

ಬೆತ್ಲಹೇಮ್ ಕುಟುಂಬಂ ಯೂನಿಟ್ ಒಟಿಟಿಗೆ ರಿಲೀಸ್
ಅ.2ರಂದು ಜಿಯೋ ಹಾಟ್ಸ್ಟಾರ್ನಲ್ಲಿ ಬೆತ್ಲಹೇಮ್ ಕುಟುಂಬಂ ಯೂನಿಟ್ ನೋಡಲು ಲಭ್ಯ
ಫೀಲ್ ಗುಡ್ ಸಿನಿಮಾ ಬೆತ್ಲಹೇಮ್ ಕುಟುಂಬಂ ಯೂನಿಟ್ ಎಂದ ಪ್ರೇಕ್ಷಕರು
Bethlehem Kudumba Unit : ವಿಶ್ವನಾಥ್ ಆಂಡ್ ಸನ್ಸ್ ಸಿನಿಮಾದ ನಂತ್ರ ಸಿನಿ ಪ್ರೇಮಿಗಳು ಹೆಚ್ಚು ಕಾದಿದ್ದು ಬೆತ್ಲಹೇಮ್ ಕುಟುಂಬಂ ಯೂನಿಟ್ ಚಿತ್ರಕ್ಕಾಗಿ. ಮಮಿತಾ ಬೈಜು ನಟನೆಯ ಈ ಸಿನಿಮಾ ಎಂದು ಒಟಿಟಿಗೆ ರಿಲೀಸ್ ಆಗುತ್ತೆ ಎಂದು ಕಾತರದಿಂದ ಕಾಯುತ್ತಿದ್ದವರ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
ಹೌದು, ಇದೇ ವಾರ ಗಾಂಧಿ ಜಯಂತಿ ದಿನದಂದು, ಅಂದರೆ ಅ.2ರಂದು ಬೆತ್ಲಹೇಮ್ ಕುಟುಂಬಂ ಯೂನಿಟ್ ಸಿನಿಮಾ ಜಿಯೋಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಲಿದೆ ಎಂದು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಮಾಲಿವುಡ್ ಸಿನಿಮಾರಂಗದಲ್ಲಿ ಹೆಚ್ಚು ಸದ್ದು ಮಾಡಿದ ಬ್ಲಾಕ್ ಬ್ಲಸ್ಟರ್ ಸಿನಿಮಾ ಬೆತ್ಲಹೇಮ್ ಕುಟುಂಬಂ ಯೂನಿಟ್ ಯಶಸ್ವಿ ಪ್ರದರ್ಶನ ಕಂಡಿದೆ. ಇದರ ಒಟಿಟಿ ಸ್ಟ್ರೀಮಿಂಗ್ ಹಕ್ಕನ್ನು ಜಿಯೋ ಹಾಟ್ಸ್ಟಾರ್ ಪಡೆದುಕೊಂಡಿದೆ.
ಆಗಸ್ಟ್21ರಂದು ಗಿರೀಶ್ ಎ.ಡಿ. ಆಕ್ಷನ್ ಕಟ್ ಹೇಳಿರುವ, ನಿವಿನ್ ಪೌಲಿ ಮತ್ತು ಮಮಿತಾ ಬೈಜು ಅಭಿನಯದ ಬೆತ್ಲಹೇಮ್ ಕುಟುಂಬಂ ಯೂನಿಟ್ ರಿಲೀಸ್ ಆಗಿತ್ತು. ಸೆಪ್ಟೆಂಬರ್ 4 ರಂದು ಚಿತ್ರಮಂದಿರಗಳಿಗೆ ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಗಳು ಬಂದವು. ಈ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದೆ. ಇದು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರ ಹೊಮ್ಮಿದೆ.
ಇದೊಂದು ಫೀಲ್ಗುಡ್ ಸಿನಿಮಾವಾಗಿದೆ. ಕಾಲೇಜು ವಿದ್ಯಾರ್ಥಿನಿ ಆಶ್ಲೇ ಅಂದ್ರೆ ಮಮಿತಾ ಬೈಜು ತನಗಿಂತ ವಯಸ್ಸಿನಲ್ಲಿ ಹಿರಿಯವನಾದ ಜಸ್ಟಿನ್ ಅಂದ್ರೆ ನಿವಿನ್ ಪೌಲಿಯನ್ನು ಪ್ರೇಮಿಸುತ್ತಾಳೆ. ಇವರಿಬ್ಬರ ರಹಸ್ಯ ಪ್ರೀತಿ, ಒತ್ತಡ ಹಾಸ್ಯ ಮತ್ತು ಭಾವನಾತ್ಮಕವಾಗಿ ಮೂಡಿಬಂದಿದೆ.
ಈ ಸಿನಿಮಾವೂ 23ರಿಂದ 25 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದು, ಜಗತ್ತಿನಾದ್ಯಂತ ಉತ್ತಮ ಪ್ರದರ್ಶನಗೊಂಡು 330 ಕೋಟಿಯನ್ನು ಬಾಚಿಕೊಂಡಿದೆ. ನಿವಿನ್ ಪೌಲಿ ಅವರಿಗೆ ಇದೊಂದು ಉತ್ತಮ ಕಂಬ್ಯಾಕ್ ಸಿನಿಮಾವಾಗಿದೆ. ಪ್ರೇಮಂ, ಸರ್ವಂ ಮಾಯಂ ನಂತ್ರ ಅದರಂತೆ ಫೀಲ್ ಗುಡ್ ಎನಿಸುವ ಸಿನಿಮಾ ಇದಾಗಿದೆ.
ಗಿರೀಶ್ ಎಡಿ ಅವರು ತಣ್ಣೀರ್ ಮಥನ್ ದಿನಂಗಳು, ಸೂಪರ್ ಶರಣ್ಯ, ಪ್ರೇಮಲು ಮತ್ತು ಐಆಮ್ ಕಾಥಲನ್ ಸಿನಿಮಾ ನಿರ್ದೇಶಿಸಿದ್ದಾರೆ. ಎಲ್ಲವೂ ಬ್ಲಾಕ್ ಬ್ಲಸ್ಟರ್ ಹಿಟ್ ಕಂಡ ಸಿನಿಮಾವಾಗಿದೆ, (ಏಜೆನ್ಸೀಸ್).