

ಬಿಗ್ಬಾಸ್ ಮನೆಯಲ್ಲಿ ಮಿಡ್ವೀಕ್ ಎಲಿಮಿನೇಷನ್ ಬಿಸಿ
ತಾಂಡವ್, ಜಗದೀಶ್, ಸೌಂದರ್ಯ, ಲಿಖಿತ್ ಪೈಕಿ ಮನೆಯಿಂದ ಹೊರಹೋಗೋದ್ಯಾರು?
ಗದ್ದಲದಿಂದ ಕೂಡಿರುತ್ತಿದ್ದ ಮನೆಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ಕಾವು
Bigg Boss Kannada: ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿ ಗಲಾಟೆ-ಗದ್ದಲ ಜೋರಾಗಿತ್ತು. ಆದರೆ ಈ ವಾರ ಮಿಡ್ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಎಕ್ಸಿಟ್ ಮತ್ತು ಎಮರ್ಜೆನ್ಸಿ ಎಕ್ಸಿಟ್ನಿಂದಾಗಿ ಮನೆಯಲ್ಲಿ ಬೇಸರದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಜಗ್ಗಿ ಮತ್ತು ತಾಂಡವ್ ಅತ್ತದ್ದನ್ನು ಕಂಡ ಸ್ಪರ್ಧಿಗಳಿಗೆ ದುಃಖ ಉಮ್ಮಳಿಸಿ ಬಂದಿರುವ ದೃಶ್ಯಗಳು ಈಗಷ್ಟೇ ರಿಲೀಸ್ ಆದ ಪ್ರೋಮೋದಲ್ಲಿ ಇದೆ.
ಬಿಗ್ಬಾಸ್12ರಲ್ಲಿ ಕೇವಲ ಮೂರೇ ವಾರಕ್ಕೆ ಇಬ್ಬರನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕರೆಸಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಯಾವುದೇ ಎಂಟರ್ಟೈನ್ಮೆಂಟ್ ಸಿಗುತ್ತಿಲ್ಲ ಎನ್ನುವುದು ಪ್ರೇಕ್ಷಕರ ದೂರು. ಹೀಗಾಗಿ ಮೂವರು ಮನೆಯಿಂದ ಎಕ್ಸಿಟ್ ಆಗಲಿದ್ದು, ಇನ್ನೂ ಮೂವರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಚರ್ಚೆಯಾಗುತ್ತಿದೆ.
ಪ್ರೋಮೋದಲ್ಲಿ ಪ್ರಸಾರವಾಗಿರುವಂತೆ, ಎಲಿಮಿನೇಟ್ ತೂಗುಗತ್ತಿಯಲ್ಲಿ ತಾಂಡವ್, ಸೌಂದರ್ಯ, ಜಗದೀಶ್, ಲಿಖಿತ್ ಇದ್ದಾರೆ. ಅವರಿಗೆ ಕೊನೆಯದಾಗಿ ತಮ್ಮ ಮನದಾಳದ ಮಾತನ್ನು, ನೋವನ್ನು ಸ್ಪರ್ಧಿಗಳು ಬಾಕ್ಸಿಂಗ್ ಬ್ಯಾಗ್ ಬಳಿ ನಿಂತು ಸ್ಪರ್ಧಿಗಳ ಫೋಟೋ ಅಂಟಿಸಿ ಅದಕ್ಕೆ ಹೊಡೆದು ಮನಸ್ಸಿನ ಭಾವನೆಗಳನ್ನು ತೆರೆದಿಡುವ ಟಾಸ್ಕ್ ಅನ್ನು ಬಿಗ್ಬಾಸ್ ನೀಡಿದ್ದಾರೆ.
