

ಮಂಜ ನಡೆದುಕೊಂಡ ರೀತಿ ಮತ್ತು ಬಳಸಿದ ಭಾಷೆಯಿಂದ ಅಸಮಾಧಾನ.
ಮಂಜನ ಅತಿರೇಕದ ನಡವಳಿಕೆ, ಬಿಗ್ಬಾಸ್ ಮನೆಯಿಂದ ಹೊರಬಂದ ಮಂಜ.
ಒಳ್ಳೆಯವರಿಗೆ ಸಿಕ್ಕ ನ್ಯಾಯ, ತ್ಯಾಂಕ್ಯು ಬಿಗ್ಬಾಸ್ ಎಂದು ಸ್ವೀಟ್ ತಿಂದ ಯಶಸ್.
Bigg Boss Kannada: ಬಿಗ್ಬಾಸ್ ನಿಯಮಗಳನ್ನು ಮೀರಿ ಸ್ಪರ್ಧಿಗಳು ಮನೆಯಲ್ಲಿ ಅತಿರೇಕದಿಂದ ವರ್ತಿಸುತ್ತಿದ್ದಾರೆ. ಅದರಲ್ಲೂ ಮಹಾನ್ ಕವಿ ಮಂಜು ಮಾತುಗಳಂತೂ ವೀಕ್ಷಕರಿಗೆ ಇರಿಸು ಮುರಿಸುಂಟಾಗುವಂತೆ ಮಾಡುತ್ತಿದೆ. ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ನಲ್ಲಿ ಯಶಸ್, ಕಿರಣ್ ಶಾಸ್ತ್ರಿ ವಿರುದ್ಧ ಮಾತನಾಡಿದ ಶಬ್ಧಗಳು, ಶಾಸ್ತ್ರಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಿರುವುದು ಎಲ್ಲವನ್ನು ಪರಿಗಣಿಸಿ ಸದ್ಯ ಮಹಾನ್ ಕವಿ ಮಂಜುನನ್ನು ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ.
ಮಂಜುನಾಥ್ ಈ ಮನೆಗೆ ಅದರದ್ದೇ ಆದ ನಿಯಮವಿದೆ. ಹಲವು ಬಾರಿ ಅಸಭ್ಯವಾಗಿ ಮಾತನಾಡಿ, ಇತರ ಸದಸ್ಯರ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಮಾತನಾಡಿ, ನೋಯಿಸಿದ್ದೀರಿ. ಹಲವು ಬಾರಿ ನಿಮಗೆ ಎಚ್ಚರಿಕೆ ಕೊಡಲಾಗಿದೆ. ಮನೆಯ ಮೂಲ ನಿಯಮ ಉಲ್ಲಂಘಿಸಿದ ಕಾರಣ ನಿಮ್ಮನ್ನು ಬಿಗ್ಬಾಸ್ ಮನೆಯಿಂದ ಹೊರಗಿಡಲಾಗುತ್ತಿದೆ. ಹೀಗೆಂದು ಬಿಗ್ಬಾಸ್ ಹೇಳುತ್ತಲೇ ಸ್ಪರ್ಧಿಗಳು ಸಂಭ್ರಮಿಸಿದ್ದಾರೆ. ಪ್ರಶಾಂತ್ ಗೌರ, ಯಶಸ್ ಚಪ್ಪಾಳೆ ತಟ್ಟಿದ್ದಾರೆ. 'ಜಸ್ಟೀಸ್ ವಿನ್, ಒಳ್ಳೆತನಕ್ಕೆ ಗೆಲುವಾಗಿದೆ ತ್ಯಾಂಕ್ಯು ಬಿಗ್ಬಾಸ್, ಇದೇ ಖುಷಿಲಿ ಸ್ವೀಟ್ ತಿನ್ನಣ' ಎಂದಿದ್ದಾರೆ ಯಶಸ್
'ಸ್ತ್ರೀ ವ್ಯಾಮೋಹವುಳ್ಳ ನಾಯಿ ನೀನು, ಕಾಮ ಪಿಶಾಚಿ, ನಿನ್ನ ಗಂಡಸ್ತನಕ್ಕೆ, ಎಂಜಿಲು ಜೊತೆ ಸಿಕ್ಕಾಪಟ್ಟೆ ಉಗಿದಿದ್ದೀರಾ.. ಅದನ್ನ ಟೆಲಿಕಾಸ್ಟ್ ಮಾಡಿಲ್ಲ. ನೀವು ಚೆನ್ನಾಗಿ ಆಡ್ತಿದ್ದೀರಾ ಅದಕ್ಕೆ ಜಗಳ ನಿಲ್ಲಿಸಿ ಆಟವಾಡಲು ನಾನು ನಿಮ್ಮನ್ನು ನೇಮಕ ಮಾಡಿದ್ದೆ. ಆದರೆ ನೀವು ಮಾಡಿದ್ದು ಏನು' ಎಂದು ಮಂಜನಿಗೆ ಸುದೀಪ್ ನಿನ್ನೆ ಕ್ಲಾಸ್ ತಗೊಂಡ್ರು.
