'ಬಿಗ್​ಬಾಸ್ ಮನೆಯಲ್ಲಿ ಮೂರಲ್ಲ, 4 ಹೆಣ್ಮಕ್ಕಳಿದ್ದಾರೆ'; ವಿವಾದಕ್ಕೊಳಗಾದ ಗಗನ್ ಹೇಳಿಕೆ, ಹೆಸರು ಉಲ್ಲೇಖಿಸಲು ನೆಟ್ಟಿಗರಿಂದ ಒತ್ತಾಯ

'ಬಿಗ್​ಬಾಸ್ ಮನೆಯಲ್ಲಿ ಮೂರಲ್ಲ, 4 ಹೆಣ್ಮಕ್ಕಳಿದ್ದಾರೆ'; ವಿವಾದಕ್ಕೊಳಗಾದ ಗಗನ್ ಹೇಳಿಕೆ, ಹೆಸರು ಉಲ್ಲೇಖಿಸಲು ನೆಟ್ಟಿಗರಿಂದ ಒತ್ತಾಯ
Published on: 
  • ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ ಎಂದು ಬಿಗ್​ಬಾಸ್ ಫಿನಾಲೆಗೂ ಮುನ್ನ ವಿವಾದಕ್ಕೊಳಗಾದ ಗಗನ್.

  • ಸದ್ಯ ಬಿಗ್​ಬಾಸ್ ಮನೆಯಲ್ಲಿರುವುದು ಆಸಿಯಾ, ಗಾನವಿ ಮತ್ತು ಸೌಂದರ್ಯಾ ಶೆಟ್ಟಿ ಮಾತ್ರ.

  • ವೀಕೆಂಡ್ ಕ್ಲಾಸ್ ಬಗ್ಗೆ ನೆನಪಾಗಿ ಸೋನಿಕಾ ಇದ್ದಾರೆ ಎಂದು ಕೊಂಡೆ ಎಂದು ಮಾತು ತಿರುಚಿದ ಗಗನ್.

  • ಗಗನ್​ ಹೆಸರು ಉಲ್ಲೇಖಿಸಬೇಕು, ಈ ವಿಚಾರವಾಗಿ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂದ ನೆಟ್ಟಿಗರು.

Bigg Boss Gagan Chinnappa: ಮಾಡ್ರನ್​ ಮಹಾಕವಿ ಮಂಜ ಮತ್ತು ಜಗದೀಶ್​ ಮಧ್ಯೆ ನಡೆದಿದ್ದ ಮಾತಿನ ಚಕಮಕಿಯು ಗಂಡಸ್ತನದ ವಿಚಾರದಲ್ಲಿ ಕೊನೆಯಾಗಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದನ್ನೇ ವೀಕೆಂಡ್​ನಲ್ಲಿ ಉಲ್ಲೇಖಿಸಿದ್ದ ಕಿಚ್ಚ ಸುದೀಪ್​ ಅವರ, ಮಂಜನಿಗೆ ಸಖತ್​ ಕ್ಲಾಸ್ ತೆಗೆದುಕೊಂಡಿದ್ದರು. ಇಷ್ಟೆಲ್ಲ ರಾಮಾಯಣವಾದ್ರೂ ಸಹ ಹಳೆ ಚಾಳಿಯನ್ನು ಮನೆ ಮಂದಿ ಬಿಟ್ಟಿಲ್ಲ, ಈ ಬಾರಿ ಇಂತದ್ದೊಂದು ವಿವಾದಕ್ಕೆ ಗಗನ್​ ಚಿನ್ನಪ್ಪ ಅವರು ಸಿಲುಕಿಕೊಂಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಸದ್ಯ ಆಸಿಯಾ, ಸೌಂದರ್ಯಾ ಮತ್ತು ಗಾನವಿ ಇದ್ದಾರೆ. ಇವರು ಡೇಂಜರ್​ ಎಂದು ತಾಂಡವ್​ ಹೇಳುತ್ತಾರೆ. ಆಗ ಗಗನ್​​ ನಾಲ್ಕಲ್ವ ಎಂದು ಮುಗುಳು ನಗುತ್ತಾರೆ. ಇದನ್ನು ಕಂಡಿರುವ ವೀಕ್ಷಕರು ಜಗ್ಗ ಮಮ್ಮಿಗೆ ಗಗನ್​ ಹೀಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ

ಹೌದು ಗಗನ್ ಅವರು ತಾಂಡವ್, ಪ್ರಶಾಂತ್ ಕುಳಿತು ಊಟ ಮಾಡುತ್ತ ಮಾತನಾಡುತ್ತಿರುವಾಗ ಈ ಟಾಪಿಕ್ ಮುನ್ನೆಲೆಗೆ ಬಂದಿದೆ. ಮನೆಯಲ್ಲಿ ಇರುವ ಮೂರು ಹೆಣ್ಣು ಮಕ್ಕಳಿದ್ದಾರೆ ಅವರು ಡೇಂಜರ್​ ಕಣಪ್ಪ​ ಎಂದು ತಾಂಡವ್​ ಎಂದರು. ಇದಕ್ಕೆ ಗಗನ್​​ ನಾಲ್ಕು ಹೆಣ್ಣು ಮಕ್ಕಳಲಲ್ವಾ ಎಂದು ವ್ಯಂಗ್ಯವಾಗಿ ನಕ್ಕಿದ್ದಾರೆ.