ಈ ವೇಳೆ ತಾಂಡವ್ ಮಾತನಾಡಲಾಗುತ್ತಿಲ್ಲ ಎಂದು ಬಾಕ್ಸಿಂಗ್ ಬ್ಯಾಗ್ಗೆ ಹೊಡೆದಾಗ ಗಗನ್ ಚಿನ್ನಪ್ಪ ಇತ್ತ ಕಣ್ಣೀರು ಹರಿಸಿದ್ದು, ಇನ್ನೂ ಜಗದೀಶ್ ನನಗೆ ಅಂತ ಯಾರು ಸಹ ಇಲ್ಲ ಆದರೂ ಇಲ್ಲಿಯವರೆಗೂ ಬಂದಿದ್ದೇನೆ ಎಂದು ಗೋಗೆರೆದಿದ್ದು ಸದಾ ಗದ್ದಲದಿಂದ ಕೂಡಿರುತ್ತಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದಂತೆ ಇತ್ತು. ಒಟ್ಟಾರೆಯಾಗಿ ಸ್ಪರ್ಧಿಗಳೆಲ್ಲರು ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಈ ಪ್ರೋಮೋದಲ್ಲಿ ಕಂಡುಬಂದಿದೆ. ಅದಾದ ನಂತರ ಸ್ಪರ್ಧಿಗಳಿಗೆ ಲಕ್ಕಿ ಲಾಕೆಟ್‌ಗಳನ್ನು ಕಳುಹಿಸಿ ಕೊಡಲಾಗಿದೆ. ಇದರಲ್ಲಿ ಮನೆಯಲ್ಲಿ ಯಾರ ಪಯಣ ಕೊನೆಗೊಳ್ಳಲಿದೆ ಎಂಬುದು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಬಹುತೇಕ ಎಕ್ಸ್ ಬಳಕೆದಾರರು ಈ ವಾರ ಮನೆಯಿಂದ ಔಟ್ ಆಗುವ ಸ್ಪರ್ಧಿಗಳು ವೈಷ್ಣವಿ, ಲಿಖಿತ್ ಅವಿನಾಶ್ ಎಂದು ಉಲ್ಲೇಖಿಸಿದ್ದಾರೆ. ವೈಷ್ಣವಿ ಅವರು ಯಾವುದೇ ಗೇಮ್ನಲ್ಲಿ ಗೆಲುವು ಕಂಡಿಲ್ಲ. ಇನ್ನೂ ಅವಿನಾಶ್ ಅವರು ಕಾಣಿಸಿಕೊಂಡಿಲ್ಲ. ಯಾವುದೋ ಮೂಲೆಯಲ್ಲಿ ಇರುತ್ತಾರೆ. ಇನ್ನೂ ಲಿಖಿತ್ ಆಟಗಳನ್ನು ಅರ್ಥ ಮಾಡಿಕೊಳ್ಳದೇ, ಗೇಮ್ ಗೆಲ್ಲದೆ ಕೆಡಿಸುತ್ತಾರೆ. ಹೀಗಾಗಿ ಇವರಿಗೆ ಕಡಿಮ ವೋಟ್ ಬಂದಿರಬಹುದು ಎನ್ನುವುದು ಪ್ರೇಕ್ಷಕರ ಚಿಂತನೆ.
ಇನ್ನೂ ಮತ್ತೊಂದು ಹೆಸರು ಎಂದರೆ ಜಗದೀಶ್. ಜಗ್ಗಮಮ್ಮಿ ಆಗಿ ಪರಿಚಿತರಾಗಿರುವ ಇವರು ಮನೆಯಲ್ಲಿ ಮೈಂಡ್ಗೇಮ್ ಆಡುತ್ತಿದ್ದಾರೆ ಎಂದೆನಿಸಿದರೂ ಸಹ ಯಾವುದೇ ಎಂಟರ್ಟೈನ್ಮೆಂಟ್ ಸಿಗ್ತಿಲ್ಲ ಎನ್ನುವುದು ಹಲವರ ಉದ್ದೇಶ. ಇನ್ನೂ ಕೆಲವರು ಲಿಖಿತ್, ವೈಷ್ಣವಿ, ಯಶಸ್ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಈ ವಾರ ಮೂವರು ಸ್ಪರ್ಧಿಗಳು ಯಾರು ಎಲಿಮಿನೇಟ್ ಆಗುತ್ತಿದ್ದಾರೆ. ಯಾರು ಒಳಕ್ಕೆ ಕಾಲಿಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).