

ಅ.23ರಂದು ಆಯುಷ್ಮಾನ್ ಖುರಾನಾ ಮತ್ತು ಸಾರಾ ಅಲಿ ನಟನೆಯ ಸಿನಿಮಾ ರಿಲೀಸ್
ಖುರಾನಾ ಮತ್ತು ಸಾರಾ ಅಲಿ ನಟನೆಯ ಉಡ್ತಾ ತೀರ್ ಸಿನಿಮಾ
ಪಾಕಿಸ್ತಾನದಿಂದ ಭಾರತಕ್ಕೆ ಬರುವ ಗೂಡಾಚಾರಿಯ ಸುತ್ತ ಕಟ್ಟಲಾದ ಕತೆ
ಭೂಲ್ ಭೂಲಿಯಾ 2ರ ಸಿನಿಮಾ ನಿರ್ದೇಶಕ ಆಕಾಶ್ ಕೌಶಿಕ್ ಆಕ್ಷನ್ ಕಟ್ ಹೇಳಿರುವ 'ಉಡ್ತಾ ತೀರ್' ಸಿನಿಮಾವನ್ನು ನೇಪಾಳದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿದೆ. ಸಿನಿಮಾ ನಿಷೇಧಕ್ಕೆ ಕಾರಣ ಏನು? ಅಂತಹ ಸೀನ್ಗಳು ಇರೋದಾದ್ರು ಏನು ಎನ್ನುವುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೊಂಗ ಹಾಗೂ ಕರಣ್ ಜೋಹರ್ರ ಧರ್ಮ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಿಸಿರುವ ಉಡ್ತಾ ತೀರ್ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ಮತ್ತು ಸಾರಾ ಅಲಿ ಖಾನ್ ನಟಿಸಿದ್ದಾರೆ. ರಾಹುಲ್ ಬೋಸ್, ರಾಮ್ ಕುಮಾರ್, ಗುಲ್ಶನ್ ಗ್ರೋವರ್ ಪೋಷಕಪಾತ್ರದಲ್ಲಿದ್ದಾರೆ. ಅ.23ರಂದು ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಆದರೆ, ಸಿನಿಮಾ ರಿಲೀಸ್ ಆಗುವ ಮುಂಚೆಯೇ ನೇಪಾಳದಲ್ಲಿ ನಿಷೇಧಿಸಲಾಗಿದೆ, ಇಲ್ಲಿಯವರೆಗೂ ಹಲವು ಸಿನಿಮಾಗಳು ನೇಪಾಳದಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನವನ್ನು ಕಂಡಿದೆ. ಆದರೆ. ಈ ಹಾಸ್ಯಪ್ರಧಾನ ಸಿನಿಮಾ ಉಡ್ತಾ ತೀರ್ಗೆ ನೇಪಾಳದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿದೆ. ಈ ಬಗ್ಗೆ ನೇಪಾಳದ ಸೆಂಟ್ರಲ್ ಫಿಲ್ಮ್ ಸೆನ್ಸಾರ್ ಬೋರ್ಡ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದೆ.
ರಾಷ್ಟ್ರೀಯ ಸಿನಿಮಾ (ನಿರ್ಮಾಣ, ಪ್ರದರ್ಶನ ಮತ್ತು ವಿತರಣೆ) ಕಾಯ್ದೆ, 2026 ರ ಸೆಕ್ಷನ್ 8(3) ರ ಅಡಿಯಲ್ಲಿ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದಿಲ್ಲ . ಸಿನಿಮಾವನ್ನು ಸೆನ್ಸಾರ್ ಮಂಡಳಿ ನೋಡಿದೆ . ಕಾನೂನಿಂದ ನಿರ್ಬಂಧಿಸಲ್ಪಟ್ಟ ವರ್ಗದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡುವುದು ಸಾಧ್ಯವಿಲ್ಲ ಎಂದುಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಉಡ್ತಾ ತೀರ್ ಸಿನಿಮಾವೊಂದು ಹಾಸ್ಯ ಪ್ರಧಾನ ಸಿನಿಮಾವಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ಕಾಲಿಡುವ ಸ್ಪೈ (ಆಯುಷ್ಮಾನ್ ಖುರಾನ) ಅಪಘಾತವೊಂದರಲ್ಲಿ ನೆನಪಿನ ಶಕ್ತಿ ಕಳೆದುಕೊಳ್ಳುತ್ತಾನೆ. ತಾನೀಗ ಭಾರತೀಯನೋ ಅಥವಾ ಪಾಕಿಸ್ತಾನದ ಪ್ರಜೆಯೋ ಎನ್ನುವುದನ್ನು ಅರಿಯದ ಆತ ಗೊಂದಲಕ್ಕೆ ಒಳಗಾಗುತ್ತಾನೆ. ಸಿನಿಮಾ ಕತೆಯಲ್ಲಿ ಹಾಸ್ಯವಿದೆ.
ನೇಪಾಳದ ಸಿನಿಮಾ ಮಂಡಳಿ ಪ್ರಕಾರ, ಈ ಸಿನಿಮಾ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಬಗ್ಗೆ ಮಾತನಾಡುತ್ತದೆ. ಇದು ನೇಪಾಳದ ರಾಷ್ಟ್ರಯ ಹಿಸತಾಸಕ್ತಿಇಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಈ ಸಿನಿಮಾವನ್ನು ನಿರ್ಬಂಧಿಸಲಾಗಿದೆ ಎನ್ನಲಾಗಿದೆ. ಆದರೆ ಧುರಂಧರ್ ಮತ್ತು ಧುರಂಧರ್ 2 ಸಿನಿಮಾ ಸಹ ಪಾಕಿಸ್ತಾನಕ್ಕೆ ತೆರಳುವ ಸಹ ನೇಪಾಳದಲ್ಲಿ ಪ್ರದರ್ಶನಗೊಂಡಿತ್ತು. ಅಂದು ಬಳಕೆಯಾಗದ ಈ ಬ್ಯಾನ್, ನಿರ್ಬಂಧ ಯಾಕೆ ಎಂದಿದ್ದಾರೆ ನೆಟ್ಟಿಗರು, (ಏಜೆನ್ಸೀಸ್).