಿ ಬದಲಾಗಿಲ್ಲ. ಬದಲಾದಂತೆ ನಟಿಸಿದ್ದಾರೆ ಎನ್ನುವ ಸತ್ಯವನ್ನು ಇತರ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ.

ಪ್ರೊಮೋದಲ್ಲಿ ಏನಿದೆ?

ಈ ವಾರದ ಕಳಪೆ ಯಾರು ಎನ್ನುವ ವಿಚಾರ ಬಂದಾಗ ಮನೆ ಮಂದಿಯೆಲ್ಲರೂ ಕಿರಣ್​ ಶಾಸ್ತ್ರಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಲಿಖಿತ್​, ಅವಿನಾಶ್​, ಮಂಜ, ಸೌಂದರ್ಯ, ಧನುಷ್, ಯಶಸ್​​ ಸೇರಿದಂತೆ ಹಲವರು ಶಾಸ್ತ್ರಿ ವಿರುದ್ಧ ಬೇಸರ ಹೊರ ಹಾಕಿದ್ದಾರ. ಇನ್ನೂ ಮಹಾನ್​ ಕವಿ ಮಂಜು ಅಂತೂ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಾಮುಂಡಿ ತಾಯಿಯನ್ನೂ ಸಹ ತನ್ನ ಸ್ವಾರ್ಥಕೆ ಬಳಸಿಕೊಂಡ ಕೆಟ್ಟ ಯೋಚನೆಯುಳ್ಳ ಕಳ್ಳ ಕಿರಣ್, ​ ಶಾಸ್ತ್ರಿ ಎಂದು ಪಾಯಿಂಟ್​ ಔಟ್ ಮಾಡಿದ್ದಾರೆ. ಕಿರಣ್​ ಅವರು ಜೈಲು ವಾಸದ ಬಟ್ಟೆ ತೊಟ್ಟು ಬೊಗಳೋರು ಬೊಗಳಿ ಬೆಳೆಯೋರು ಬೆಳಿತೀವಿ ಎಂದು ಜೈಲಿನತ್ತ ತೆರಳಿರುವುದು ವಿಡಿಯೋದಲ್ಲಿ ಇದೆ.

ಹೇಗಿತ್ತು ಎಮರ್ಜೆನ್ಸಿ ಎಕ್ಸಿಟ್ ಟ್ವಿಸ್?

ಸದ್ಯ ಇನ್​ಸ್ಟಾದಲ್ಲಿ ಬಿಡುಗಡೆಯಾಗಿರುವ ಪೋಸ್ಟರ್​ನಲ್ಲಿ ಹೇಗಿತ್ತು ಎಮರ್ಜೆನ್ಸಿ ಎಕ್ಸಿಟ್ ಟ್ವಿಸ್ಟ್ ಎಂದು ತಾಂಡವ್​ ರಾಮ್​ ಹೊರಟಾಗ ಮನೆ ಮಂದಿ ಕೊಟ್ಟ ರಿಯಾಕ್ಷನ್​ಗಳ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಆ ಮೂಲಕ ವೀಕ್ಷಕರು ಮತ್ತು ನೆಟ್ಟಿಗರು ತಾಂಡವ್​ ಮರಳಿ ಬರುತ್ತಾರೆ. ಇದು ಖಂಡಿತ ಎಂದು ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ. ಆದರೆ, ನಿಜವಾಗಿಯೋ ತಾಂಡವ್​ ದೊಡ್ಮನೆಗೆ ಮರುಳುತ್ತಾರಾ ಎನ್ನುವುದನ್ನು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿಯೇ ನೋಡಿ ತಿಳಿಯಬೇಕಾಗಿದೆ.

ತಾಂಡವ್​ಗೆ ಹಲವರ ಬೆಂಬಲ

ಎಮರ್ಜೆನ್ಸಿ ಎಕ್ಸಿಟ್ ಮೂಲಕ ತಾಂಡವ್​ ಎಲಿಮಿನೇಟ್ ಆಗುತ್ತಲೇ ಹಲವರು ಬಿಗ್​ಬಾಸ್ ವಿರುದ್ಧ ಕಿಡಿಕಾರಿದ್ದಾರೆ. ಇದು ಸರಿಯಾದ ಆಯ್ಕೆಯಲ್ಲ. ಇನ್ಮುಂದೆ ಟಿಆರ್​ಪಿನೆ ಇರೋದಿಲ್ಲ. ತಾಂಡವ್​ ಒಳ್ಳೆ ವ್ಯಕ್ತಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಹೊರಗಿರುವ ಸೀರಿಯಲ್​ ನಟ, ನಟಿ ಹಾಗೂ ಬಿಗ್​ಬಾಸ್​​ ಮಾಜಿ ಸ್ಪರ್ಧಿಗಳು ತಾಂಡವ್​ ಪರ ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ. ಬಿಗ್​ಬಾಸ್​ನ ಈ ನಿರ್ಧಾರ ಸುಳ್ಳಾಗಿರಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net