ಜೊತೆಗೆ ಬಿಗ್ಬಾಸ್ ಕನ್ಫೆಷನ್ ರೂಮ್ಗೆ ಮಂಜುನನ್ನು ಕರೆದು ಮಾತನಾಡಿಸಿದರು. ಈ ವೇಳೆ ಮಂಜ ಅವರ ತಾಯಿ ಗುಣಮ್ಮ ಮಾತನಾಡಿದ ಆಡಿಯೋ ರಿಲೀಸ್ ಮಾಡಲಾಯ್ತು. 'ನಾನು ಮಂಜ ನಿಮ್ಮ ಅಮ್ಮ . ಈ ತರಹ ಮಾಡಬೇಡ. ಯಾಕೆ ಹೀಗೆಲ್ಲ ಮಾತನಾಡ್ತಿಯ. ಜನ ಎಲ್ಲ ನೋಡ್ತಿರ್ತಾರೆ. ಏನೇನು ಕಷ್ಟ ಇದೆ ಅಂತ. ಅದನ್ನ ಜ್ಞಾಪಕ ಇಟ್ಟುಕೊಂಡು ಆಟ ಆಡಬೇಕು. ನಿನ್ನ ಆಟವನ್ನ ನೀನು ತೋರಿಸಬೇಕೇ ಹೊರತು ಕೆಟ್ಟ ಮಾತು ಆಡ್ವಾರ್ದು. ಹೀಗೆಲ್ಲ ಮಾಡಬಾರದು. ನೀನು ಮಾತನಾಡಿದ ಮಾತಿನಿಂದ ನನಗೆ ತುಂಬಾನೆ ಬೇಜಾರಗ್ತಿದೆ ಎಂದು ಹೇಳಿದ ತಕ್ಷಣ ಮಂಜ ಜೋರಾಗಿ ಅತ್ತಿದ್ದರು.
ಫೈನಲಿ ಮಂಜ ಅವರು ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಅವಕಾಶ ಸಿಕ್ಕಾಗ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಿತ್ತು. ಆದರೆ ಒಂದು ಹುಡುಗಿ ರೇಟ್ ಬಗ್ಗೆ ಮಾತನಾಡಿದ ಗಗನ್, ಗಗನ್ ಅಮ್ಮನ ರೇಟ್ ಕೇಳಿದ ಗಾನವಿಗೆ ನಿಯಮ ಇಲ್ವಾ ಎಂದು ಕಿಡಿಕಾರಿದ್ದಾರೆ.
ಅವನು ಕೆಟ್ಟದಾಗಿ ಮಾತನಾಡಿದನು, ಅವನು ಕೆಟ್ಟದಾಗಿ ಮಾತನಾಡಿದನು, ಅವನು ಕೆಟ್ಟದಾಗಿ ಮಾತನಾಡಿದನು. ನೀವು ಇದನ್ನು ನೂರು ಬಾರಿ ಪುನರಾವರ್ತಿಸುತ್ತಿದ್ದೀರಿ. ಕನಿಷ್ಠ ಒಮ್ಮೆಯಾದರೂ ಹೇಳಿ, ಅವನು ನಿಜವಾಗಿಯೂ ಕೆಟ್ಟದಾಗಿ ಏನು ಹೇಳಿದನು? ಎಂದು ಪ್ರಶ್ನೆ ಮಾಡಿದ್ದಾರೆ, (ಏಜೆನ್ಸೀಸ್).