ವಿದೇಶಿ ಯುವಕನ ಕೈಹಿಡಿದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾರ ಕಿರಿಯ ಪುತ್ರಿ: ಮದ್ವೆ ಫೋಟೋ ಹಂಚಿಕೊಂಡ ಅಂಜನಾ! Anjana Sarja

Anjana Sarja : ದಕ್ಷಿಣ ಭಾರತದ ಸಿನಿರಂಗದಲ್ಲಿ 'ಆಕ್ಷನ್ ಕಿಂಗ್' ಎಂದೇ ಪ್ರಖ್ಯಾತಿಯಾಗಿರುವ ನಟ ಅರ್ಜುನ್ ಸರ್ಜಾ ಅವರ ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ ಕಳೆಗಟ್ಟಿದೆ. ಅರ್ಜುನ್ ಸರ್ಜಾ ಮತ್ತು ನಿವೇದಿತಾ ದಂಪತಿಯ ಕಿರಿಯ ಮಗಳು ಅಂಜನಾ ಸರ್ಜಾ ಇತ್ತೀಚೆಗೆ ವಿದೇಶಿ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Anjana Sarja
ವಿದೇಶಿ ಯುವಕನ ಕೈಹಿಡಿದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾರ ಕಿರಿಯ ಪುತ್ರಿ ಅಂಜನಾ ಸರ್ಜಾPhotographer Namanverma
Published on: 

ಸರ್ಜಾ ಕುಟುಂಬದಲ್ಲಿ ಸಂಭ್ರಮ

Photographer Namanverma

ಕಳೆದ ವರ್ಷವಷ್ಟೇ ಅರ್ಜುನ್ ಸರ್ಜಾ ಅವರ ಹಿರಿಯ ಮಗಳು ಐಶ್ವರ್ಯಾ ಸರ್ಜಾ, ತಮಿಳು ನಟ ಉಮಾಪತಿ ರಾಮಯ್ಯ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಕಿರಿಯ ಮಗಳೂ ಕೂಡ ಹೊಸ ಬಾಳಿಗೆ ಹೆಜ್ಜೆ ಇಡುವ ಮೂಲಕ ಸರ್ಜಾ ಕುಟುಂಬದಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ.

ಅಮೆರಿಕದಲ್ಲಿ ಶಿಕ್ಷಣ

Photographer Namanverma

ಅರ್ಜುನ್ ಸರ್ಜಾ ಅವರ ಕಿರಿಯ ಮಗಳು ಅಂಜನಾ ಪ್ರಸ್ತುತ 'ಸರ್ಜಾ ವರ್ಲ್ಡ್' ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಸಿಇಒ (CEO) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಜನಾ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಸಮಯದಲ್ಲಿ 'ಇಸೈ ನಟ್ಟರ್' ಎಂಬ ವಿದೇಶಿ ಯುವಕನ ಪರಿಚಯವಾಗಿತ್ತು.

14 ವರ್ಷಗಳ ಪ್ರೀತಿ

Photographer Namanverma

ದಿನಕಳೆದಂತೆ ಪರಿಚಯ ಪ್ರೀತಿಯಾಗಿ ಬದಲಾಗಿ, ಸತತ 14 ವರ್ಷಗಳ ಕಾಲ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಸುದೀರ್ಘ ಪ್ರೇಮ ಪಯಣವು ಇದೀಗ ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಸುಖಾಂತ್ಯ ಕಂಡಿದ್ದು, ಮದುವೆಯ ಶುಭ ಬಂಧನಕ್ಕೆ ತಲುಪಿದೆ.

ಅ.19ರಂದು ನಡೆದ ವಿವಾಹ

Photographer Namanverma

ಅಂಜನಾ ಸರ್ಜಾ ಮತ್ತು ಇಸೈ ನಟ್ಟರ್ ಅವರ ನಿಶ್ಚಿತಾರ್ಥ ಸಮಾರಂಭವು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಡೆದಿತ್ತು. ತದನಂತರ, ಅಕ್ಟೋಬರ್ 19 ರಂದು ವಿದೇಶದ ಮಣ್ಣಿನಲ್ಲಿ ಅತ್ಯಂತ ಅದ್ಧೂರಿಯಾಗಿ ಇವರಿಬ್ಬರ ವಿವಾಹ ಮಹೋತ್ಸವ ನೆರವೇರಿತು.

ವಿದೇಶದಲ್ಲೂ ಸಾಂಪ್ರದಾಯಿಕ ಮದುವೆ

Photographer Namanverma

ಮದುವೆ ವಿದೇಶದಲ್ಲಿ ನಡೆದರೂ ಸಹ, ಸಂಪೂರ್ಣವಾಗಿ ಹಿಂದೂ ಸಾಂಪ್ರದಾಯಿಕ ಹಾಗೂ ವೈದಿಕ ವಿಧಿವಿಧಾನಗಳಂತೆಯೇ ಧಾರ್ಮಿಕ ಚೌಕಟ್ಟಿನಲ್ಲಿ ನೆರವೇರಿರುವುದು ವಿಶೇಷವಾಗಿತ್ತು. ನವಜೋಡಿಗಳಾದ ಅಂಜನಾ ಮತ್ತು ಇಸೈ ನಟ್ಟರ್ ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದರು.

ಫೋಟೋ ಹಂಚಿಕೊಂಡು ಅಂಜನಾ

Photographer Namanverma

ಅಂಜನಾ ಸರ್ಜಾ ಇತ್ತೀಚೆಗೆ ತಮ್ಮ ಸುಂದರ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರೇಷ್ಮೆ ಸೀರೆಯಲ್ಲಿ ಅಂಜನಾ ದೇವತೆಯಂತೆ ಕಂಗೊಳಿಸುತ್ತಿದ್ದರೆ, ವಿದೇಶಿ ವರ ಇಸೈ ನಟ್ಟರ್ ಸಾಂಪ್ರದಾಯಿಕ ಪಂಚೆ-ಶಲ್ಯ ಧರಿಸಿ ಭಾರತೀಯ ಸಂಸ್ಕೃತಿಗೆ ಗೌರವ ಸಲ್ಲಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಶುಭಾಶಯಗಳ ಮಹಾಪೂರ

Photographer Namanverma

ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಂಜನಾ ಸರ್ಜಾ ಮತ್ತು ಇಸೈ ನಟ್ಟರ್ ಜೋಡಿಗೆ ಚಿತ್ರರಂಗದ ಪ್ರಮುಖ ಗಣ್ಯರು, ಬಂಧು-ಮಿತ್ರರು ಹಾಗೂ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.

ಸುಖ-ಸಂತೋಷದಿಂದ ಕೂಡಿರಲಿ

Photographer Namanverma

14 ವರ್ಷಗಳ ಪ್ರೀತಿಯನ್ನು ಪವಿತ್ರ ಮದುವೆಯ ಬಂಧನಕ್ಕೆ ತಂದ ನವಜೋಡಿಯ ಹೊಸ ಪಯಣ ಸುಖ-ಸಂತೋಷದಿಂದ ಕೂಡಿರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net