ನೆಟ್ಟಿಗರು ಏನಂದ್ರು?

ಅವರು ಮಾತನಾಡಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿರುವ ನೆಟ್ಟಿಗರು ಎಕ್ಸ್​​ನಲ್ಲಿ ಪೋಸ್ಟ್ ಹಂಚಿಕೊಂಡು, ಕಿಡಿಕಾರಿದ್ದಾರೆ. ಸುದೀಪ್​ ಅವರು ಈ ವಿಚಾರವನ್ನು ಚರ್ಚೆ ಮಾಡಲೇ ಬೇಕು, ಮನೆಯಲ್ಲಿ ಸದ್ಯ ಇರೋದು ಮೂವರು ಹೆಣ್ಣು ಮಕ್ಕಳು. ನಾಲ್ಕನೆಯವರು ಯಾರು ಮತ್ತು ಅವರ ಹೆಸರನ್ನು ಗಗನ್​ ಚಿನ್ನಪ್ಪ ಉಲ್ಲೇಖಿಸಲೇ ಬೇಕು ಎಂದು ಪಟ್ಟು ಹಿಡಿದ್ದಾರೆ.

ಮಹಿಳೆಯರಿಗಾಗಿ ಪ್ರಶಾಂತ್ ಹೋರಾಟ ಎಲ್ಲಿ ಹೋಯ್ತು

ಗಗನ್​ ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳಿದ್ದಾರೆ ಎಂದಿದ್ದಾರೆ. ಸುದೀಪ್​ ಸರ್ ಅವರು ಆ ನಾಲ್ಕು ಜನರ ಹೆಸರನ್ನು ಹೇಳುವಂತೆ ಅವನನ್ನು ಕೇಳಬೇಕು. ಮಹಿಳೆಯರ ಘನತೆಗಾಗಿ ಹೋರಾಡುತ್ತಿದ್ದ ಅದೇ ಪ್ರಶಾಂತ್ ಈಗ ಎಲ್ಲಿದ್ದಾರೆ? ತನ್ನ ಸ್ನೇಹಿತನ ವಿಷಯ ಬಂದಾಗ ಮಾತ್ರ ಅವರು ಏಕೆ ಸುಮ್ಮನಿದ್ದಾರೆ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಗಗನ್ ಯೇನೋ ನೀನು ತಾಂಡವ್ ಲುಕ್ ಕೊಟ್ಟಿದ್ದಕ್ಕೆ ಡೈವರ್ಟ್ ಮಾಡಿದ್ಯಾ. ಸೋನಿಕಾ ಅವರು ಮನೆಯಲ್ಲಿ ಇದಾರೆ ಅನ್ಕೊಂಡೆ ಹಾಗಾಗಿ ನಾಲ್ಕು ಹೆಣ್ಣು ಮಕ್ಕಳು ಅಂತ.ವೀಕೆಂಡ್​ನಲ್ಲಿ ಎಲ್ಲಿ ಬೈಸಿಕೊಳ್ಳಬೇಕು ಅಂತ ಹೀಗೆ ಮಾಡಿದ್ದ. ಇಷ್ಟೆಲ್ಲ ಒಳ್ಳೆದಲ್ಲ ಎಂದಿದ್ದಾರೆ.

ಏನಾಗಿತ್ತು ಕಳೆದ ವಾರ

ಕಳೆದ ವಾರ ಗಾನವಿ ಮತ್ತು ಜಗದೀಶ್​ ನಡುವೆ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಳ್ಳುತ್ತಿದ್ದರು. ಇದರ ಮಧ್ಯೆ ಪ್ರವೇಶಿಸಿ, ಗಾನವಿ ಪರ ನಿಂತ ಮಾಡ್ರನ್​​ ಕವಿ ಮಂಜ ಜಗ್ಗ ಮಮ್ಮಿಗೆ 'ಮೊದಲು ನೀನು ಗಂಡಸಾಗಿ ಬಾ' ಹಾಗೂ 'ಗಂಡಸರ ಹಾಗೆ ನಡೆದುಕೋ' ಎಂದು ಬೈದಿದ್ದರು.

ಮಂಜನ ನಾಲಿಗೆ ಮೇಲೆ ಹಿಡಿತ ಇಲ್ಲದ ವಿರುದ್ಧ ವಾರಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಕಿಡಿಕಾರಿದ್ದರು., ಅನಗತ್ಯ ಪದ ಬಳಕೆ ಬಗ್ಗೆ ಚಳಿ ಬಿಡಿಸಿದ್ದರು. ಗಂಡಸಿನ ಹಾಗೆ ಮಾತನಾಡುವುದು ಹೇಗೆ ಮಂಜು ಮನೆಯಿಂದ ಹೊರಗಡೆ ಬರುವ ಮುಂಚೆ ಮಾತಾನಾಡಿದ್ರಲ್ಲ ಹಾಗಾ?, ನಿಮ್ಮನ್ನು ನೀನು ಏನು ದಬ್ಬಾಕಿ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ರೆ ನೀವು ಸುಮ್ಮನ್ನಿರುತ್ತೀರಾ ಎಂದಿದ್ದರು. ಹೀಗೆಲ್ಲ ಆಗಿದ್ದರೂ ಸಹ ಮನೆ ಮಂದಿ ಪಾಠ ಕಲಿತಿಲ್ಲ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ, (ಏಜೆನ್ಸೀಸ್).